Govt Job Rules: ಸರಕಾರಿ ನೌಕರರೇ ಗಮನಿಸಿ, ಟ್ಯಾಟೂ ಹಾಕಿಸಿಕೊಂಡರೆ ಸರ್ಕಾರಿ ಉದ್ಯೋಗಕ್ಕೆ ಕತ್ತರಿ ಬೀಳೋದು ಗ್ಯಾರಂಟಿ!

Share the Article

Govt Job Rules : ಟ್ಯಾಟೂ ಪ್ರಿಯರೇ ಗಮನಿಸಿ, ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಟ್ರೆಂಡ್ ಆಗಿ ಬಿಟ್ಟಿದೆ. ನಮ್ಮ ನೆಚ್ಚಿನ ಚಿತ್ರ, ನಾಯಕರ ಫೋಟೊ, ಹೆಸರು ದೇಹದ ಮೇಲೆಲ್ಲ ಹಚ್ಚೆ ಹಾಕಿಸಿಕೊಳ್ಳುವ ಫ್ಯಾಶನ್ ಹೆಚ್ಚಾಗಿದ್ದು, ಆದರೆ, ಹೀಗೆ ಹಚ್ಚೆ(Tattoo)ಹಾಕಿಸಿಕೊಳ್ಳುವ ಮೊದಲು(Govt Job Rules) ಒಂದು ವಿಚಾರವನ್ನು ಗಮನಿಸಬೇಕು. ನೀವೇನಾದರೂ ಸರಕಾರಿ ನೌಕರಿ ಪಡೆಯಬೇಕು ಎಂದು ಬಯಸಿದರೆ ಹಚ್ಚೆ ಹಾಕಿಸಿಕೊಳ್ಳದೇ ಇರುವುದೇ ಒಳಿತು. ಏಕೆಂದರೆ ಹಚ್ಚೆ ಹಾಕಿಸಿಕೊಂಡರೆ ನಿಮ್ಮನ್ನು ಸರ್ಕಾರಿ ಕೆಲಸದಿಂದ ದೂರವಿರಿಸಲಾಗುತ್ತದೆ.

ಟ್ಯಾಟೂ ಸಂಬಂಧ ಹೊಸ ಪ್ರಕರಣವೊಂದು ಮುನ್ನಲೆಗೆ ಬಂದಿದ್ದು, ಒಬ್ಬ ವ್ಯಕ್ತಿಯು ತನ್ನ ಬಲಗೈಯ ಹಿಂಭಾಗದಲ್ಲಿ ಧಾರ್ಮಿಕ ಹಚ್ಚೆ ಹಾಕಿಸಿಕೊಂಡಿದ್ದ ಎನ್ನಲಾಗಿದೆ. ಆತ CRPF, NIA ಮತ್ತು ಇತರ ಸೇನಾ ಪಡೆಗಳಿಗೆ ನೇಮಕಾತಿಗಾಗಿ ಪರೀಕ್ಷೆ ಬರೆದಾಗ ಆತನನ್ನು ಅನರ್ಹ ಮಾಡಲಾಗಿದೆಯಂತೆ. ಹೀಗಾಗಿ, ಆತ ದೆಹಲಿ ಹೈಕೋರ್ಟ್ಗೆ (Delhi Highcourt) ಮೊರೆ ಹೋಗಿದ್ದನಂತೆ. ಆದರೆ, ನ್ಯಾಯಾಲಯದಲ್ಲಿ (Court), ಪ್ರಾಧಿಕಾರದ ವಕೀಲರು (Lawyers)ಮನವಿಯನ್ನು ವಿರೋಧಿಸಿದ್ದು,ಯುವಕನ ಬಲಗೈಯನ್ನು ಸೆಲ್ಯೂಟ್ ಮಾಡಲು ಬಳಕೆ ಮಾಡಲಾಗುತ್ತದೆ. ಹೀಗಾಗಿ, ಗೃಹ ಸಚಿವಾಲಯದ ಸಂಬಂಧಿತ ಮಾರ್ಗಸೂಚಿಗಳ ಪ್ರಕಾರ ಇದು ಸ್ವೀಕಾರಾರ್ಹವಲ್ಲ ಎಂದು ಕೋರ್ಟ್ ನಿರ್ಣಯ ತಿಳಿಸಿದೆ.

ಸರ್ಕಾರಿ ಉದ್ಯೋಗಕ್ಕೆ(Government Job)ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು (Candidates) ಟ್ಯಾಟೂಗೆ ಸಂಬಂಧಿಸಿದ ನಿಯಮಗಳನ್ನು ತಿಳಿದುಕೊಂಡು ಗಮನ ಹರಿಸುವುದು ಒಳ್ಳೆಯದು. ಸರ್ಕಾರಿ ನೌಕರಿಯ ಅಭಿಲಾಷೆ ಹೊಂದಿದವರು ಟ್ಯಾಟೂ ಹಾಕಿಸಿಕೊಂಡರೆ ಸರ್ಕಾರಿ ಕೆಲಸದ ಆಯ್ಕೆಯಿಂದ ವಜಾ ಆಗುವ ಸಾಧ್ಯತೆ ದಟ್ಟವಾಗಿದೆ. ಭಾರತದಲ್ಲಿ ದೇಹದಲ್ಲಿ ಹಚ್ಚೆ ಹಾಕಿಸಿಕೊಳ್ಳಲು ನಿರ್ಬಂಧವಿರುವ ಹಲವು ಸರ್ಕಾರಿ ಉದ್ಯೋಗಗಳಿವೆ. ಇದಕ್ಕೆ ಕೆಲ ಕಾರಣಗಳು ಕೂಡ ಇದೆ.

