Marriage DJ Sound : ಮದುವೆ ಮನೆಯಲ್ಲಿ ಡಿಜೆ ಕ್ಯಾನ್ಸಲ್ ಮಾಡಿದ ಪೊಲೀಸ್!! ಆದರೆ ವಧು ವರ ಸೇರಿ ಏನು ಮಾಡಿದ್ರು ನೀವೇ ನೋಡಿ!

Marriage DJ sound : ಮದುವೆ ಮನೆ (Marriage) ಅಂದ್ರೆ ಅದೊಂದು ರೀತಿಯ ಸಂತೋಷ ಸಂಭ್ರಮದ ವಾತಾವರಣ ಅಂತಲೇ ಹೇಳಬಹುದು. ಹೊಸ ಜೀವನಕ್ಕೆ ಪಾದಾರ್ಪಣೆ ಮಾಡುವ ಸಂಭ್ರಮದಲ್ಲಿ ಕಾತುರರಾಗಿರುತ್ತಾರೆ ವಧು ಮತ್ತು ವರರು. ಅದರಲ್ಲೂ ಒಂದು ಮದುವೆ ಸುಸೂತ್ರವಾಗಿ ನಡೆಯುವ ಮುನ್ನ ಸಾವಿರಾರು ವಿಘ್ನಗಳಂತೆ. ಹೌದು ಮದುವೆ ಯಾವ ಕ್ಷಣದಲ್ಲಿ ಯಾವ ಕಾರಣಕ್ಕೆ ನಿಲ್ಲಬಹುದು ಎಂಬುದು ಊಹಿಸಲು ಸಹ ಸಾಧ್ಯ ಇಲ್ಲ. ಅದೇ ರೀತಿ ಇಲ್ಲೊಂದು ಮದುವೆಯಲ್ಲಿ ವಿಚಿತ್ರ ಸಂಗತಿ ನಡೆದಿದೆ.

ಮುಖ್ಯವಾಗಿ ಮದುವೆಯನ್ನು ವಿಶೇಷವಾಗಿಸಲು ಪ್ರತಿಯೊಬ್ಬರೂ ಪ್ರಯತ್ನಿಸುತ್ತಾರೆ. ಅದ್ದೂರಿಯಾಗಿ ಸ್ಪೆಷಲ್ ಡೆಕೊರೇಶನ್, ಸಾಂಗ್ಸ್, ಡ್ರೆಸ್, ಪಾರ್ಟಿ
ಎಲ್ಲವನ್ನೂ ಆರೇಂಜ್ ಮಾಡುತ್ತಾರೆ .
ವೆಡ್ಡಿಂಗ್ ಡೇ ಎಂಬುದು ಎಲ್ಲರ ಪಾಲಿಗೆ
ಜೀವನದಲ್ಲೇ ದಿ ಬಿಗ್ ಡೇ. ಹೀಗಾಗಿಯೇ ಈ
ದಿನ ಯಾವತ್ತಿಗೂ ಮೆಮೊರೆಬಲ್
ಆಗಿರಬೇಕೆಂದು ಫೋಟೋ, ವೀಡಿಯೋ
ಮಾಡಿಕೊಳ್ತಾರೆ. ಮಾತ್ರವಲ್ಲ ಮದುವೆ
ದಿನವನ್ನು ವಿಶೇಷವಾಗಿಸಲು ಸ್ಪೆಷಲ್ ಥೀಮ್,
ಕಾನ್ಸೆಪ್ಟ್ಗಳನ್ನು ಇಟ್ಟುಕೊಳ್ತಾರೆ.

ಇವೆಲ್ಲದರ ಹೊರತು ಅಬ್ಬರದ ಡಿಜೆ ಸೌಂಡ್ (Marriage DJ sound) ಇಲ್ಲಾಂದ್ರೆ ಆಗುತ್ತಾ? ಡಿಜೆ ಮ್ಯೂಸಿಕ್, ಸಾಂಗ್, ಡ್ಯಾನ್ಸ್‌ನಿಂದಾನೇ ಮದುವೆ ಮನೆ ಕಳೆ ಹೆಚ್ಚುತ್ತೆ. ಹೀಗಾಗಿಯೇ ಇತ್ತಿಚಿಗೆ ಎಲ್ಲರೂ ಮದುವೆ ಮನೆಯಲ್ಲಿ ಡಿಜೆ ಹಾಕ್ತಾರೆ. ಖುಷಿಯಾಗಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡ್ತಾರೆ. ಆದ್ರೆ ಇಲ್ಲೊಂದು ಮದುವೆ ಮನೆಯಲ್ಲಿ ಮಾತ್ರ ಡಿಜೆ ಕಾರಣಕ್ಕೆ ವಧು- ವರರು (Bride-groom) ಠಾಣೆಯಲ್ಲಿ ಹೋಗಿ ಧರಣಿ ಕುಳಿತಿದ್ದಾರೆ.

ಮಧ್ಯಪ್ರದೇಶದ ರತ್ನಾಮ್ ಜಿಲ್ಲೆಯಲ್ಲಿ ಮದುವೆಯಲ್ಲಿ ಡಿಜೆ ಸಂಗೀತವನ್ನು ಪೊಲೀಸರು ತಡೆದಿದ್ದಕ್ಕಾಗಿ ದಂಪತಿಗಳು (Couples) ಠಾಣೆಯ ಎದುರು ಧರಣಿ (Protest) ಕುಳಿತಿದ್ದಾರೆ . ಇಬ್ಬರು ಪೊಲೀಸರು ಔದ್ಯೋಗಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದುವೆ ಸ್ಥಳಕ್ಕೆ ಆಗಮಿಸಿ ಸಂಗೀತ ನುಡಿಸುವುದನ್ನು ನಿಲ್ಲಿಸುವಂತೆ ಡಿಜೆಗೆ ಕೇಳಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ ಪ್ರತ್ಯಕ್ಷದರ್ಶಿಗಳ ಪ್ರಕಾರ, ಸ್ಥಳದಲ್ಲಿ ಪೊಲೀಸರು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ದಂಪತಿಗಳು ತಮ್ಮ ಕುಟುಂಬ ಸದಸ್ಯರೊಂದಿಗೆ ಪೊಲೀಸ್ ಠಾಣೆಗೆ ತಲುಪಿ ಸುಮಾರು ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಮಾತನಾಡಿದ ವರ ಅಜಯ್ ಸೋಲಂಕಿ ಅವರು , ಪೊಲೀಸರು ತಮ್ಮ ಕುಟುಂಬದ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಅವರ ಮದುವೆಯನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು.

ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವವರೆಗೂ
ದಂಪತಿಗಳು ಮದುವೆಯಾಗಲು ನಿರಾಕರಿಸಿದ್ದರು. ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಮದುವೆ ಮಂಟಪಕ್ಕೆ ಮರಳಿದರು ಎಂದು ಪೊಲೀಸ್ ಠಾಣೆ ಪ್ರಭಾರಿ ರಾಜೇಂದ್ರ ವರ್ಮಾ ತಿಳಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ವಧು-ವರರು ಪ್ರತಿಭಟನೆಗೆ ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Honda Alert : ಹೋಂಡಾ ಕಂಪನಿಯ ಈ ಬೈಕ್ ನಿಮ್ಮಲ್ಲಿದ್ದರೆ ಎಚ್ಚರಿಕೆ! ಕಂಪನಿಯಿಂದ ಅಲರ್ಟ್ ಜಾರಿ!!

1 Comment
  1. Can you be more specific about the content of your article? After reading it, I still have some doubts. Hope you can help me.

Leave A Reply

Your email address will not be published.