Halal Certification : ಹೊಸ ಹಲಾಲ್ , ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ!ಹೊಸ ನಿಯಮ ಇಲ್ಲಿದೆ!

Halal Certification: ವಿದೇಶಗಳಲ್ಲಿ ಹಲಾಲ್ ಉತ್ಪನ್ನಗಳಿಗೆ (Halal Products) ಭಾರೀ ಡಿಮ್ಯಾಂಡ್ ಇದ್ದು, ಭಾರತದಿಂದ ಈ ದೇಶಗಳಿಗೆ ರಫ್ತಾಗುವ ಉತ್ಪನ್ನಗಳು ಬಹುತೇಕ ಹಲಾಲ್ ಪ್ರಮಾಣಪತ್ರ (Halal Certification) ಒಳಗೊಂಡಿರುತ್ತವೆ. ಆದರೆ , ಹಲಾಲ್ ಪ್ರಮಾಣಪತ್ರದಲ್ಲಿ ಭಾರತದಲ್ಲಿ ನಿರ್ದಿಷ್ಟ ನಿಯಮಾವಳಿಗಳಿರಲಿಲ್ಲ. ಸದ್ಯ, ಈ ಕುರಿತು ಕೇಂದ್ರ ಗಮನ ಹರಿಸಿದ್ದು, ವಿದೇಶಗಳಿಗೆ ರಫ್ತಾಗುವ ಮಾಂಸ ಉತ್ಪನ್ನಗಳಿಗೆ (Central Govt New Halal Guidelines)ಹಲಾಲ್ ಸರ್ಟಿಫಿಕೇಶನ್ ಅನ್ನು ಸರ್ಕಾರ ಸೂಚಿತ ಕೇಂದ್ರಗಳಿಂದಲೇ ಪಡೆಯಬೇಕಾಗುತ್ತದೆ. ಇತ್ತೀಚೆಗೆ ಸರ್ಕಾರ ಹೊಸ ನಿಯಮಾವಳಿಗಳಿರುವ ಅಧಿಸೂಚನೆಯನ್ನು ಹೊರಡಿಸಿದೆ.

ಹಲಾಲ್ ಸರ್ಟಿಫಿಕೇಟ್ ಕೊಡುವ ಸಂಸ್ಥೆಗಳ ಅಕ್ರೆಡಿಶನ್​ಗೆ 6 ತಿಂಗಳ ಕಾಲಾವಕಾಶ ನೀಡಲಾಗಿದೆ. ಈಗ ಹಲವು ಸಂಸ್ಥೆಗಳು ಹಲಾಲ್ ಸರ್ಟಿಫಿಕೇಶನ್ ಒದಗಿಸುತ್ತವೆ. ಇನ್ಮುಂದೆ ಈ ಸಂಸ್ಥೆಗಳು ಎನ್​ಎಬಿಸಿಬಿ (ನ್ಯಾಷನಲ್ ಅಕ್ರೆಡಿಶನ್ ಬೋರ್ಡ್) ಯಿಂದ 6 ತಿಂಗಳ ಒಳಗಾಗಿ ಅಕ್ರೆಡಿಶನ್ ಪಡೆಯಬೇಕಾಗಿದ್ದು, ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಐ–ಸಿಎಎಸ್ (ಇಂಡಿಯನ್ ಕನ್ಫಾರ್ಮಿಟಿ ಅಸೆಸ್ಮೆಂಟ್ ಸ್ಕೀಮ್) ಅಡಿಯಲ್ಲಿ ಈ ಹಲಾಲ್ ಸಂಸ್ಥೆಗಳು ಹಲಾಲ್ ಉತ್ಪಾದನಾ ಕೇಂದ್ರಗಳಿಗೆ ಪರವಾನಿಗೆ ಒದಗಿಸುತ್ತವೆ. ಈ ಕೇಂದ್ರಗಳಲ್ಲಿ ತಯಾರಾಗುವ ಉತ್ಪನ್ನಗಳಿಗೆ ಮಾತ್ರ ಹಲಾಲ್ ಸರ್ಟಿಫಿಕೇಶನ್ ಲಭ್ಯವಾಗುತ್ತದೆ ಎಂಬ ನೋಟಿಫಿಕೇಶನ್​ ಮೂಲಕ ತಿಳಿಯುತ್ತದೆ.

ವಿದೇಶಗಳಿಗೆ ರಫ್ತಾಗುವ ಮಾಂಸ ಉತ್ಪನ್ನಗಳಿಗೆ ಹಲಾಲ್ ಸರ್ಟಿಫಿಕೇಶನ್ ಅನ್ನು ಸರ್ಕಾರ ಸೂಚಿತ ಕೇಂದ್ರಗಳಿಂದಲೇ ಪಡೆದುಕೊಳ್ಳಬೇಕಾಗಿದ್ದು, ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ (Quality Council of India) ಮಂಡಳಿಯ ಅಕ್ರೆಡಿಶನ್ ಪಡೆದ ಸಂಸ್ಥೆಯಿಂದ ಪ್ರಮಾಣಪತ್ರ ಒಳಗೊಂಡಿರುವ ಪ್ಯಾಕೇಜಿಂಗ್ ಕೇಂದ್ರಗಳಲ್ಲಿ ಮಾಂಸ ಉತ್ಪನ್ನಗಳನ್ನು ಸಿದ್ದಪಡಿಸಿ ಪ್ರೋಸಸಿಂಗ್ ಮಾಡಿದ ಬಳಿಕ ಪ್ಯಾಕ್ ಮಾಡಬೇಕು. ಹೀಗೆ ಮಾಡಿದ ಬಳಿಕವಷ್ಟೇ ಹಲಾಲ್ ಸರ್ಟಿಫಿಕೇಶನ್ ಲಭ್ಯವಾಗುತ್ತದೆ ಎಂದು ಸರ್ಕಾರ ಇತ್ತೀಚೆಗೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ಹೊಸ ನಿಯಮ ಹಲಾಲ್ ಸರ್ಟಿಕೇಶನ್ ಪಡೆಯುವ ಆಹಾರ ಉತ್ಪನ್ನಗಳಿಗೆ ಮಾತ್ರ ಅನ್ವಯವಾಗಲಿದ್ದು, ಇತರ ಉತ್ಪನ್ನಗಳ ರಫ್ತು ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇನ್ನು, ಮಾಂಸ(Meat)ಉತ್ಪನ್ನಗಳಿಗೆ ಹಲಾಲ್ ಸರ್ಟಿಫಿಕೇಶನ್ ಬೇಕೆಂಬ ನಿಯಮಗಳಿಲ್ಲದ ದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡುವ ಸಂದರ್ಭ ಆ ದೇಶದ ಅವಶ್ಯಕತೆಯ ಅನುಸಾರ ಗುಣಮಟ್ಟದ ಉತ್ಪನ್ನಗಳನ್ನು ಕಳುಹಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ.

3 Comments
  1. nimabi says

    Thank you very much for sharing, I learned a lot from your article. Very cool. Thanks. nimabi

  2. 创建Binance账户 says

    Can you be more specific about the content of your article? After reading it, I still have some doubts. Hope you can help me.

  3. create a binance account says

    Thanks for sharing. I read many of your blog posts, cool, your blog is very good.

Leave A Reply

Your email address will not be published.