Court Low Rules : ಮಹಿಳೆ ಸ್ನಾನ ಮಾಡೋದನ್ನು ಇಣುಕಿ ನೋಡುವುದು ಅಪರಾಧ- ಹೈಕೋರ್ಟ್

Court Law Rules : ಸಾಮಾನ್ಯವಾಗಿ ಬಾತ್‌ರೂಮ್‌ನಲ್ಲಿ ಸ್ನಾನ ಮಾಡುವುದು ಮಹಿಳೆಯ ಖಾಸಗಿತನವಾಗಿದೆ. ಪಬ್ಲಿಕ್ ಬಾತ್‌ರೂಮ್‌ ಆಗಿದ್ದರು, ಡೋರ್‌ಗಳಿಲ್ಲದೆ ಕೇವಲ ಕರ್ಟನ್‌ಗಳನ್ನು ಮಾತ್ರ ಹೊಂದಿದ್ದರೂ ಸಹ ಪುರುಷರು ಇಣುಕಿ ನೋಡುವಂತಿಲ್ಲ.
ಮಹಿಳೆ ಸ್ನಾನ ಮಾಡುವಾಗ ಪುರುಷರು ಸ್ನಾನಗೃಹದೊಳಗೆ ಇಣುಕಿ ನೋಡುವುದು ಅಪರಾಧ ಎಂದು ದೆಹಲಿ ಹೈಕೋರ್ಟ್‌ ತೀರ್ಪು (Court Law Rules)ನೀಡಿದೆ. ಇದರಿಂದ ಆಕೆಯ ಖಾಸಗಿತನಕ್ಕೆ ಧಕ್ಕೆಯುಂಟಾಗುತ್ತದೆ ಎಂದು ತಿಳಿಸಿದೆ .

ಮುಚ್ಚಿದ ಸ್ನಾನಗೃಹದೊಳಗೆ ಸ್ನಾನ ಮಾಡುವ ಮಹಿಳೆಯು (Women) ತನ್ನ ಗೌಪ್ಯತೆಗೆ ಧಕ್ಕೆಯಾಗುವುದಿಲ್ಲ ಅಥವಾ ತನ್ನನ್ನು ಯಾರೂ ನೋಡುವುದಿಲ್ಲ ಎಂದು ನಿರೀಕ್ಷಿಸುತ್ತಾರೆ ಎಂದು ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮ ತಿಳಿಸಿದ್ದು, ಒಂದು ವೇಳೆ ಬಾತ್‌ರೂಮ್‌ನಲ್ಲಿ ಮಹಿಳೆಯೊಬ್ಬಳು ಸ್ನಾನ ಮಾಡುವಾಗ ವ್ಯಕ್ತಿ ಇಣುಕಿ ನೋಡಿದರೆ ಇದು ಸೆಕ್ಷನ್ 354Cಯ ಪ್ರಕಾರ ಅಪರಾಧವಾಗಿದೆ ಎಂದು ತಿಳಿಸಲಾಗಿದೆ.

ಪ್ರಸ್ತುತ ಪ್ರಕರಣದಲ್ಲಿ, ಸಂತ್ರಸ್ತೆ ತನ್ನ ದೈನಂದಿನ ಚಟುವಟಿಕೆಗಳನ್ನು ಮಾಡುವಾಗ ವ್ಯಕ್ತಿಯೊಬ್ಬರಿಂದ ಕಿರುಕುಳಕ್ಕೊಳಗಾಗಿರುವ ಬಗ್ಗೆ ದೂರು ನೀಡಿದ್ದರು. 2014ರ ಸೆಪ್ಟೆಂಬರ್‌ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ವ್ಯಕ್ತಿಯೊಬ್ಬ ತನ್ನನ್ನು ಲೈಂಗಿಕ ಉದ್ದೇಶದಿಂದ ನೋಡುತ್ತಿದ್ದ. ತಾನು ಸ್ನಾನ ಮಾಡಲು ಹೋದಾಗಲ್ಲೆಲ್ಲಾ ಬಾತ್‌ರೂಮ್‌ನ ಹೊರಗೆ ಬೇರೆ ಬೇರೆ ನೆಪದಲ್ಲಿ ನಿಂತು ಸ್ನಾನಗೃಹದ ಒಳಗೆ ಇಣುಕಿ ನೋಡುತ್ತಿದ್ದ (Peeping to bathroom) ಎಂದು ಆರೋಪಿಯ ವಿರುದ್ಧ ದೂರು ನೀಡಿದ್ದರು. ಆಕೆಯ ವಿರುದ್ಧ ಅಸಭ್ಯ ಟೀಕೆಗಳು, ಕಾಮೆಂಟ್‌ಗಳು ಮತ್ತು ಸನ್ನೆಗಳನ್ನು ರವಾನಿಸುತ್ತಿದ್ದರು ಎಂದು ಸಹ ದೂರಿನಲ್ಲಿ ತಿಳಿಸಲಾಗಿತ್ತು.

