Queen of Reels : ಬಂದಳು ನೋಡಿ‌ ರೀಲ್ಸ್ ರಾಣಿ, ರೀಲ್ಸ್ ರೀಲ್ಸ್ ಎನ್ನುತ್ತಳೇ ಯುವಕನ ಕತ್ತು ಕೊಯ್ದಳು! ಕಾರಣವೇನು ಗೊತ್ತಾ?

Queen of Reels  : ರೀಲ್ಸ್ ಮಾಡುವ ನೆಪವೊಡ್ಡಿ ಅಪ್ರಾಪ್ತ ವಯಸ್ಸಿನ ಹುಡುಗಿ ಯುವಕನೋರ್ವನನ್ನು ಕೊಲೆ ಮಾಡಲು ಯತ್ನಿಸಿದ ಆಘಾತಕಾರಿ ಘಟನೆ ರಾಣೆಬೆನ್ನೂರಿನಲ್ಲಿ (Ranebennur) ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಹರಪನಹಳ್ಳಿ ತಾಲೂಕಿನ ಮೈದೂರ ಗ್ರಾಮದ ದೇವೇಂದ್ರಗೌಡ ಕಾಡನಗೌಡ ಮಂಡಗತ್ತಿ (27) ಎಂದು ಹೇಳಲಾಗಿದೆ.

 

ದೇವೇಂದ್ರಗೌಡನ ಜೊತೆಗೆ ಯುವತಿಗೆ ನಿಶ್ಚಿತಾರ್ಥವಾಗಿತ್ತು (engagement). ಈಕೆ ತಾಲೂಕಿನ ಗುಡಿಹೊನ್ನತ್ತಿ ಗ್ರಾಮದ ಹುಡುಗಿ ಎಂದು ಹೇಳಲಾಗಿದೆ. ಏ.6ರಂದು ಆಕೆಯ ಜನ್ಮದಿನವಾಗಿದ್ದು, ದೇವೇಂದ್ರಗೌಡ ಆಕೆಯನ್ನು ಭೇಟಿಯಾಗಿ, ಉಡುಗೊರೆ ಕೊಡಲು ರಾಣೆಬೆನ್ನೂರಿಗೆ ಬಂದಿದ್ದ ಎನ್ನಲಾಗಿದೆ. ಆದರೆ ಈಕೆ ಏನು ಮಾಡಿದಳು ಗೊತ್ತಾ? ಇವತ್ತು ನನ್ನ ಜನ್ಮದಿನ ನಿನ್ನನ್ನು ವಿಶೇಷವಾದ ಸ್ಥಳಕ್ಕೆ ಕರದೊಯ್ಯತ್ತೇನೆಂದು ಆತನನ್ನು ಪರಲೋಕಕ್ಕೆ ಕಳಿಸುವ ಪ್ಲಾನ್ ಹಾಕಿದ್ದಳು ಈ ಪೋರಿ. ಅಷ್ಟಕ್ಕೂ ಆತನ ಸಾವಿನಿಂದ ಈಕೆಗೇನು ಲಾಭ? ಕೊಲೆ (murder) ಸಂಚು ಹೂಡಿದ್ದಾದರೂ ಏಕೆ? ಇಲ್ಲಿದೆ ನೋಡಿ ಇಂಟೆರೆಸ್ಟಿಂಗ್ ವಿಚಾರ.

ದೇವೇಂದ್ರಗೌಡನನ್ನು ಸುಂದರವಾದ, ವಿಶೇಷವಾದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು, ಆಟೋ ರಿಕ್ಷಾದಲ್ಲಿ ನಗರದ ಹೊರವಲಯದ ನಿರ್ಜನ ಪ್ರದೇಶವಾದ ಸ್ವರ್ಣ ಪಾರ್ಕ್‌ಗೆ ಕರೆದುಕೊಂಡು ಹೋದಳು. ಅಲ್ಲಿಗೆ ಹೋದ ನಂತರ, ನಿನಗೊಂದು ಸರ್ಪ್ರೈಸ್ ಇದೆ ಎಂದಳು. ಜತೆಗೆ (Queen of Reels) ರೀಲ್ಸ್ ಕೂಡ ಮಾಡಬೇಕು, ಯೇಸುವಿನ ರೀತಿಯಲ್ಲಿ ರೀಲ್ಸ್ (reels) ಮಾಡೋಣ ಎಂದು ಆತನನ್ನು ನಂಬಿಸಿ, ಅದೇ ರೀತಿಯಲ್ಲಿ ಪಾರ್ಕ್ (park) ಕಬ್ಬಿಣದ ಕಾಂಪೌಂಡ್ಗೆ ಆತನ ಎರಡೂ ಕೈಗಳನ್ನು ಅಗಲಿಸಿ ವೇಲ್ನಿಂದ ಕಾಂಪೌಂಡ್‌ಗೆ ಕಟ್ಟಿದಳು. ಕಣ್ಣಿಗೆ ಬಟ್ಟೆಯೂ ಕಟ್ಟಿದಳು. ಈ ಪೋರಿಯ ಮಾಸ್ಟರ್ ಪ್ಲ್ಯಾನೆಟ್ ಅರಿಯದ ಯುವಕ ಆಕೆ ಹೇಳಿದಂತೆ ಕೇಳಿದ, ಎಷ್ಟಾದರೂ ಮುಂದೆ ತಾನು ಮದುವೆಯಾಗುವ ಹುಡುಗಿ ಅಲ್ವಾ!! ಹಾಗಾಗಿ ಈತನಿಗೆ ಯುವತಿಯ ಪ್ಲ್ಯಾನ್ ಸ್ವಲ್ಪವೂ ಗೊತ್ತಾಗಲಿಲ್ಲ. ಯೋಜನೆಗೆ ಸಿದ್ಧತೆ ಆಯಿತು. ಇನ್ನೇನು ಒಂದೇ ಸಮನೆ ಚಾಕುವಿನಿಂದ ಯುವಕ ಕುತ್ತಿಗೆ ಕೊಯ್ದಿದ್ದಾಳೆ. ಭಯಭೀತನಾದ ಆತ ಕೂಡಲೇ ಆಕೆಯನ್ನು ಒದ್ದಿದ್ದಾನೆ.

