Sharad Pawar : ಅದಾನಿ ಕುರಿತ ‘ಹಿಂಡನ್‌ಬರ್ಗ್‌ ವರದಿ ಸುಳ್ಳೆಂದು’ ಕಾಂಗ್ರೆಸ್‌ ನಿಲುವಿಗೆ ವಿರುದ್ಧವಾಡಿದ ಮಿತ್ರ ಪಕ್ಷ ಎನ್‌ಸಿಪಿ! ತೀವ್ರ ಕುತೂಹಲ ಕೆರಳಿಸಿ ಶರದ್ ಪಾವರ್ ಹೇಳಿಕೆ

Sharad Pawar : ಚುನಾವಣೆಗಳು ಹತ್ತಿರವಾದಂತೆ ಯಾವ ಪಕ್ಷದಲ್ಲಿ ಯಾವ ಬದಲಾವಣೆಗಳು ನಡೆಯುತ್ತವೆ, ಏನೆಲ್ಲಾ ಬೆಳವಣಿಗೆಗಳು ಆಗುತ್ತವೆ ಎಂದು ಯಾರಿಂದಲೂ ಊಹಿಸಲೂ ಸಾಧ್ಯವಿಲ್ಲ. ಇದೀಗ ರಾಷ್ಟ್ರ ರಾಜಕಾರಣದಲ್ಲೂ ಅಂತದೇ ಬೆಳವಣಿಗೆಗಳು ನಡೆಯುತ್ತಿವೆ. ನೋಡಲು ಇವು ಸಣ್ಣ ವಿಚಾರಗಳಾದರೂ ಮುಂದಿನ ದಿನಗಳಲ್ಲಿ ಅವು ಬೆರೆಯೇ ತಿರುವು ಪಡೆಯಬಹುದು. ಅಂದಹಾಗೆ ಇದೀಗ ಅಚ್ಚರಿ ಎಂಬಂತೆ ಕಾಂಗ್ರೆಸ್‌ ಮಿತ್ರಪಕ್ಷವಾದ ಎನ್‌ಸಿಪಿ ನಾಯಕ ಶರದ್‌ ಪವಾರ್‌, ಕಾಂಗ್ರೆಸ್ ನಿಲುವಿಗೆ ವಿರುದ್ಧವಾಗಿ ‘ಹಿಂಡನ್‌ಬರ್ಗ್‌ ವರದಿ ಉದ್ದೇಶಿತ ವರದಿಯಂತಿದೆ’ ಎಂದು ಹೇಳಿದ್ದಾರೆ.

 

ಹೌದು, ಉದ್ಯಮಿ ಗೌತಮ್‌ ಅದಾನಿ ಔದ್ಯಮಿಕ ಅಕ್ರಮ ಎಸಗಿದ್ದಾರೆ ಎಂಬ ಅಮೆರಿಕ ಮೂಲದ ಹಿಂಡನ್‌ಬರ್ಗ್‌ ಕಂಪನಿ ನೀಡಿದ ವರದಿಯು ದೇಶದಲ್ಲಿ ರಾಜಕೀಯ ತಲ್ಲಣ ಸೃಷ್ಟಿಸಿದ ನಡುವೆಯೇ, ಗೌತಮ್‌ ಅದಾನಿ ವಿರುದ್ಧ ಸಮರ ಸಾರಿದ್ದ ಕಾಂಗ್ರೆಸ್‌ ನಿಲುವಿಗೆ ವಿರುದ್ಧವಾಗಿ ಅದರ ಮಿತ್ರಪಕ್ಷ ಎನ್‌ಸಿಪಿ ನಾಯಕ ಶರದ್‌ ಪವಾರ್‌ ( Sharad Pawar )  ಶುಕ್ರವಾರ ಎನ್‌ಡಿಟಿವಿಗೆ ಸಂದರ್ಶನದಲ್ಲಿ ‘ಹಿಂಡನ್‌ಬರ್ಗ್‌ ವರದಿ ಉದ್ದೇಶಿತ ವರದಿಯಂತಿದೆ’ ಎಂದು ಹೇಳಿ ಗೌತಮ್‌ ಅದಾನಿಯನ್ನು ಬೆಂಬಲಿಸಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಅವರು “ಹಿಂಡನ್‌ಬರ್ಗ್‌ (Hindenburg) ಬಗ್ಗೆ ನಮಗೆ ಗೊತ್ತೇ ಇರಲಿಲ್ಲ. ಈಗ ಅವರು (ಹಿಂಡನ್‌ಬರ್ಗ್‌) ಗೌತಮ್‌ ಅದಾನಿ (Gautam Adani) ಬಗ್ಗೆ ವರದಿ ನೀಡಿದ್ದಾರೆ. ಆ ಕಂಪನಿಯ ಹಿನ್ನೆಲೆ ಮುನ್ನೆಲೆ ಏನು? ಅವರು ನೀಡಿದ ವರದಿಗೆ ದೇಶದ ಆರ್ಥಿಕತೆಯೇ (Country Economy) ತಲ್ಲಣಗೊಂಡಿದೆ. ಹೀಗಾಗಿ ಇದೊಂದು ಬೇಕೆಂದೇ ನೀಡಿದ ಉದ್ದೇಶಿತ ವರದಿಯಂತಿದೆ’ ಎಂದು ಹೇಳಿದ್ದಾರೆ.

