Prakash Raj on PM Modi : ಬಂಡೀಪುರ ಫೈಲ್ಸ್ ನೋಡಲು ಮರೆಯದಿರಿ- ಮೋದಿಗೆ ವ್ಯಂಗ್ಯ ಮಾಡಿದ ಪ್ರಕಾಶ್ ರಾಜ್
Prakash Raj on PM Modi : ಹುಲಿ ಸಂರಕ್ಷಣೆಯ ದೃಷ್ಟಿಯಲ್ಲಿ 50 ನೇ ವರ್ಷಾಚರಣೆಯ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯ ಸುರಕ್ಷಿತ ಪ್ರದೇಶಕ್ಕೆ ಸಂಚಾರವನ್ನು ನಡೆಸಿದ್ದಾರೆ.
ಈ ಸಮಯದಲ್ಲಿ ಆನಂದ್ ಮಹೀಂದ್ರಾ(Anand Mahindra) ಅವರು ಟ್ವಿಟರ್‌ನಲ್ಲಿ(Twitter) ಹಂಚಿಕೊಂಡ ಪೋಸ್ಟ್‌ನಲ್ಲಿ, ಪ್ರಧಾನಿ ಮೋದಿ ಅವರು ಜೀಪ್‌ನಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಪ್ರಯಾಣಿಸುತ್ತಿರುವ ಚಿತ್ರವನ್ನು ಹಾಕಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ಅರಣ್ಯದಲ್ಲಿ ತೆಗೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ (social media) ಇದೀಗ ಸಿಕ್ಕಾಪಟ್ಟೆ ವೈರಲಾಗುತ್ತಿದೆ.
ಈ ಫೋಟೋಗಳನ್ನು ನೋಡಿದ ಬಳಿಕ ಅನೇಕ ಜನರು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಅದರಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (kumaraswamy) ಪ್ರಧಾನಿ ಮೋದಿ ಸೂಟು ಬೂಟು ಹಾಕೊಂಡು ಬಂದರೆ ಚುನಾವಣೆಯಲ್ಲಿ ಜನ ಬಿಜೆಪಿಗೆ ವೋಟ್ ಒತ್ತು ಬಿಡ್ತಾರಾ ಎಂದು ವ್ಯಂಗ್ಯವಾಗಿ ಮಾತನಾಡುವ ಮೂಲಕ ಕಿಡಿಕಾರಿದ್ದಾರೆ. ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ವ್ಯಂಗ್ಯವಾಗಿ ಮಾತನಾಡಿದಲ್ಲದೆ ಕನ್ನಡ ಚಿತ್ರರಂಗದ ನಟ ಪ್ರಕಾಶ್ ರಾಜ್, ನರೇಂದ್ರ ಮೋದಿ (prakash raj on PM modi) ಅವರ ಬಂಡೀಪುರ ಸಫಾರಿಗೆ ವ್ಯಂಗ್ಯವಾಡಿ ಪೋಸ್ಟ್ ಮಾಡಿದ್ದಾರೆ. ಅದೇನಪ್ಪಾ ಅಂದ್ರೆ.
ಟ್ವಿಟರ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಫಾರಿ ಬಗ್ಗೆ ವ್ಯಂಗ್ಯವಾಗಿ ಪೋಸ್ಟ್ (post) ಮಾಡಿರುವ ನಟ ಪ್ರಕಾಶ್ ರಾಜ್, ನಾನು ಯಾರು ಬಲ್ಲೆಯೇನು? ಪ್ರಚಾರ ಮಂತ್ರಿನಾ ಅಥವಾ ಪ್ರಧಾನ ಮಂತ್ರಿನಾ ಹೇಳಿ ನೋಡೋಣ ಎಂಬ ತಮಾಷೆಯ ಮಾತಿನ ಮೂಲಕ ವ್ಯಂಗ್ಯ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಬಂಡೀಪುರದ ಫೈಲ್ಸ್ (bandipur files) ನೋಡಲು ಇವತ್ತು ಯಾರು ಮರೆಯದಿರಿ ಎಲ್ಲರೂ ನೋಡಲೇ ಬೇಕು ಎಂಬ ಮಾತಿನ ಮೂಲಕ ಟಾಂಗ್ ಕೊಟ್ಟಿದ್ದಾರೆ.
Can you be more specific about the content of your article? After reading it, I still have some doubts. Hope you can help me.