ಹಚ್ಚೆಗಳು ಅನೇಕ ರೋಗಗಳನ್ನು(Health Problems) ಉಂಟು ಮಾಡಬಹುದು. ಇದು ಎಚ್ ಐವಿ(HIV), ಡರ್ಮಟೈಟಿಸ್, ಹೆಪಟೈಟಿಸ್ ಎ ಮತ್ತು ಬಿ ಯಂತಹ ರೋಗಗಳ ಅಪಾಯ ಕಂಡುಬರುವ ಸಾಧ್ಯತೆಗಳಿವೆ. ಹಚ್ಚೆ ಹಾಕಿಕೊಂಡ ವ್ಯಕ್ತಿಗೆ ಕೆಲಸಕ್ಕಿಂತ ಅವರ ಹವ್ಯಾಸಗಳು (Habits) ಮುಖ್ಯವಾಗಿರಬಹುದು ಎಂದು ಪರಿಗಣಿಸುವ ಸಾಧ್ಯತೆಯಿದೆ. ತನ್ನ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ವ್ಯಕ್ತಿಯು ಗಂಭೀರತೆ, ಶಿಸ್ತನ್ನೂ ಹೊಂದಿಲ್ಲ ಎಂದು ಕೂಡ ಪರಿಗಣಿಸುವ ಸಾಧ್ಯತೆಯಿದೆ. ಹಚ್ಚೆ ಹಾಕಿಸಿಕೊಂಡವರು ಭದ್ರತಾ ಪಡೆಗಳಿಗೆ ನಿಯೋಜನೆಯಾದರೆ, ಹಚ್ಚೆಯ ಮೂಲಕ ಆ ವ್ಯಕ್ತಿಯನ್ನು ಸುಲಭವಾಗಿ ಗುರುತಿಸಬಹುದು. ಹೀಗಾಗಿ, ಭದ್ರತಾ ದೃಷ್ಟಿಯಿಂದ(Security) ಇದು ಅಪಾಯ ಎಂದು ಪರಿಗಣಿಸಲಾಗುತ್ತದೆ.
ಟ್ಯಾಟೂ ಹಾಕಿಸಿಕೊಂಡರೆ ಅನೇಕ ಸರ್ಕಾರಿ ಕೆಲಸಗಳಿಂದ ವಂಚಿತರಾಗಬೇಕಾಗುತ್ತದೆ. ಭಾರತೀಯ ಸೇನೆ, ಭಾರತೀಯ ನೌಕಾಪಡೆ, ಭಾರತೀಯ ವಾಯುಪಡೆ, ಭಾರತೀಯ ಕೋಸ್ಟ್ ಗಾರ್ಡ್, ಪೋಲೀಸ್ ಇಲಾಖೆ ಹುದ್ದೆಗಳಲ್ಲದೇ, ಭಾರತೀಯ ಆಡಳಿತ ಸೇವೆ (IAS), ಭಾರತೀಯ ಪೊಲೀಸ್ ಸೇವೆ(IPS), ಆಂತರಿಕ ಆದಾಯ ಸೇವೆ (IRS), ಭಾರತೀಯ ವಿದೇಶಾಂಗ ಸೇವೆ(IFS), ಅಭ್ಯರ್ಥಿಗಳಿಗೆ ಟ್ಯಾಟೂ ನಿರ್ಬಂಧ ಮಾಡಲಾಗಿದೆ. ಈ ಹುದ್ದೆಗಳಿಗೆ ದೇಹದ ಮೇಲೆ ಹಚ್ಚೆ ಇದ್ದರೆ ಅಭ್ಯರ್ಥಿಯನ್ನು ನಿರಾಕರಿಸಲಾಗುತ್ತದೆ. ಇದನ್ನು ದೈಹಿಕ ಪರೀಕ್ಷೆಯ ಮೂಲಕ ಪರಿಶೀಲನೆ ಮಾಡಲಾಗುತ್ತದೆ. ಹೀಗಾಗಿ, ನೀವು ಕೂಡ ಸರಕಾರಿ ನೌಕರಿ ಬೇಕು ಎನ್ನುವುದಾದರೆ ಟ್ಯಾಟು ಹಾಕಿಸಿಕೊಳ್ಳುವ ಆಸೆಯನ್ನು ಬಿಡುವುದು ಒಳ್ಳೆಯದು.

 

ಇದನ್ನು ಓದಿ : 2023 HAYABUSA : ಹಯಾಬುಸಾಗಾಗಿ ಸುಜುಕಿ ಬಿಡುಗಡೆ ಮಾಡಿದೆ ಹೊಸ ರೋಮಾಂಚಕ ಬಣ್ಣ!! 

2 Comments
  1. Index Home says

    Can you be more specific about the content of your article? After reading it, I still have some doubts. Hope you can help me. http://1985962.cryptostarthome.com

  2. binance says

    Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me?

Leave A Reply

Your email address will not be published.