Election : ಮತದಾರರಿಗೆ ಮುಖ್ಯವಾದ ಮಾಹಿತಿ! ಗುರುತಿನ ಚೀಟಿ ಇಲ್ಲದಿದ್ದರೆ ಈ 12 ದಾಖಲೆಗಳಲ್ಲಿ ಒಂದು ಸಾಕು!

Election :  ಚುನಾವಣೆಯ(Election 2023) ಕಾವು ಎಲ್ಲೆಡೆ ರಂಗೇರಿದ್ದು ರಾಜಕೀಯ ಪಕ್ಷಗಳು ಜನರ ಮನವೊಲಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯು ಮೇ 10 ರಂದು ನಿಗದಿಯಾಗಿದ್ದು, ಮೇ 13 ರಂದು ರಾಜಕೀಯ ಸಮರದ ಚುನಾವಣೆಯ ತೀರ್ಪು( Election Result) ಹೊರ ಬೀಳಲಿದೆ. ಈ ನಡುವೆ ಚುನಾವಣೆಯಲ್ಲಿ ಮತ ಚಲಾಯಿಸುವ ಅನೇಕರಿಗೆ ತಮ್ಮ ಮತದಾರರ ಗುರುತಿನ ಚೀಟಿಗಳ ಭೌತಿಕ ಪ್ರತಿಯಿಲ್ಲ ಏನು ಮಾಡೋದು ಎಂದು ಚಿಂತಿತರಾಗಿದ್ದರೆ, ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ಮತದಾರರ ಗುರುತಿನ ಚೀಟಿಗಳು(Voter ID) ಆದ್ಯತೆಯ ಸಂದರ್ಭದಲ್ಲಿ ಮತ ಚಲಾಯಿಸಲು ಅವಶ್ಯಕತೆಯಿಲ್ಲದೆ ಹೋದರು ಕೂಡ, ಮಾನ್ಯ ID ಪುರಾವೆಗಳಾಗಿ ಕಾರ್ಯನಿರ್ವಹಿಸುವ ಕೆಲವು ಪರ್ಯಾಯ ದಾಖಲೆಗಳು ಹೀಗಿವೆ. ಮತದಾರರ ಗುರುತಿನ ಚೀಟಿ ಇಲ್ಲ ಎಂಬ ಸಂದರ್ಭದಲ್ಲಿ ಮತ ಚಲಾಯಿಸಲು ಬೇರೆ ದಾಖಲೆಗಳನ್ನು ಬಳಕೆ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.

ಮತ ಚಲಾಯಿಸಲು ಹೊರಡುವ ಮೊದಲು, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಲಾಗಿದೆಯೇ ಎಂಬ ವಿಚಾರ ಮೊದಲು ಗಮನಿಸಬೇಕು. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಲು ಮತದಾರರ ಗುರುತಿನ ಚೀಟಿ ಸಂಖ್ಯೆ ಅಥವಾ EPIC ಸಂಖ್ಯೆ ಅವಶ್ಯಕತೆಯಿಲ್ಲ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದು ಖಾತ್ರಿ ಯಾದ ಮೇಲೆ, ಮತದಾರರ ಗುರುತಿನ ಚೀಟಿಗೆ ಪರ್ಯಾಯವಾಗಿ ನೀವು ಕೆಲವು ಅಧಿಕೃತ ದಾಖಲೆಗಳನ್ನು ಉಪಯೋಗಿಸಬಹುದು.

ಮಾನ್ಯ ID ಪುರಾವೆಗಳಾಗಿ ಕಾರ್ಯನಿರ್ವಹಿಸುವ ಪರ್ಯಾಯ ದಾಖಲೆಗಳ ಪಟ್ಟಿ ಹೀಗಿವೆ:
#ಆಧಾರ್ ಕಾರ್ಡ್(Aadhar Card)
#MGNREGA ಜಾಬ್ ಕಾರ್ಡ್
# ಪ್ಯಾನ್ ಕಾರ್ಡ್( Pan Card)
# ಕಾರ್ಮಿಕ ಸಚಿವಾಲಯದ ಯೋಜನೆಯಡಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್
# ಛಾಯಾಚಿತ್ರಗಳ ಜೊತೆಗೆ ಬ್ಯಾಂಕ್ ಇಲ್ಲವೇ ಪೋಸ್ಟ್ ಆಫೀಸ್ ಪಾಸ್‌ಬುಕ್‌ಗಳು(Bank or Post Office Passbook)
# ಪಾಸ್ಪೋರ್ಟ್ ಫೋಟೋದೊಂದಿಗೆ ಇರುವ ಪಿಂಚಣಿ ದಾಖಲೆಗಳು
# NPR ಅಡಿಯಲ್ಲಿ RGI ನೀಡಿದ ಸ್ಮಾರ್ಟ್ ಕಾರ್ಡ್
# ಚಾಲನಾ ಪರವಾನಗಿ
# ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ನೀಡುವ ವಿಶಿಷ್ಟ ಅಂಗವೈಕಲ್ಯ ID (UDID).
# ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಅಥವಾ ಸಾರ್ವಜನಿಕ ವಲಯದ ಉದ್ಯಮಗಳು, ಸಾರ್ವಜನಿಕ ಸೀಮಿತ ಕಂಪನಿಗಳು ನೀಡಿದ ಸೇವಾ ಗುರುತಿನ ಚೀಟಿಗಳು.
ಮೇಲೆ ತಿಳಿಸಿದ ದಾಖಲೆಗಳನ್ನು ಮತದಾರರ ಚೀಟಿಯ ಬದಲಿಗೆ ಬಳಕೆ ಮಾಡಬಹುದು.

 

ಇದನ್ನು ಓದಿ : Pushpa The Rule: ಪುಷ್ಪ 2 ಟೀಸರ್‌ನಲ್ಲಿ ಅತಿದೊಡ್ಡ Clue ನೀಡಿದ ಡೈರೆಕ್ಟರ್‌!

1 Comment
  1. Can you be more specific about the content of your article? After reading it, I still have some doubts. Hope you can help me.

Leave A Reply

Your email address will not be published.