7th Pay Commission : ಸರ್ಕಾರಿ ನೌಕರರ ಡಿಎ ಶೇ.50ಕ್ಕೆ ಏರಿಕೆಯಾಗಲಿದೆ! ವೇತನದಲ್ಲಿ ಎಷ್ಟು ಸಾವಿರ ಹೆಚ್ಚಳ ಆಗಲಿದೆ ಗೊತ್ತಾ?

7th-Pay Commission DA Hike: ಈಗಾಗಲೇ ಹೊಸ ಆರ್ಥಿಕ ವರ್ಷ ಪ್ರಾರಂಭವಾಗಿದ್ದು , ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಹಣಕಾಸು ವರ್ಷವು ಉತ್ತಮವಾಗಿರಲಿದೆ ಎಂಬ ಸುದ್ದಿ ನಿಜವಾಗಿದೆ. ಯಾಕೆಂದರೆ ತುಟ್ಟಿಭತ್ಯೆಯಲ್ಲಿ ಭಾರಿ ಹೆಚ್ಚಳದೊಂದಿಗೆ ವರ್ಷವು ಆರಂಭಗೊಂಡಿದೆ. ಹೌದು, ಕೇಂದ್ರ ನೌಕರರು ಬಹಳ ದಿನಗಳಿಂದ ಇರಿಸಿದ್ದ ತುಟ್ಟಿಭತ್ಯೆ ಹೆಚ್ಚಳ (7th-Pay Commission DA Hike) ನಿರೀಕ್ಷೆ ಈಡೇರಿದೆ. ಈಗಾಗಲೇ ಮಾರ್ಚ್‌ನಲ್ಲಿ ಕೇಂದ್ರ ನೌಕರರ ತುಟ್ಟಿ ಭತ್ಯೆಯನ್ನು ಶೇ.42ಕ್ಕೆ ಹೆಚ್ಚಿಸಲಾಗಿದೆ.

ನಿಯಮನುಸಾರ ಕೇಂದ್ರ ನೌಕರರಿಗೆ ತುಟ್ಟಿಭತ್ಯೆ (ಡಿಎ ಹೆಚ್ಚಳ) ಪ್ರತಿ ವರ್ಷ ಎರಡು ಬಾರಿ ಹೆಚ್ಚಾಗುತ್ತದೆ. ಆದರೆ, ಈ ಹೆಚ್ಚಳ ಎಷ್ಟು ಎಂಬುದು ಹಣದುಬ್ಬರ ಅವಲಂಬಿಸಿರುತ್ತದೆ. ಹಣದುಬ್ಬರಕ್ಕೆ ಅನುಗುಣವಾಗಿ ಕೇಂದ್ರ ನೌಕರರು ಪಡೆಯುವ ಭತ್ಯೆಗಳಲ್ಲಿ ಹೆಚ್ಚಳವಾಗಲಿದೆ.

ಇತ್ತೀಚೆಗೆ ಕೇಂದ್ರ ನೌಕರರ ತುಟ್ಟಿ ಭತ್ಯೆ (ಡಿಎ ಹೆಚ್ಚಳ) ಶೇ 4ರಷ್ಟು ಹೆಚ್ಚಾಗಿದೆ. ಈ ಹೆಚ್ಚಳವು ಜನವರಿ 2023 ರಿಂದ ಜಾರಿಗೆ ಬಂದಿದೆ. ಇದೀಗ ಮುಂದಿನ ತುಟ್ಟಿಭತ್ಯೆಯನ್ನು ಜುಲೈ 2023 ರಿಂದ ಘೋಷಿಸಲಾಗುವುದು ಎನ್ನಲಾಗಿದೆ. ಮುಂದಿನ ಏರಿಕೆಯೂ ಶೇ.4 ಆಗುವ ನಿರೀಕ್ಷೆ ಇದೆ.

ತಜ್ಞರ ಪ್ರಕಾರ ಹಣದುಬ್ಬರ ಮತ್ತು ಎರಡು ತಿಂಗಳ CPI -IW ಅಂಕಿ ಅಂಶಗಳು ಬಂದಿವೆ, ಮುಂಬರುವ ದಿನಗಳಲ್ಲಿ ತುಟ್ಟಿಭತ್ಯೆ ಮತ್ತೆ ಶೇಕಡಾ 4 ರಷ್ಟು ಹೆಚ್ಚಾಗಲಿದೆ ಎಂಬುದು ಸ್ಪಷ್ಟವಾಗಿದೆ. ಅಂದರೆ 42 ತಲುಪಿರುವ ತುಟ್ಟಿಭತ್ಯೆ ಜುಲೈನಲ್ಲಿ 46% ಆಗಲಿದೆ.

