Bengaluru Mysuru Expressway : ಇತ್ತ ಗಮನಿಸಿ ಜನರೇ! ಬೆಂಗಳೂರು – ಮೈಸೂರು ಎಕ್ಸಪ್ರೆಸ್​ವೇ ಟೋಲ್​ ದರ ಇಂತಿವೆ!

Bengaluru Mysuru Expressway :
ಈಗಾಗಲೇ ಬೆಂಗಳೂರು – ಮೈಸೂರು ಎಕ್ಸಪ್ರೆಸ್​ವೇ ಟೋಲ್​ ದರ ಹೆಚ್ಚಳದ ಬಗ್ಗೆ ಹಲವಾರು ವಿವಾದಗಳು ಮತ್ತು ಸಾರ್ವಜನಿಕರಿಂದ ಭಾರೀ ವಿರೋಧದ ನಡುವೆಯೂ ಬೆಂಗಳೂರು ಮೈಸೂರು ಹೊಸ ಹೆದ್ದಾರಿಯಲ್ಲಿ (Bengaluru Mysuru Expressway) ಏಪ್ರಿಲ್ 1 ರಿಂದ ಹೊಸ ಟೋಲ್ ದರ ಜಾರಿಗೆ ಬಂದಿದೆ . ಈ ಕುರಿತು ಟೋಲ್ ಗೇಟ್ ಬಳಿ ಬೋರ್ಡ್ ಅಳವಡಿಸಲಾಗಿದೆ.

ಹೊಸ ಹೆದ್ದಾರಿಯಲ್ಲಿ ಪರಿಷ್ಕೃತ ಟೋಲ್ ದರದ ಬಗ್ಗೆ ಇಲ್ಲಿ ತಿಳಿಸಲಾಗಿದೆ:
ಕಾರು/ವ್ಯಾನ್/ಜೀಪ್ ಗಳಿಗೆ ಏಕಮುಖ ಸಂಚಾರ 165 ರೂ. ಆಗಿದೆ. ಅಂದರೆ 30 ರೂ. ಹೆಚ್ಚಳವಾಗಿದೆ. ದ್ವಿಮುಖ ಸಂಚಾರಕ್ಕೆ 250 ರೂ. ಆಗಿದ್ದು ಹಿಂದಿಗಿಂತ 45ರೂ. ಹೆಚ್ಚಳವಾಗಿದೆ.

ಲಘು ವಾಹನಗಳು/ಮಿನಿ ಬಸ್​ಗೆ ಟೋಲ್ 270 ರೂ. ಆಗಿದ್ದು 50 ರೂ. ಹೆಚ್ಚಳವಾಗಿದೆ. ದ್ವಿಮುಖ ಸಂಚಾರ ಟೋಲ್ ದರ 405 ರೂ. ಆಗಿದ್ದು 75 ರೂ. ಹೆಚ್ಚಳವಾಗಿದೆ.

ಟ್ರಕ್/ ಬಸ್/ಎರಡು ಆಕ್ಸೆಲ್ ವಾಹನದ ಟೋಲ್ ದರ 565 ರೂ. ಆಗಿದ್ದು165 ರೂ. ಹೆಚ್ಚಳವಾಗಿದೆ. ದ್ವಿಮುಖ ಸಂಚಾರಕ್ಕೆ 850 ರೂ. ಆಗಿದ್ದು160 ರೂ. ಹೆಚ್ಚಳವಾಗಿದೆ.

ತ್ರಿ ಆಕ್ಸೆಲ್ ವಾಣಿಜ್ಯ ವಾಹನಗಳು ಏಕಮುಖ ಸಂಚಾರ 615 ರೂ. ಆಗಿದ್ದು 115ರೂ ಹೆಚ್ಚಳವಾಗಿದೆ. ದ್ವಿ ಮುಖಸಂಚಾರ – 925 ರೂ. ಆಗಿದ್ದು 225 ರೂ. ಹೆಚ್ಚಳವಾಗಿದೆ.

ಭಾರೀ ಕಟ್ಟಡ ನಿರ್ಮಾಣ ವಾಹನಗಳಿಗೆ/ಅರ್ಥ್ ಮೂವರ್ಸ್ /4-6 ಆಕ್ಸೆಲ್ ವಾಹನಗಳು 885 ರೂ. ಆಗಿದ್ದು 165 ರೂ. ಹೆಚ್ಚಳವಾಗಿದೆ. ದ್ವಿಮುಖ ಸಂಚಾರಕ್ಕೆ 1,330 ರೂ.ಟೋಲ್ ಇದ್ದು 250 ರೂ. ಹೆಚ್ಚಳವಾಗಿದೆ.

7 ಅಥವಾ ಅದಕ್ಕಿಂತ ಹೆಚ್ಚಿನ ಎಕ್ಸೆಲ್ ವಾಹನಗಳಿಗೆ ಏಕಮುಖ ಸಂಚಾರಕ್ಕೆ 1,080 ರೂ. ಟೋಲ್ ಇದ್ದು 200 ರೂ. ಹೆಚ್ಚಳವಾಗಿದೆ. ಇನ್ನು ದ್ವಿಮುಖ ಸಂಚಾರಕ್ಕೆ 1,620 ರೂ. ಟೋಲ್ ಇದ್ದು 305 ರೂ. ಹೆಚ್ಚಳವಾಗಿದೆ.

ವಾಹನ ಸವಾರರಿಗೆ ಈ ಟೋಲ್ ದರ ಅಪಾರ ಹೊರೆಯಾಗಿದೆ. ಆದರೆ ಹೊಸ ಟೋಲ್ ದರದ ಕುರಿತು ಮಾಹಿತಿ ನೀಡಬೇಕಿದ್ದ ಮೈಸೂರು ಬೆಂಗಳೂರು ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಶ್ರೀಧರ್ ನಾಪತ್ತೆಯಾಗಿದ್ದು, ಈ ಕುರಿತು ವಾಹನ ಸವಾರರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

1 Comment
  1. Your article helped me a lot, is there any more related content? Thanks! https://accounts.binance.com/zh-CN/register?ref=VDVEQ78S

Leave A Reply

Your email address will not be published.