KGF Yash : ಕೆಜಿಎಫ್ ಸಿನಿಮಾ ಬರದಿದ್ದರೆ, ಯಶ್ ಅಭಿನಯದ ಈ ಮೂರು ಸಿನಿಮಾ ತೆರೆಗೆ ಬರ್ತಿತ್ತು! ಯಾವುದೆಲ್ಲ?
KGF Yash : ಇಡೀ ದೇಶವನ್ನೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಚಿತ್ರವೇ ಕೆಜಿಎಫ್( KGF) ಕನ್ನಡ ಚಿತ್ರರಂಗೆ ಹಿಂದೆ ಇದ್ದ ಹೆಸರನ್ನು ಮರಳಿ ತಂದುಕೊಟ್ಟಿತ್ತು ಈ ಚಿತ್ರ. ಕನ್ನಡ ಸಿನೆಮಾದ ಮೇಲೆ ಕಣ್ಣುಹಾಯಿಸುವಂತೆ ಮಾಡಿದ್ದು ಹೊಂಬಾಳೆ ಫಿಲ್ಮ್ಸ್ (Hombale film )ಪ್ರೊಡಕ್ಷನ್( production). ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಸೇರಿ ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ (film production) ಅಡಿಯಲ್ಲಿ ಕೆಜಿಎಫ್ ಚಿತ್ರವನ್ನು ಘೋಷಣೆ ಮಾಡಿದಾಗ ಈ ಚಿತ್ರವು ಬ್ಲಾಕ್ ಬಸ್ಟರ್ ಹಿಟ್ (black baster hit) ಆಗುತ್ತದೆ ಎಂದು ಊಹಿಸಿದ್ದವರೇ ಹೆಚ್ಚು. ಊಹಿಸಿದಂತೆ ಕೆಜಿಎಫ್ (KGF Yash) ಒಂದು ಬ್ರಾಂಡ್ ಆಗಿ ಪ್ಯಾನ್ ಇಂಡಿಯಾ (pan india) ಚಿತ್ರವಾಯಿತು. ಕನ್ನಡದ ಸಿನೆಮಾಗಳು ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ ಎಂದು ತೋರಿಸಿದೆ.
ಭಾರತದಲ್ಲಿ ಕೆಜಿಎಫ್ ಚಾಪ್ಟರ್ 1 (KGF chapter 1 ) ಮೊದಲು ಸಣ್ಣ ಸಣ್ಣ ಹೆಜ್ಜೆಯನ್ನು ಇಟ್ಟು ಬೆಳೆಯುತ್ತಾ ಬಂದು ಭರವಸೆಯೊಂದನ್ನು ಮೂಡಿಸಿತು, ಇದಾದ ಬಳಿಕ ತೆರೆಗೆ ಬಂದ ಕೆಜಿಎಫ್ ಚಾಪ್ಟರ್ 2 (KGF chapter 2) ಐತಿಹಾಸಿಕ ಗೆಲುವನ್ನು ಕಂಡುಕೊಂಡಿತ್ತು. ನಿರ್ದೆಶಕ ಪ್ರಶಾಂತ್ ನೀಲ್ ಅವರಿಗೆ ಬೇರೆ ಬೇರೆ ಸಿನೆಮಾ ಇಂಡಸ್ಟ್ರಿಗಳಲ್ಲಿ ಕೆಲಸ ಮಾಡುವ ಆಫರ್ ದೊರಕಿತು. ಇನ್ನು ರಾಂಕಿಂಗ್ ಸ್ಟಾರ್ ಯಶ್ ಅವರು ನ್ಯಾಷನಲ್ ಸ್ಟಾರ್ (national star) ಆದರು. ಇದಲ್ಲದೆ ಯಶ್ ಅವರಿಗೆ ರಾಕಿ ಭಾಯ್ ಎಂಬ ಮತ್ತೊಂದು ಹೆಸರು ಬಂದಿದೆ.
ಭಾರತದಲ್ಲಿ ಕನ್ನಡ ಸಿನೆಮಾಗಳಿಗೂ ಕೂಡ ಪ್ಯಾನ್ ಇಂಡಿಯಾ (pan india) ಮಟ್ಟದಲ್ಲಿ ಬೇಡಿಕೆ ಇದೆ ಎಂದು ತೋರಿಸಿಕೊಟ್ಟಿದ್ದು ಕೆಜಿಎಫ್ (KGF)ಚಿತ್ರ. ಇದು ಪ್ರತಿ ಕನ್ನಡಿಗರ ಹೆಮ್ಮೆಯ ವಿಷಯವಾಗಿದೆ. ಇನ್ನು ಈ ಚಿತ್ರಕ್ಕಾಗಿ ಯಶ್ ಅವರು ಮೀಸಲಿಟ್ಟಿದ್ದು ಬರೋಬ್ಬರಿ ಏಳು ವರ್ಷಗಳು. 2015 ರಲ್ಲಿ ಘೋಷಣೆಯಾದ ಈ ಚಿತ್ರದ ಚಿತ್ರೀಕರಣವು 2022 ರವರೆಗೆ ನಡೆಯುತ್ತಲೇ ಇತ್ತು.
