BJP-Congress: BJP, ಕಾಂಗ್ರೆಸ್ ಬೆಂಬಲಿಗರ ನಡುವೆ ಹೊಡೆದಾಟ : ಓರ್ವನ 3 ಬೆರಳು ಕಟ್

BJP-Congress : ರಾಯಚೂರು : ನಗರದ ಅಂದ್ರೂನ್ ಖಿಲ್ಲಾ ಏರಿಯಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ (BJP-Congress) ಬೆಂಬಲಿಗರ ನಡುವೆ ಮಾತಿನ ಚಕಮಕಿ ತೀವ್ರಗೊಂಡು ಹೊಡೆದಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ರಾಯಚೂರು ಜಿಲ್ಲೆಯಲ್ಲಿ ಮುಂದಿನ ಚುನಾವಣೆ ವಿಚಾರವಾಗಿ ರಾಜಕೀಯ ನಾಯಕರ ಪರ ವಾದ ಮಂಡಿಸುತ್ತಾ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಬೆಂಬಲಿಗರು ಮಾತಿನ ಚಕಮಕಿ ಜೋರಾಗಿದೆ . ಬಿಜೆಪಿ ಶಾಸಕ ಡಾ. ಶಿವರಾಜ್ ಪಾಟೀಲ್ ಬೆಂಬಲಿಗರ ಆರೀಫ್ ಮತ್ತು ಕಾರ್ಪೋರೇಟರ್ ತಿಮ್ಮಾರೆಡ್ಡಿ ಆಪ್ತ ಮೊಹಮ್ಮದ್ ನಡುವೆ ಗಲಾಟೆ ನಡೆದಿದೆ. ಆರಿಫ್ ಹಾಗೂ ಮೊಹಮ್ಮದ್ ವಾಸಿಮ್ ಗಲಾಟೆ ಮಾಡಿದ ಕಾರ್ಯಕರ್ತರು ಎಂದು ತಿಳಿಯಲಾಗಿದೆ. ಮೊಹಮ್ಮದ್ ವಾಸಿಮ್ ಕಾಂಗ್ರೆಸ್ ಕೌನ್ಸಿಲರ್ ತಿಮ್ಮಾ ರೆಡ್ಡಿಆಪ್ತರಾಗಿದ್ದರು. ಘಟನೆಯಲ್ಲಿ ಇಬ್ಬರಿಗೂ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಬಿಜೆಪಿ ಮುಖಂಡ ಆರೀಫ್‌ನ ಮೂರು ಬೆರಳುಗಳು ಕಟ್ ಆಗಿದೆ ಎಂದು ತಿಳಿದು ಬಂದಿದೆ.