Bal Jeevan Bima Yojana : ಪ್ರತಿದಿನ 6 ರೂಪಾಯಿ ಉಳಿತಾಯ ಮಾಡಿ, ಲಕ್ಷ ಲಕ್ಷ ಉಳಿಸಿ ನಿಮ್ಮ ಮಗುವಿಗೆ!

Bal Jeevan Bima Yojana: ದಿನದಿಂದ ದಿನಕ್ಕೆ ಹಣವನ್ನು ಉಳಿಸುವುದೇ ಬಹಳ ಕಷ್ಟವಾಗುತ್ತಿದೆ. ಆದಾಯಕ್ಕೂ ಮೀರಿದ ಖರ್ಚು ಆಗುತ್ತಿದೆ. ನೀವು ಪೋಷಕರಾಗಿ (parents) ನಿಮ್ಮ ಮಗುವಿಗೆ ಹಣವನ್ನು ಉಳಿಸಿ ಅವರ ಭವಿಷ್ಯ (future) ವನ್ನು ಕಟ್ಟುವ ಯೋಜನೆ ಮಾಡಬೇಕಾಗುತ್ತದೆ.

ಇದೀಗ ಮಕ್ಕಳ ಭವಿಷ್ಯಕ್ಕಾಗಿಯೇ ಈ ಯೋಜನೆ ಜಾರಿಗೆ ಬಂದಿದೆ. ಇಂದಿನಿಂದಲೇ ನಿಮ್ಮ ಮಕ್ಕಳಿಗಾಗಿ ಉಳಿತಾಯ ಮಾಡಲು ಪ್ರಾರಂಭಿಸಿ, ಮತ್ತು ಮುಂದಿನ ದಿನಗಳಲ್ಲಿ ಅವರ ಶಿಕ್ಷಣ ಹಾಗೂ ಇತರ ಖರ್ಚುಗಳನ್ನು ನೋಡಿಕೊಳ್ಳಲು ಸುಲಭವಾಗುತ್ತದೆ. ಇಂತಹ ಸಂದರ್ಭಕ್ಕೆ ಎಂದೇ ಇರುವ ಯೋಜನೆ ಈ ಮಕ್ಕಳ ಜೀವ ವಿಮಾ ಯೋಜನೆಯಾಗಿದೆ. ಇನ್ನೂ ಬಾಲ ಜೀವನ್ ಬಿಮಾ ಯೋಜನೆಯು(Bal Jeevan Bima Yojana) ಅಂಚೆ ಕಚೇರಿ ಯೋಜನೆಯಾಗಿದೆ. ಈ ಯೋಜನೆಯಲ್ಲಿ ನೀವು ದಿನಕ್ಕೆ ಕೇವಲ ರೂ. 6 ಹೂಡಿಕೆ ಮಾಡವ ಮೂಲಕ ನಿಮ್ಮ ಮಗುವಿನ ಭವಿಷ್ಯವನ್ನು ಉತ್ತಮವಾಗಿ ರೂಪುಗೊಳಿಸಿ. ನೀವು ಈ ಯೋಜನೆಯಲ್ಲಿ ನಿಮ್ಮ ಮಗುವಿನ ಭವಿಷ್ಯಕ್ಕೆ, ಶಿಕ್ಷಣಕ್ಕೆ ಮುಂಚಿತವಾಗಿ ಹಣವನ್ನು ಸಂಗ್ರಹಿಸಿ ಇಡಿ. ಇದರ ಮಾಹಿತಿ ಇಲ್ಲಿದೆ ಓದಿ.

ಈ ಬಾಲ ಜೀವನ್ ಬಿಮಾ ಯೋಜನೆಯನ್ನು ಕೇವಲ ಮಗುವಿನ ಪೋಷಕರು ಖರೀದಿಸಬಹುದು. ಈ ಯೋಜನೆಯನ್ನು ಪಡೆಯಲು ಕೆಲವು ಷರತ್ತುಗಳಿವೆ. ಉದಾಹರಣೆ, ಯೋಜನೆಯನ್ನು ತೆಗೆದುಕೊಳ್ಳಲು ನಿರ್ಧರಿಸಿರುವ ಪೋಷಕರ ವಯಸ್ಸು 45 ವರ್ಷಕ್ಕಿಂತ ಹೆಚ್ಚಾಗಿರಬಾರದು. ಮತ್ತು 45 ವರ್ಷ ಮೇಲ್ಪಟ್ಟವರು ಹೂಡಿಕೆ ಮಾಡಲು ಸಾದ್ಯವಿಲ್ಲ.

ಮತ್ತು 5 ರಿಂದ 20 ವರ್ಷದ ಮಕ್ಕಳು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇನ್ನು ಪೋಷಕರು ತಮ್ಮ ಇಬ್ಬರು ಮಕ್ಕಳಿಗೆ ಮಾತ್ರ ಪಾಲಿಸಿಯನ್ನು ಖರೀದಿಸಬಹುದು. ಅಂದರೆ ಕೇವಲ ಇಬ್ಬರು ಮಕ್ಕಳಿಗೆ ಮಾತ್ರ ಹೂಡಿಕೆ ಮಾಡಬೇಕು.

ಈ ಯೋಜನೆಯಲ್ಲಿ ನೀವು ದಿನಕ್ಕೆ ರೂ. 6 ರಿಂದ ರೂ. 18 ರವರೆಗೆ ಪ್ರೀಮಿಯಂ ಅನ್ನು ಠೇವಣಿ ಮಾಡಬಹುದು. 5 ವರ್ಷಗಳ ವರೆಗೆ ಪ್ರತಿದಿನ ರೂ. 6 ಪ್ರೀಮಿಯಂ ಅನ್ನು ಠೇವಣಿ ಮಾಡಬೇಕು. 20 ವರ್ಷಗಳವರೆಗೆ ರೂ. 18 ಪ್ರೀಮಿಯಂ ಪಾವತಿಸಬೇಕು. ಪಾಲಿಸಿ ಮುಕ್ತಾಯದ ನಂತರ, ನೀವು ರೂ. 1 ಲಕ್ಷ ಒಟ್ಟು ಮೊತ್ತವನ್ನು ಪಡೆಯುತ್ತೀರಿ.

Leave A Reply

Your email address will not be published.