Tomato Ketchup : ಟೊಮೆಟೊ ಕೆಚಪ್ ಅತಿಯಾಗಿ ಸೇವಿಸುವಿರಾ! ಈ ಸಮಸ್ಯೆ ನಿಮ್ಮನ್ನು ಕಾಡಲಿದೆ ಎಚ್ಚರ !!

Side Effects of Tomato Ketchup : ಟೊಮಾಟೋ ಕೆಚಪ್ (Side Effects of Tomato Ketchup) ಎಂದರೆ ಚಟಪಟ ಹುಳಿ ಮತ್ತು ಸಿಹಿಯಾದ ದಪ್ಪ ದ್ರವವಾಗಿರುತ್ತದೆ. ಬಹುತೇಕ ಜನರು ಟೊಮಾಟೋ ಕೆಚಪ್ ನ್ನು ಸಂಜೆಯ ಕುರುಕು ತಿಂಡಿ, ರಾತ್ರಿಯ ಊಟದ ಜೊತೆ, ಸಿದ್ಧ ಅಹಾರಗಳು, ಹುರಿದ ಆಲೂಗಡ್ಡೆ, ಚಿಪ್ಸ್ ಸಮೋಸಾ, ಉದ್ದಿನ ವಡೆ, ಚಟ್ಟಂಬಡೆ, ಬಜೆ, ಪಕೋಡಾ ಮೊದಲಾದ ತಿಂಡಿಗಳ ಜೊತೆ ಟೊಮಾಟೋ ಕೆಚಪ್ ಸೇರಿಸಿಕೊಳ್ಳುತ್ತಾರೆ. ಇನ್ನು ಕರಿ ಪಫ್, ಫ್ರೆಂಚ್ ಫ್ರೈಸ್, ಪಿಜ್ಜಾ, ಬರ್ಗರ್ ಅಥವಾ ನೂಡಲ್ಸ್ ಏನೇ ಇರಲಿ ಕೆಲವರಿಗೆ ಟೊಮೆಟೊ ಕೆಚಪ್ ಮಿಶ್ರಣ ಇರಲೇ ಬೇಕು. ಆದರೆ ರುಚಿಯಾಗಿದೆ ಎಂದು ಟೊಮೆಟೊ ಕೆಚಪ್ ಮಿತಿ ಮೀರಿ ತಿನ್ನುತ್ತಿದ್ದರೆ ಈ ರೋಗಗಳು ಬರಲಿದೆ. ನೀವು ಇಂದೇ ಎಚ್ಚರಗೊಳ್ಳಬೇಕು.

ಟೊಮೆಟೊ ಕೆಚಪ್ ಅನ್ನು genetically modified organism (GMO) ಕಾರ್ನ್‌ನಿಂದ ತಯಾರಿಸಲಾಗುತ್ತದೆ. ಇದರಲ್ಲಿ ಬಹಳಷ್ಟು ರಾಸಾಯನಿಕಗಳು ಮತ್ತು ಕೀಟನಾಶಕಗಳಿವೆ. ಹಾಗಾಗಿ ಟೊಮೆಟೊ ಸಾಸ್ ಆರೋಗ್ಯಕ್ಕೆ ಒಳ್ಳೆಯದಲ್ಲ.

ಮುಖ್ಯವಾಗಿ ದೀರ್ಘಕಾಲದವರೆಗೆ ಕೆಚಪ್ ಬಳಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಪೌಷ್ಠಿಕಾಂಶ ತಜ್ಞರು. ಕೆಚಪ್‌ನಲ್ಲಿ ಸಕ್ಕರೆಯ ಅಂಶ ತುಂಬಾ ಹೆಚ್ಚಾಗಿರುತ್ತದೆ. ಹಾಗಾಗಿ ಇದು ಆರೋಗ್ಯಕ್ಕೆ ಹಾನಿಕರ. ಕೆಚಪ್ ನಲ್ಲಿ ಸೋಡಿಯಂ ಕೂಡ ಅಧಿಕವಿರುವುದರಿಂದ ಕೆಚಪ್ ಅನ್ನು ಮಿತವಾಗಿ ಸೇವಿಸುವುದು ಉತ್ತಮ.

