Dulari Kher: ‘ನಿನ್ನಂಥ 10 ಜನ್ರಿಗೆ ಬುದ್ದಿ ಕಲಿಸ್ತಾನೆ ಮೋದಿ’ ಎಂದು ಆ ನಟನಿಗೆ ಕ್ಲಾಸ್ ತಗೊಂಡ ಅನುಪಮ್ ಖೇರ್ ತಾಯಿ! ಕಾರಣವೇನು ಗೊತ್ತಾ?
Dulari Kher : ಇತ್ತೀಚಿನ ದಿನಗಳಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿ(PM Modi) ಯವರ ಪದವಿ ಶಿಕ್ಷಣದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ವಿರೋಧ ಪಕ್ಷಗಳು ಮೋದಿ ವಿರುದ್ಧ ಅವರ ಎಜುಕೇಷನ್ ವಿಚಾರವನ್ನು ಬಾಣವಾಗಿ ಪ್ರಯೋಗಿಸುತ್ತಿವೆ. ಆದರೀಗ ಪ್ರಧಾನಿ ನರೇಂದ್ರ ಮೋದಿ ಅವರ ಪದವಿಯನ್ನು ಪ್ರಶ್ನೆ ಮಾಡಿದ್ದ ವ್ಯಕ್ತಿಗಳಿಗೆ ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್(Anupam Kher) ಅವರ ತಾಯಿ ದುಲ್ಹಾರಿ ಖೇರ್(Dulari Kher) ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹೌದು, ಪ್ರಧಾನಿ ನರೇಂದ್ರ ಮೋದಿ ಡಿಗ್ರಿ ಪ್ರಶ್ನೆ ಮಾಡಿದವರಿಗೆ ಅನುಪಮ್ ಖೇರ್ ಅವರ ತಾಯಿ ಖಡಕ್ ಆಗಿ ಉತ್ತರ ನೀಡಿದ್ದಾರೆ. ‘ನಿನ್ನಂಥ 10 ಜನರಿಗೆ ಬುದ್ಧಿ ಕಲಿಸೋಕೆ ಇರೋದು ಮೋದಿ. ಶಿಕ್ಷಣಕ್ಕಿಂತ ಹೆಚ್ಚಾಗಿ ಬುದ್ಧಿ ಪ್ರಮುಖ’ ಎಂದು ಅವರು ಹೇಳಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಅಂದಹಾಗೆ 2016ರಲ್ಲಿ ಅರವಿಂದ್ ಕೇಜ್ರಿವಾಲ್(Arvind Kejriwal), ಪ್ರಧಾನಿ ನರೇಂದ್ರ ಮೋದಿ ಅವರು ಪಡೆದುಕೊಂಡಿರುವ ಬಿಎ ಪದವಿಯ ಮಾಹಿತಿ ಬೇಕು ಎಂದು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. ಈ ವಿಚಾರವಾಗಿ ಕೇಂದ್ರ ಮಾಹಿತಿ ಆಯೋಗ, ಗುಜರಾತ್ ವಿಶ್ವವಿದ್ಯಾಲಯಕ್ಕೆ ಮೋದಿ ಅವರ ಡಿಗ್ರಿ ಮಾಹಿತಿಯನ್ನು ಅರವಿಂದ್ ಕೇಜ್ರಿವಾಲ್‌ಗೆ ನೀಡುವಂತೆ ಹೇಳಿತ್ತು. ಇದ ವಿರುದ್ಧ ಗುಜರಾತ್ ವಿವಿ, ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ವರ್ಷದ ಮಾರ್ಚ್ 31 ರಂದು ತೀರ್ಪು ನೀಡಿದ ಗುಜರಾತ್ ಹೈಕೋರ್ಟ್, ಕೇಂದ್ರ ಮಾಹಿತಿ ಆಯೋಗದ ಆದೇಶವನ್ನು ರದ್ದು ಮಾಡಿದ್ದಲ್ಲದೆ, ಮೋದಿ ಡಿಗ್ರಿ ಮಾಹಿತಿ ಕೇಳಿದ್ದ ಅರವಿಂದ್ ಕೇಜ್ರಿವಾಲ್‌ಗೆ 25 ಸಾವಿರ ರೂಪಾಯಿ ದಂಡ ವಿಧಿಸಿತ್ತು. ಅದರ ಬೆನ್ನಲ್ಲಿಯೇ ಪ್ರಧಾನಿ ಮೋದಿಯ ಡಿಗ್ರಿ ಕುರಿತಾಗಿ ಮತ್ತಷ್ಟು ಚರ್ಚೆಗಳು ಆರಂಭವಾಗಿದೆ.