ಹೊಸ ನಿಯಮದಿಂದಾಗಿ ತುಟ್ಟಿಭತ್ಯೆ ಶೇ.50ರಷ್ಟು ಹೆಚ್ಚಾಗಲಿದೆ

ತುಟ್ಟಿಭತ್ಯೆಯ ಹೆಚ್ಚಳಕ್ಕೆ ಒಂದು ನಿಯಮವಿದೆ. ನಿಯಮಗಳ ಪ್ರಕಾರ, ತುಟ್ಟಿಭತ್ಯೆ ಶೇಕಡಾ 50 ತಲುಪಿದ ತಕ್ಷಣ, ಅದನ್ನು ಶೂನ್ಯಗೊಳಿಸಲಾಗುತ್ತದೆ ಮತ್ತು ಶೇಕಡಾ 50 ರ ಪ್ರಕಾರ, ನೌಕರರು ಭತ್ಯೆಯಾಗಿ ಪಡೆಯುತ್ತಿರುವ ಹಣವನ್ನು ಮೂಲ ವೇತನಕ್ಕೆ ಅಂದರೆ ಕನಿಷ್ಠ ವೇತನಕ್ಕೆ ಸೇರಿಸಲಾಗುತ್ತದೆ.

ಉದಾಹರಣೆಗೆ ಉದ್ಯೋಗಿಯ ಮೂಲ ವೇತನವು 18000 ರೂ ಎಂದು ಭಾವಿಸೋಣ, ಆಗ ಅವರು 50% ಡಿಎಯ 9000 ರೂಗಳನ್ನು ಪಡೆಯುತ್ತಾರೆ. ಆದರೆ, ಡಿಎ 50% ಆದ ನಂತರ, ಅದನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ ಮತ್ತು ಮತ್ತೆ ತುಟ್ಟಿಭತ್ಯೆಯನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ಅಂದರೆ ಮೂಲ ವೇತನವನ್ನು 18000+9000 = 27000 ರೂ.ಗೆ ಹೆಚ್ಚಿಸಲಾಗುವುದು.

ಜೊತೆಗೆ HRA ಕೂಡ 3% ಹೆಚ್ಚಾಗಲಿದೆ
ಮನೆ ಬಾಡಿಗೆ ಭತ್ಯೆಯಲ್ಲಿ ಮುಂದಿನ ಪರಿಷ್ಕರಣೆಯು 3% ಆಗಿರುತ್ತದೆ. ಎಚ್‌ಆರ್‌ಎ ಈಗಿರುವ ಗರಿಷ್ಠ ಶೇ.27ರಿಂದ ಶೇ.30ಕ್ಕೆ ಏರಿಕೆಯಾಗಲಿದೆ. ಆದರೆ, ತುಟ್ಟಿಭತ್ಯೆ ಪರಿಷ್ಕರಣೆಯು 50% ದಾಟಿದಾಗ ಮಾತ್ರ ಇದು ಸಂಭವಿಸುತ್ತದೆ.

ಹಣಕಾಸು ಇಲಾಖೆಯ ಜ್ಞಾಪಕ ಪತ್ರದ ಪ್ರಕಾರ, DA 50% ದಾಟಿದಾಗ HRA 30%, 20% ಮತ್ತು 10% ಆಗಿರುತ್ತದೆ. X, Y ಮತ್ತು Z ವರ್ಗದ ನಗರಗಳ ಪ್ರಕಾರ ಮನೆ ಬಾಡಿಗೆ ಭತ್ಯೆ (HRA) ವರ್ಗವಾಗಿದೆ. X ವರ್ಗಕ್ಕೆ ಸೇರುವ ಕೇಂದ್ರ ನೌಕರರು 27% HRA ಪಡೆಯುತ್ತಿದ್ದಾರೆ, ಇದು DA 50% ಆಗಿದ್ದರೆ ಅದು 30% ಆಗಿರುತ್ತದೆ. ಇದೆ ವೇಳೆ, Y ವರ್ಗದ ಜನರಿಗೆ, ಇದು 18 ಪ್ರತಿಶತದಿಂದ 20 ಪ್ರತಿಶತಕ್ಕೆ ಹೆಚ್ಚಾಗುತ್ತದೆ. Z ವರ್ಗದವರಿಗೆ ಶೇ.9ರಿಂದ ಶೇ.10ಕ್ಕೆ ಏರಿಕೆಯಾಗಲಿದೆ.