ಈ ಬಗ್ಗೆ ವಕೀಲರು (Lawyer) ಮೇಲ್ಮನವಿ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಧಾರ್ಮಿಕ ಸ್ಥಳಗಳಲ್ಲಿ, ವಾಟರ್‌ ಪಾರ್ಕ್‌, ಈಜುಕೊಳದಲ್ಲಿ ಮಹಿಳೆಯರು ಹೀಗೆಯೇ ಸ್ನಾನ ಮಾಡುತ್ತಾರೆ ಎಂದು ವಾದಿಸಿದರು, ಆದರೆ ಪವಿತ್ರ ಸ್ನಾನ ಮಾಡುವುದು, ಹೆಣ್ಣು ಮುಚ್ಚಿದ ಸ್ನಾನಗೃಹದಲ್ಲಿ ಸ್ನಾನ ಮಾಡುವುದಕ್ಕೆ ಸಮನಾಗಿರುವುದಿಲ್ಲ ಎಂದು ನ್ಯಾಯಮೂರ್ತಿ ಶರ್ಮಾ ಹೇಳಿದರು.

ಯಾಕೆಂದರೆ ‘ಮಹಿಳೆ ಸ್ನಾನ ಮಾಡುವಾಗ ಬಾತ್‌ರೂಮ್‌ ಒಳಗೆ ಇಣುಕಿ ನೋಡುವ ದುಷ್ಕರ್ಮಿಯ ಕೃತ್ಯವನ್ನು ಖಂಡಿತವಾಗಿಯೂ ಅವಳ ಗೌಪ್ಯತೆಯ ಆಕ್ರಮಣ ಎಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಖಾಸಗಿತನವನ್ನು (Privacy) ಗೌರವಿಸಬೇಕು ಮತ್ತು ಅದರ ಯಾವುದೇ ಉಲ್ಲಂಘನೆಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸೆಕ್ಷನ್ 354C ಯ ಅಂಶಗಳನ್ನು ಪ್ರಸ್ತುತ ಪ್ರಕರಣದ ವಾಸ್ತವಿಕ ಪರಿಸ್ಥಿತಿಯಲ್ಲಿ ಹೀಗೆ ಪರೀಕ್ಷಿಸಿದಾಗ, IPC ಯ ಸೆಕ್ಷನ್ 354C ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯಿದೆ, 2012 ರ ಸೆಕ್ಷನ್ 12 ರ ಅಡಿಯಲ್ಲಿ ಅಪರಾಧಕ್ಕಾಗಿ ವಿಚಾರಣಾ ನ್ಯಾಯಾಲಯದಿಂದ ದೋಷಿಯಾಗಿರುವ ಸೋನು ಬಿಲ್ಲಾ ಎಂಬ ಅಪರಾಧಿ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿ ಶರ್ಮಾ ಅವರು ವ್ಯವಹರಿಸುತ್ತಿದ್ದರು. ಘಟನೆಯ ಸಮಯದಲ್ಲಿ ಸಂತ್ರಸ್ತೆ ಕಾಲೇಜಿನಲ್ಲಿದ್ದಳು ಮತ್ತು ಪ್ರಾಸಿಕ್ಯೂಷನ್ ಸಾಕ್ಷಿಯ ಸಾಕ್ಷ್ಯದ ಪ್ರಕಾರ, ಘಟನೆಯ ದಿನಾಂಕದಂದು ಆಕೆಗೆ ಸುಮಾರು 17 ವರ್ಷ ವಯಸ್ಸಾಗಿತ್ತು ಎಂದು ನ್ಯಾಯಾಲಯವು ಗಮನಿಸಿದೆ.

ಒಟ್ಟಿನಲ್ಲಿ ಸೋನುಗೆ ಒಂದು ವರ್ಷದ ಅವಧಿಗೆ ಕಠಿಣ ಜೈಲು ಶಿಕ್ಷೆ ಮತ್ತು 20,000 ರೂ. ದಂಡ ವಿಧಿಸಲಾಯಿತು.

‘ಇಂಥಾ ಪ್ರಕರಣಗಳಲ್ಲಿಯೂ ವ್ಯಕ್ತಿ ಇಣುಕಿ ನೋಡುವುದು ಆಕೆಯ ಗೌಪ್ಯತೆಯನ್ನು ಆಕ್ರಮಿಸಿದಂತಾಗುತ್ತದೆ. ಆ ಪರಿಸ್ಥಿತಿಯಲ್ಲಿಯೂ ಸಹ, ಐಪಿಸಿಯ ಸೆಕ್ಷನ್ 354C ಮತ್ತು ಅದರ ವಿವರಣೆಯ ಅಡಿಯಲ್ಲಿ ಆಕೆಯ ಫೋಟೋಗಳು, ವೀಡಿಯೊಗಳು ಇತ್ಯಾದಿಗಳನ್ನು ತೆಗೆದುಕೊಳ್ಳಲು ಯಾವುದೇ ವ್ಯಕ್ತಿಗೆ ಹಕ್ಕಿಲ್ಲ’ಎಂದು ನ್ಯಾಯಾಲಯ ಹೇಳಿದೆ. ಆರೋಪಿಯ ಕೃತ್ಯವು ಖಾಸಗಿತನದ ಉಲ್ಲಂಘನೆಯಾಗಿದೆ ಎಂದು ಕೋರ್ಟ್ ತೀರ್ಮಾನಿಸಿತು.

 

ಇದನ್ನು ಓದಿ : Aishwarya Rai and Abhishek Bachchan : ಐಶ್ವರ್ಯಾ ರೈ ಅಭಿಷೇಕ್‌ ದಾಂಪತ್ಯದಲ್ಲಿ ಬಿರುಕು?! 

1 Comment
  1. binance says

    Your article helped me a lot, is there any more related content? Thanks! https://accounts.binance.com/si-LK/register-person?ref=V2H9AFPY

Leave A Reply

Your email address will not be published.