ಈ ನಡುವೆ ಏಪ್ರಿಲ್ 2 ರಂದು ಮತ್ತೊಂದು ಸುತ್ತಿನ ಆರೋಪವನ್ನು ಮಾಡಿದ್ದ ಆಮ್ ಆದ್ಮಿ ಪಾರ್ಟಿ, ಹಾಗೇನಾದರೂ ಪ್ರಧಾನಿ ಮೋದಿ ಅವರ ಡಿಗ್ರಿಯ ಬಗ್ಗೆ ತನಿಖೆ ಮಾಡಿದರೆ, ಅದು ನಕಲಿ ಆಗಿರುವುದು ಖಂಡಿತಾ ಎಂದು ಹೇಳಿದ್ದಾರೆ. ಈ ಕುರಿತು ನಟ ಅನುಪಮ್ ಖೇರ್ ಅವರ ತಾಯಿಯ ರಿಯಾಕ್ಷನ್ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಅನುಪಮ್ ಖೇರ್ ಸಾಮಾನ್ಯವಾಗಿ ತಮ್ಮ ತಾಯಿಯ ತಮಾಷೆಯ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡತ್ತಲೇ ಇರುತ್ತಾರೆ. ತಾಯಿಗೆ ಪ್ರಸ್ತುತ ಚರ್ಚೆಯಲ್ಲಿರುವ ಕೆಲವೊಂದು ವಿಚಾರಗಳ ಬಗ್ಗೆ ಪ್ರಶ್ನೆ ಮಾಡಿ ಅವರ ಮುಕ್ತ ಅಭಿಪ್ರಾಯವನ್ನು ಶೇರ್ ಮಾಡಿಕೊಳ್ಳುತ್ತಾರೆ.
ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಡಿಗ್ರಿ ಬಗ್ಗೆ ಇತ್ತೀಚೆಗೆ ಬಹಳ ಚರ್ಚೆ ಆಗುತ್ತಿದೆಯಲ್ಲ ಎಂದು ತಾಯಿ ದುಲ್ಹಾರಿ ಅವರಿಗೆ ರಾಜ್ ಖೇರ್ (ಸಹೋದರ) ಕೇಳಿದ್ದೇ ತಡ ಅವರ ಖಡಕ್ ಉತ್ತರ ಕೇಳಿ ಶಾಕ್ ಆಗಿದ್ದಾರೆ. ಮೋದಿ ಶಿಕ್ಷಿತನಲ್ಲ ಎಂದು ಕೆಲವರು ಹೇಳುತ್ತಿದ್ದಾರಲ್ಲ ಎನ್ನುವ ಪ್ರಶ್ನೆಗೆ, ‘ಹಾಗಿದ್ದರೆ ನೀನು ಹೋಗಿ ಅವರಿಗೆ ಕಲಿಸು. ನಿನ್ನಂಥ 10 ಜನ್ರಿಗೆ ಬುದ್ಧಿ ಕಲಿಸ್ತಾನೆ ಮೋದಿ. ಅವರು ಎಷ್ಟೆಲ್ಲಾ ಕೆಲಸ ಮಾಡ್ತಿದ್ದಾರೆ. ಸುಖಾಸುಮ್ಮನೆ ಕೆಲಸ ಇಲ್ಲದೆ ಕುಳಿತವರೆಲ್ಲ, ಮೋದಿಗೆ ಹೆಚ್ಚು ಕಲಿತವನಲ್ಲ ಎನ್ನುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರಿಗೂ ಬುದ್ಧಿಯೇ ಇಲ್ಲ, ಆದ್ದರಿಂದ ಅಧ್ಯಯನಕ್ಕಿಂತ ಬುದ್ದಿ ಹೆಚ್ಚು ಮುಖ್ಯ’ ಎಂದು ಹೇಳಿದ್ದಾರೆ.
ಇನ್ನು ಅನುಪಮ್ ಖೇರ್ ಅವರಂತೆ ಅವರ ತಾಯಿ ದುಲಾರಿ ಕೂಡ ಪ್ರಧಾನಿ ಮೋದಿ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ. ಒಮ್ಮೆ ಅನುಪಮ್ ಖೇರ್ ಅವರ ತಾಯಿ ದುಲಾರಿ ಅವರು ಪ್ರಧಾನಿ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಕ್ಕೆ, ಮೋದಿ ಅವರಿಗೂ ಧನ್ಯವಾದ ಸಲ್ಲಿಸಿದ್ದರು. ಕಳೆದ ವರ್ಷ ಜನವರಿ 26 ರಂದು, ಅನುಪಮ್ ಖೇರ್ ಅವರು ಗಣರಾಜ್ಯೋತ್ಸವದ ಪರೇಡ್ ವೀಕ್ಷಿಸಿದ ನಂತರ ಅವರ ತಾಯಿ ದುಲ್ಹಾರಿಗೆ ಮೋದಿಯನ್ನು ಆಶೀರ್ವದಿಸಿದ ವೀಡಿಯೊವನ್ನು ಹಂಚಿಕೊಂಡರು ಮತ್ತು ಅವರು ಮತ್ತೆ ಗೆಲ್ಲುತ್ತಾರೆ ಎಂದು ಹೇಳಿದ್ದರು.
माताश्री दुलारी का प्रधानमंत्री @narendramodi जी की पढ़ाई पर जानबूझकर उठते बेवक़ूफ़ाना सवालो का सटीक जवाब।जय हो।😂👏😎 #DulariRocks pic.twitter.com/PitXGW20Gp
— Anupam Kher (@AnupamPKher) April 7, 2023