ಯಶ್ ಅವರ ಕೊನೆಯ ಕಮರ್ಶಿಯಲ್ ಚಿತ್ರವೆಂದರೆ ಅದು ಸಂತು ಸ್ಟೈಟ್ ಫಾರ್ವಡ್, ಇದಾದ ನಂತರ ಅವರು ಕೆಜಿಎಫ್ 1 ಮತ್ತು 2 (KGF ) ರಲ್ಲಿ ಬ್ಯೂಸಿಯಾದ ನಂತರ ಯಾವುದೇ ಚಿತ್ರಕ್ಕೂ ಕಾಲಿಡಲಿಲ್ಲ ಕೇವಲ ಕೆಜಿಎಫ್ ಚಿತ್ರದಲ್ಲಿ ನಟನೆ ಮುಂದುವರೆಸಿದರು. ಇದೀಗ ರಾಕಿ ಭಾಯ್ ಕೆಜಿಎಫ್ ಚಾಪ್ಟರ್ 1 (KGF chapter 1) ಮಾತ್ರ ಮಾಡಿ ಮುಗಿಸಿದ್ದರೆ, ಯಾವ ಚಿತ್ರದಲ್ಲಿ ಬ್ಯುಸಿ ಆಗುತ್ತಿದ್ದರು ಎಂಬ ಚರ್ಚೆ ಕೇಳಿ ಬರುತ್ತಿದೆ.
ಕೆಜಿಎಫ್ ಇಲ್ಲದಿದ್ದಲ್ಲಿ ರಾಕಿಂಗ್ ಸ್ಟಾರ್ ಅವರು ಎ ಹರ್ಷ ಅವರ ರಾಣಾ ಎಂಬ ಚಿತ್ರವು ತೆರೆಗೆ ಬರುತ್ತಿತ್ತು. ಈ ಹಿಂದೆ ಸಂತು ಸ್ಟೈಟ್ ಫಾರ್ವಡ್ ಬಳಿಕ ಯಶ್ ಅವರು ರಾಣಾ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಇತ್ತು.
ನಂತರ ನಿರ್ದೆಶಕ ಅನಿಲ್ ಕುಮಾರ್ ಜೊತೆ ಕಿರಾತಕ 2 ಚಿತ್ರದಲ್ಲಿ ಯಶ್ ನಟಿಸಬೇಕಿತ್ತು, ಈ ಚಿತ್ರಕ್ಕೆ ಯಶ್ ಅವರು ಹಣವನ್ನು ಕೂಡ ಪಡೆದಿದ್ದರು ಎಂಬ ಮಾತು ಕೇಳಿಬಂದಿತ್ತು. ಎಷ್ಟೇ ಅಲ್ಲದೆ ಯಶ್ ಅವರು ಸಂತೋಷ್ ಆನಂದ್ರಾಮ್ ಜೊತೆಗೂ ಚಿತ್ರ ಮಾಡುವುದು ಪಕ್ಕವಾಗಿತ್ತು. ರಾಮಾಚಾರಿ ಚಿತ್ರ ಹಿಟ್ (hit) ನೀಡಿದಂತೆ ಮತ್ತೊಂದು ಚಿತ್ರ ಮಾಡಿ ಬ್ಲಾಕ್ ಬಸ್ಟರ್ ಹಿಟ್ ಕೊಡುತ್ತಿದ್ದದ್ದು ಸತ್ಯ. ಆದರೆ ಯಶ್ ಅವರು ಕೆಜಿಎಫ್ (KGF) ಚಿತ್ರವನ್ನು ಘೋಷಣೆ ಮಾಡಿದರು.
ಒಟ್ಟಿನಲ್ಲಿ ಕೆಜಿಎಫ್ (KGF) ಚಿತ್ರದಿಂದಾಗಿ ಕನ್ನಡ ಚಿತ್ರರಂಗ ಉನ್ನತ ಮಟ್ಟಕ್ಕೆ ಏರಿತ್ತು, ಆದರೆ ಯಶ್ ಅಭಿಮಾನಿಗಳು ಮಾತ್ರ ರಾಕಿ ಭಾಯ್ ಅವರ ಸಾಲುಗಟ್ಟಲೆ ಚಿತ್ರವನ್ನು ಮಿಸ್ ಮಾಡಿಕೊಂಡರು. ಇದೀಗ ಯಶ್ ಅವರ ಮುಂದಿನ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.