Aishwarya Rai and Abhishek Bachchan : ಐಶ್ವರ್ಯಾ ರೈ ಅಭಿಷೇಕ್‌ ದಾಂಪತ್ಯದಲ್ಲಿ ಬಿರುಕು?!

Aishwarya Rai and Abhishek Bachchan : ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ (Aishwarya Rai and Abhishek Bachchan) 16 ವರ್ಷಗಳ ಹಿಂದೆ ಮದುವೆ ಆಗಿದ್ದರು. ಇವರಿಬ್ಬರು ಪರಸ್ಪರ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ಈ ಸುಖಿ ಸಂಸಾರದ ಬಗ್ಗೆ ಇದೀಗ ವದಂತಿಗಳು ಹರಡಿದ್ದು, ಐಶ್ವರ್ಯಾ ರೈ, ಅಭಿಷೇಕ್‌ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಇದಕ್ಕೆ ಕಾರಣವೇನು?

ಐಶ್ವರ್ಯಾ ರೈ (actress Aishwarya Rai) ಹಾಗೂ ಅಭಿಷೇಕ್ ಬಚ್ಚನ್ ಸಂಸಾರದಲ್ಲಿ ಬಿರುಕು ಮೂಡಿದೆ ಎಂಬ ಅನುಮಾನ ಬರಲು ಕಾರಣ ಇತ್ತೀಚಿನ ದಿನಗಳಲ್ಲಿ ಈ ದಂಪತಿ ಎಲ್ಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ಯಾವುದೇ ಪಾರ್ಟಿ- ಫಂಕ್ಷನ್ ಗೆ ಐಶ್ವರ್ಯಾ ರೈ ಒಬ್ಬರೇ ಭೇಟಿ ನೀಡುತ್ತಾರೆ. ಈ ವಿಚಾರವೇ ಇವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗೆ ಕಾರಣವಾಗಿದೆ.

ಅಲ್ಲದೆ, ಇತ್ತೀಚೆಗೆ ನಡೆದ ನೀತಾ ಮುಖೇಶ್ ಅಂಬಾನಿ (nitha mukesh Ambani) ಕಲ್ಚರಲ್ ಸೆಂಟರ್ ಉದ್ಘಾಟನೆಯ ಸಮಾರಂಭಕ್ಕೆ ಐಶ್ವರ್ಯಾ ರೈ ತಮ್ಮ ಪುತ್ರಿ ಆರಾಧ್ಯ ಬಚ್ಚನ್ (aradhya bacchan) ಜೊತೆಗೆ ಆಗಮಿಸಿದ್ದರು. ಹಲವು ಸಿನಿ ನಟ-ನಟಿಯರೂ ಬಂದಿದ್ದರು. ಆದರೆ, ಐಶ್ವರ್ಯಾ ರೈ ಜೊತೆಗೆ ಪತಿ ಅಭಿಷೇಕ್ ಬಚ್ಚನ್ ಹಾಜರಾಗಿರಲಿಲ್ಲ. ಹೀಗಾಗಿ ಇಬ್ಬರ ಮಧ್ಯೆ ಮನಸ್ತಾಪ ಇದೆ. ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇವರು ವಿಚ್ಛೇದನ (divorce) ಪಡೆದುಕೊಳ್ಳಲು ನಿರ್ಧರಿಸಿದ್ದಾರೆ ಎಂಬ ಗಾಸಿಪ್ ಹಬ್ಬಿದೆ.

ಸದ್ಯ ಈ ಎಲ್ಲಾ ವದಂತಿಗಳಿಗೆ ಐಶ್ವರ್ಯ ರೈ ಪತಿ ನಟ ಅಭಿಷೇಕ್ ಬಚ್ಚನ್ ತೆರೆ ಎಳೆದಿದ್ದಾರೆ. ಹೌದು, ಗಾಸಿಪ್ ಹರಡುತ್ತಿರುವವರ ಬಾಯಿಯನ್ನು ಮುಚ್ಚಿಸಿದ್ದಾರೆ. ಈ ಗಾಸಿಪ್ ಗಳ ಮಧ್ಯೆ, ಐಶ್ವರ್ಯ ರೈ ಹಾಗೂ ಆರಾಧ್ಯ ಇಬ್ಬರು ನೀತಾ ಅಂಬಾನಿ ಕಲ್ಚರಲ್ ಸೆಂಟರ್ ಈವೆಂಟ್‌ನಲ್ಲಿ ಭಾಗಿ ಆಗಿದ್ದ ಫೋಟೊವೊಂದನ್ನು ಅಭಿಮಾನಿಯೊಬ್ಬರು ಹಂಚಿಕೊಂಡಿದ್ದು, “ನನಗೆ ಇವರಿಬ್ಬರು ಅಚ್ಚುಮೆಚ್ಚು” ಎಂದು ಕ್ಯಾಪ್ಷನ್ ಹಾಕಿದ್ದರು. ನಿರೀಕ್ಷಿಸದ ವಿಷಯವೆಂದರೆ, ಅಭಿಮಾನಿಯ ಈ ಪೋಸ್ಟ್ ಗೆ ನಟ ಅಭಿಷೇಕ್ ಬಚ್ಚನ್ ಪ್ರತಿಕ್ರಿಯೆ ನೀಡಿದ್ದು, “ನನಗೂ ಕೂಡ ಇವರಿಬ್ಬರು ಅಚ್ಚುಮೆಚ್ಚು” ಎಂದು ಕಾಮೆಂಟ್ ಮಾಡಿದ್ದಾರೆ. ನಟ ಮಾಡಿರುವ ಈ ಒಂದು ಕಾಮೆಂಟ್ ನಿಂದ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ವಿಚಾರವಾಗಿ ಹರಡುತ್ತಿದ್ದ ಗಾಸಿಪ್ ಸ್ಥಬ್ದವಾಗಿದೆ. ಎಲ್ಲವೂ ಸರಿ ಇದೆ ಎಂದು ಒಂದು ಕಾಮೆಂಟ್ ನಲ್ಲಿ ತಿಳಿಸಿ, ಗಾಸಿಪ್ ಗೆ ತೆರೆ ಎಳೆದಿದ್ದಾರೆ.

 

ಇದನ್ನು ಓದಿ : Sharad Pawar : ಅದಾನಿ ಕುರಿತ ‘ಹಿಂಡನ್‌ಬರ್ಗ್‌ ವರದಿ ಸುಳ್ಳೆಂದು’ ಕಾಂಗ್ರೆಸ್‌ ನಿಲುವಿಗೆ ವಿರುದ್ಧವಾಡಿದ ಮಿತ್ರ ಪಕ್ಷ ಎನ್‌ಸಿಪಿ! ತೀವ್ರ ಕುತೂಹಲ ಕೆರಳಿಸಿ ಶರದ್ ಪಾವರ್ ಹೇಳಿಕೆ 

Leave A Reply

Your email address will not be published.