ಇದಲ್ಲದೆ, ‘ಅದಾನಿ ಹಗರಣದ ಬಗ್ಗೆ ಜಂಟಿ ಸದನ ಸಮಿತಿ (Joint Parliamentary Committee) (ಜೆಪಿಸಿ) (JPC) ತನಿಖೆಗೆ ಕಾಂಗ್ರೆಸ್‌ ಆಗ್ರಹಿಸುತ್ತಿದೆ. ಆದರೆ ಜೆಪಿಸಿಗೆ ಬಿಜೆಪಿ (BJP) ಸಂಸದರೇ ಮುಖ್ಯಸ್ಥರಾಗಿದ್ದಾರೆ. ಹೀಗಾಗಿ ಅವರು ನಿಷ್ಪಕ್ಷ ತನಿಖಾ ವರದಿ ನೀಡುತ್ತಾರೆ ಎನ್ನಲಾಗದು. ಅದರ ಬದಲು ಗೌತಮ್‌ ಅದಾನಿ ಪ್ರಕರಣ ಕುರಿತಂತೆ ತನಿಖೆಗೆ ಸುಪ್ರೀಂ ಕೋರ್ಟ್‌ (Supreme Court) ಸೂಚನೆ ನೀಡಿದೆ. ಅಲ್ಲಿ ನಿಷ್ಪಕ್ಷ ತನಿಖೆ ಸಾಧ್ಯ. ಹೀಗಾಗಿ ನಾನು ಜೆಪಿಸಿ ತನಿಖೆ ಬೆಂಬಲಿಸಲ್ಲ’ ಎಂದರು.

ಸಂಸತ್ತಿನ ಬಜೆಟ್‌ ಅಧಿವೇಶನದ ಸಮಯದಲ್ಲಿ ವಿಪಕ್ಷಗಳು ತೋರಿದ ಒಗ್ಗಟ್ಟನ್ನು ಮುಂದುವರೆಸಲು ಬಯಸಿರುವ ಕಾಂಗ್ರೆಸ್‌, ಈ ಒಕ್ಕೂಟವನ್ನು 2024ರ ಚುನಾವಣೆವರೆಗೂ ಮುಂದುವರೆಸಲು ನಿರ್ಧರಿಸಿದೆ. ಅಲ್ಲದೇ ಇತ್ತೀಚೆಗೆ ನಡೆದ ರಾಹುಲ್‌ ಗಾಂಧಿ ಪ್ರಕರಣವನ್ನು ಬಳಸಿಕೊಂಡು ವಿಪಕ್ಷಗಳನ್ನು ಒಂದುಗೂಡಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆಯೇ ಕಾಂಗ್ರೆಸ್ ನ ಪ್ರಮುಖ ಮಿತ್ರಪಕ್ಷವಾದ ಎನ್‌ಸಿಪಿ, ಕಾಂಗ್ರೆಸ್ ಗೆ ವಿರುದ್ಧವಾಗಿ ನಡೆಯುತ್ತಿರೋದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

 

ಇದನ್ನು ಓದಿ : Fastest Flight : ಕೇವಲ 47 ಸೆಕುಂಡುಗಳಲ್ಲಿ ದೂರದ ಸ್ಥಳಕ್ಕೆ ತಲುಪಿಸುವ ವಿಮಾನ! ವಿಚಿತ್ರ ಆದರೂ ಸತ್ಯ! 

2 Comments
  1. account binance aperto says

    Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me?

  2. Mag-sign up sa Binance says

    Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me?

Leave A Reply

Your email address will not be published.