ಟೊಮೆಟೊ ಕೆಚಪ್‌ನಲ್ಲಿ ಹೆಚ್ಚಿನ ಫ್ರಕ್ಟೋಸ್ ಇರುವುದರಿಂದ, ಇದು ಕೊಲೆಸ್ಟ್ರಾಲ್ ಮತ್ತು ಮಧುಮೇಹವನ್ನು ಹೆಚ್ಚಿಸುತ್ತದೆ. ಟೊಮಾಟೋ ಕೆಚಪ್ ನಲ್ಲಿ ಬೆರೆಸಿರುವ ಕಾರ್ನ್ ಸಿರಪ್ ಅಥವಾ ಮೆಕ್ಕೆ ಜೋಳದ ರಸ ದೇಹದಲ್ಲಿ ಇನ್ಸುಲಿಲ್ ಅಸಹಿಷ್ಣುತೆಯನ್ನು (ಇನ್ಸುಲಿನ್ ರೆಸಿಸ್ಟನ್ಸ್) ಹೆಚ್ಚಿಸಬಹುದು. ಇದರಿಂದ ಸ್ಥೂಲಕಾಯ, ರಕ್ತದಲ್ಲಿ ಟ್ರೈಗ್ಲಿಸರೈಡುಗಳ ಮಟ್ಟ ಏರಿಕೆ, ಹೀಗೇ ಮುಂದುವರೆದರೆ ಯಕೃತ್ ನಲ್ಲಿ ಕೊಬ್ಬಿನ ಮಟ್ಟ ಹೆಚ್ಚಿ ’ಫ್ಯಾಟಿ ಲಿವರ್’ ಎಂಬ ಕಾಯಿಲೆ ಕಾಣಿಸಿಕೊಳ್ಳುವುದು, ಹೃದಯ ಸಂಬಂಧಿ ತೊಂದರೆಗಳು ಮೊದಲಾದವು ನಿಧಾನಕ್ಕೆ ಎದುರಾಗಬಹುದು.

ಅದಲ್ಲದೆ ಹೆಚ್ಚು ಟೊಮೆಟೊ ಕೆಚಪ್ ತಿನ್ನುವುದರಿಂದ ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುವ ಕ್ಯಾಲ್ಸಿಯಂ ಪ್ರಮಾಣವನ್ನು ಹೆಚ್ಚಿಸುತ್ತದೆ. ಟೊಮೆಟೊದಂತೆ, ಅದರ ಬೀಜಗಳೂ ಸಹ ದೇಹದೊಳಕ್ಕೆ ಪ್ರವೇಶಿಸುತ್ತವೆ. ಅದನ್ನು ತಡೆಯಲಾಗುವುದಿಲ್ಲ. ಆದರೆ ಈ ಬೀಜಗಳನ್ನು ಸೇವಿಸುವ ಮೂಲಕ ನಿಮ್ಮ ಮೂತ್ರಪಿಂಡದ ಕಲ್ಲುಗಳ ಮೇಲೆ ಅಪಾಯ ಹೆಚ್ಚುತ್ತಾ ಹೋಗುತ್ತದೆ. ಏಕೆಂದರೆ ಬೀಜಗಳು ನೇರವಾಗಿ, ಸುಲಭವಾಗಿ ಕಿಡ್ನಿಯನ್ನು ತಲುಪುತ್ತದೆ. ಅಲ್ಲಿ ಕಿಡ್ನಿ ಕಲ್ಲು ಸೃಷ್ಟಿಯಾಗುವುದನ್ನು ಉತ್ತೇಜಿಸುತ್ತದೆ.

ಟೊಮೆಟೊ ಕೆಚಪ್ ಅನ್ನು ಅತಿಯಾಗಿ ಸೇವಿಸುವುದರಿಂದ ಕೆಚಪ್‌ನಲ್ಲಿ ಹಿಸ್ಟಮಿನ್ ಪ್ರಮಾಣವು ತುಂಬಾ ಹೆಚ್ಚಿರುವುದರಿಂದ ದೇಹದಲ್ಲಿ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉತ್ತೇಜಿಸುತ್ತದೆ.

ಅಲ್ಲದೆ ಟೊಮೆಟೊ ಕೆಚಪ್ ತಿಂದರೆ ಅಸಿಡಿಟಿ ಸಮಸ್ಯೆ ಕಾಡುತ್ತದೆ. ವಾಸ್ತವವಾಗಿ, ಇದು ಹೆಚ್ಚಿನ ಪ್ರಮಾಣದ ಆಮ್ಲವನ್ನು ಹೊಂದಿರುತ್ತದೆ. ಇವುಗಳನ್ನು ಸೇವಿಸುವುದರಿಂದ ಅಸಿಡಿಟಿ ಉಂಟಾಗುತ್ತದೆ. ಕೆಚಪ್ ಬಟ್ಟಿ ಇಳಿಸಿದ ವಿನೆಗರ್ ಆಗಿದೆ. ಇದು ಹೆಚ್ಚಿನ ಫ್ರಕ್ಟೋಸ್ ಸಕ್ಕರೆಯನ್ನು ಹೊಂದಿರುತ್ತದೆ. ಇದಲ್ಲದೆ, ಇದು ಸಾಮಾನ್ಯ ಕಾರ್ನ್ ಸಿರಪ್, ಈರುಳ್ಳಿ ಪುಡಿಯನ್ನು ಸಹ ಒಳಗೊಂಡಿದೆ.