ಒದ್ದರೂ ಮತ್ತೆ ಎದ್ದು ಬಂದು ಯುವತಿ, ನಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೀನಿ. ನೀನು ನನ್ನ ಜತೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತೀಯಾ? ನನ್ನನ್ನು ಮದುವೆಯಾಗಲು ನೀನೇ ಇರುವುದಿಲ್ಲ ಎಂದೆನ್ನುತ್ತಾ ಮತ್ತೆ ಎರಡೂ ಬಾರಿ ಚಾಕೂವಿನಿಂದ ಆತನಿಗೆ ಇರಿದಿದ್ದಾಳೆ. ಅಷ್ಟರಲ್ಲಿ ಆತ ಹೇಗೋ ಕೈ ಕಟ್ಟಿದ್ದನ್ನು ಬಿಡಿಸಿಕೊಂಡು ಆಕೆಯನ್ನು ಹಿಡಿದುಕೊಂಡಿದ್ದಾನೆ. ಆತನನ್ನು ಸಾಯಿಸಲಾಗಲಿಲ್ಲ, ಇನ್ನು ಸಿಕ್ಕಿಬೀಳುತ್ತೇನೆಂದು ಹೇಗೋ ಆತನ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಬಾಲಕಿ ಅಲ್ಲಿಂದ ಪರಾರಿಯಾಗಿದ್ದಾಳೆ.

ಇತ್ತ ಯುವಕ ಗಾಯಗೊಂಡು, ಕಿರುಚಾಡಲು ಶುರುಮಾಡಿದ್ದು, ಹೇಗೂ ನಿರ್ಜನ ಪ್ರದೇಶ ಯಾರು ಸುಳಿವೂ ಇರಲಿಲ್ಲ. ಆದರೆ, ಯುವಕನ ಅದೃಷ್ಟಕ್ಕೆ ಈತನ ಕೂಗಾಟ ಕೇಳಿದ ದಾರಿಹೋಕರು
ಆತನ ಬಳಿ ಧಾವಿಸಿದ್ದಾರೆ. ಯುವಕ ಪರಿಸ್ಥಿತಿ ಕಂಡು ಕೂಡಲೇ ಅತನನ್ನು ದಾವಣಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಸದ್ಯ ಯುವಕ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಮೆರೆಗೆ ಪೊಲೀಸರು ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ವಶಕ್ಕೆ ಪಡೆದು ಬಾಲ ಮಂದಿರಕ್ಕೆ ದಾಖಲಿಸಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃತ್ಯ ನಡೆಯುವ ಹಿಂದಿನ ದಿನಗಳಲ್ಲಿ ಬಾಲಕಿ ತನ್ನ ಪ್ರಿಯಕರನ ಜತೆ ಫೋನ್‌ನಲ್ಲಿ ಮಾತನಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಇದನ್ನು ಓದಿ : Gas Price Reduction : ಗ್ರಾಹಕರಿಗೆ ಬಿಗ್ ರಿಲೀಫ್! ಇಂದಿನಿಂದ ಅನಿಲ ದರ ಇಳಿಕೆ! 

3 Comments
  1. MichaelLiemo says

    ventolin online usa: Buy Albuterol for nebulizer online – buy ventolin australia
    ventolin albuterol inhaler

  2. Josephquees says

    rybelsus price: buy rybelsus – rybelsus generic

  3. Josephquees says

    prednisone 5mg coupon: how much is prednisone 10 mg – prednisone 2.5 mg price

Leave A Reply

Your email address will not be published.