ಮಾಹಿತಿ ಪ್ರಕಾರ 2006 ರಲ್ಲಿ ಆರನೇ ವೇತನ ಆಯೋಗದ ಸಮಯದಲ್ಲಿ, ಹೊಸ ವೇತನ ಶ್ರೇಣಿಯನ್ನು ಜನವರಿ 1, 2006 ರಿಂದ ಜಾರಿಗೊಳಿಸಲಾಯಿತು, ಆದರೆ ಅದರ ಅಧಿಸೂಚನೆಯನ್ನು ಮಾರ್ಚ್ 24, 2009 ರಂದು ಹೊರಡಿಸಲಾಯಿತು. ಈ ವಿಳಂಬದಿಂದಾಗಿ 2008-09, 2009-10 ಮತ್ತು 2010-11ರ 3 ಹಣಕಾಸು ವರ್ಷಗಳಲ್ಲಿ 39 ರಿಂದ 42 ತಿಂಗಳ ಡಿಎ ಬಾಕಿಯನ್ನು 3 ಕಂತುಗಳಲ್ಲಿ ಸರ್ಕಾರ ಪಾವತಿಸಬೇಕಾಗಿ ಬಂದಿತ್ತು.

ಜೊತೆಗೆ ಹೊಸ ವೇತನ ಶ್ರೇಣಿಯನ್ನೂ ರಚಿಸಲಾಗಿದೆ. 8000-13500ರ ಐದನೇ ವೇತನ ಶ್ರೇಣಿಯಲ್ಲಿ 8000ಕ್ಕೆ 186 ಪ್ರತಿಶತ ಡಿಎ 14500 ರೂ.ಆಗುತ್ತದೆ. ಹೀಗಾಗಿ ಎರಡನ್ನೂ ಸೇರಿಸಿ ಒಟ್ಟು ಸಂಬಳ 22 ಸಾವಿರದ 880ಕ್ಕೆ ತಲುಪಿತು. ಆರನೇ ವೇತನ ಶ್ರೇಣಿಯಲ್ಲಿ, ಅದರ ಸಮಾನ ವೇತನ ಶ್ರೇಣಿಯನ್ನು 15600 -39100 ಜೊತೆಗೆ 5400 ದರ್ಜೆಯ ವೇತನಕ್ಕೆ ನಿಗದಿಪಡಿಸಲಾಗಿದೆ. ಆರನೇ ವೇತನ ಶ್ರೇಣಿಯಲ್ಲಿ ಈ ವೇತನ 15600-5400 ಸೇರಿ 21000 ಇದ್ದು, 2009ರ ಜನವರಿ 1ರಂದು ಶೇ 16 ಡಿಎ 2226 ಸೇರಿಸಿ ಒಟ್ಟು 23 ಸಾವಿರದ 226 ವೇತನ ನಿಗದಿ ಪಡಿಸಲಾಗಿತ್ತು. ನಾಲ್ಕನೇ ವೇತನ ಆಯೋಗದ ಶಿಫಾರಸುಗಳನ್ನು 1986 ರಲ್ಲಿ, ಐದನೆಯದನ್ನು 1996 ರಲ್ಲಿ ಮತ್ತು ಆರನೆಯದನ್ನು 2006 ರಲ್ಲಿ ಜಾರಿಗೊಳಿಸಲಾಯಿತು. ಇದೀಗ ಏಳನೇ ಆಯೋಗದ ಶಿಫಾರಸುಗಳು (7th Pay Commission)ಜನವರಿ 2016 ರಲ್ಲಿ ಜಾರಿಗೆ ಬಂದಿದೆ.

ಇದನ್ನೂ ಓದಿ: Electric Car : ಇನ್ನೂ ಎಲೆಕ್ಟ್ರಿಕ್ ಕಾರಿನಲ್ಲಿ ಟೆನ್ಷನ್ ಇಲ್ಲದೆ ಲಾಂಗ್ ಡ್ರೈವ್ ಹೋಗಬಹುದು! ರೇಂಜ್‌ ಹೆಚ್ಚಿಸುವ ಹೊಸ ಸಾಧನ ರೆಡಿ!

Leave A Reply

Your email address will not be published.