ಅದಲ್ಲದೆ ಜೀರ್ಣಕ್ರಿಯೆಯ ಸಮಯದಲ್ಲಿ ಕೆಚಪ್ ಕರಗುವಿಕೆಯಿಂದಾಗಿ, ದೇಹವು ಕೆಟ್ಟ ವಾಸನೆಯನ್ನು ಹೊಂದಿರುತ್ತದೆ. ಅಲ್ಲದೆ, ಸಾವಯವ ಟೊಮೆಟೊಗಳ ಬದಲಿಗೆ, ರಾಸಾಯನಿಕಗಳೊಂದಿಗೆ ಬೇಯಿಸಿದ ಟೊಮೆಟೊಗಳನ್ನು ಮಾರುಕಟ್ಟೆಯಲ್ಲಿ ತಯಾರಿಸಲಾಗುತ್ತದೆ. ಇವು ಅಧಿಕ ರಕ್ತದೊತ್ತಡ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

ಇನ್ನು ಎಣ್ಣೆಯುಕ್ತ ಅಥವಾ ಅಧಿಕ ಕ್ಯಾಲೋರಿಗಳ ಆಹಾರ, ಸಿದ್ಧ ಆಹಾರಗಳೊಂದಿಗೆ ಕೆಚಪ್ ಅನ್ನು ಸೇವಿಸಿದಾಗ, ಒಟ್ಟಾರೆ ಸೋಡಿಯಂ ಮಟ್ಟ ಅಪಾರವಾಗಿ ಏರುತ್ತದೆ. ಅಧಿಕ ಸೋಡಿಯಂ ಅಂದರೆ ಅಧಿಕ ರಕ್ತದ ಒತ್ತಡ ಹಾಗೂ ಇದಕ್ಕೆ ಸಂಬಂಧಿಸಿದ ಇತರ ಅನಾರೋಗ್ಯಗಳು ಎದುರಾಗುವ ಸಾಧ್ಯತೆಯೂ ಹೆಚ್ಚುತ್ತದೆ.

ಒಟ್ಟಿನಲ್ಲಿ ನೀವು ಟೊಮೆಟೊ ಕೆಚಪ್ ಅನ್ನು ಬಯಸಿದರೆ, ಟೊಮಾಟೋ ಕೆಚಪ್ ಅನ್ನು ಸಿದ್ಧ ರೂಪದಲ್ಲಿ ಕೊಳ್ಳುವ ಬದಲಿಗೆ ನೀವೇ ಮನೆಯಲ್ಲಿ ತಾಜಾ ಟೊಮಾಟೋ ಹಣ್ಣುಗಳಿಂದ ಕೆಚಪ್ ತಯಾರಿಸಿ. ರುಚಿಕರವಾಗಿರುತ್ತದೆ , ಇದರಿಂದ ಆರೋಗ್ಯಕರ ಮಾತ್ರವಲ್ಲ, ಅಗ್ಗವೂ ಆಗಿದೆ. ಇಂದು ಅಂತರ್ಜಾಲ ಜಾಲಾಡಿದರೆ ಕೆಚಪ್ ತಯಾರಿಸುವ ಸುಲಭ ವಿಧಾನಗಳನ್ನು ಕಲಿತುಕೊಳ್ಳಬಹುದು. ಹೆಚ್ಚು ಪ್ರಮಾಣದಲ್ಲಿ ತಯಾರಿಸದಿರಿ, ವಾರಕ್ಕೆ ಅಥವಾ ಎರಡು ವಾರಕ್ಕೆ ಸಾಕಾಗುವಷ್ಟನ್ನು ಮಾತ್ರವೇ ತಯಾರಿಸಿ ಯಾವುದೇ ಸಂರಕ್ಷಕ ಅಥವಾ ಕಾರ್ನ್ ಸಿರಪ್ ನ ಹೆದರಿಕೆಯಿಲ್ಲದೇ ಸೇವಿಸಬಹುದು.

 

ಇದನ್ನು ಓದಿ : Ana Obregon : ಮೃತ ಪಟ್ಟ ಮಗನಿಂದಲೇ ತಾಯಿಯಾದ ಖ್ಯಾತ ನಟಿ! ಅಷ್ಟಕ್ಕೂ ನಡೆದದ್ದಾರು ಏನು? 

Leave A Reply

Your email address will not be published.