Electric Car: ದೇಶದ ಅಗ್ಗದ ಎಲೆಕ್ಟ್ರಿಕ್ suv ಕಾರ್ ಯಾವುದು ಗೊತ್ತಾ?

Cheapest Electric Car : ದಿನಂಪ್ರತಿ ಹೊಸ ಹೊಸ ವೈಶಿಷ್ಟ್ಯದ ಆಕರ್ಷಕ ಲುಕ್ ಗ್ರಾಹಕರ ಮನ ಸೆಳೆಯುವ ಕಾರುಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟು ಟ್ರೆಂಡ್ ಸೃಷ್ಟಿ ಮಾಡುತ್ತಲೇ ಇರುತ್ತವೆ. ಇತ್ತೀಚೆಗೆ ಹೆಚ್ಚಿನ ಮಂದಿ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಟಾಟಾ ತನ್ನ(Tata Nexon) ನೆಕ್ಸಾನ್, ಟಿಯಾಗೊ(Tata Tiago)ಮತ್ತು ಟಿಗೊರ್ (TATA Tigor)ಅನ್ನು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಮಾರಾಟ ಮಾಡುತ್ತಿದೆ. ಕಂಪನಿಯ ಅಗ್ಗದ ಎಲೆಕ್ಟ್ರಿಕ್ (Cheapest Electric Car) ಕಾರು ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲು ಅಣಿಯಾಗಿದೆ.

ದೇಶದ ನಂ.1 ಎಲೆಕ್ಟ್ರಿಕ್ ಕಾರು ಮಾರಾಟ ಕಂಪನಿಯಾಗಿ ಗುರುತಿಸಿಕೊಂಡಿರುವ ಟಾಟಾ ಮೋಟಾರ್ಸ್(Tata Motors) ಭಾರತೀಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. 2023ರ ಆಟೋ ಎಕ್ಸ್‌ಪೋದಲ್ಲಿ ಟಾಟಾ ಮೋಟಾರ್ಸ್ ತನ್ನ ಹ್ಯಾರಿಯರ್ ಎಸ್‌ಯುವಿಯ EV(Tata Harrier EV) ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಹ್ಯಾರಿಯರ್ EVಯನ್ನು ಟಾಟಾದ ಪೋರ್ಟ್‌ಫೋಲಿಯೊದಲ್ಲಿ ನೆಕ್ಸಾನ್ EVಯ ಮೇಲೆ ಇರಿಸಲಾಗುತ್ತದೆ. ಟಾಟಾ ಮೋಟಾರ್ಸ್ ಇದೀಗ, ಮತ್ತೊಂದು ಎಲೆಕ್ಟ್ರಿಕ್ SUVಯನ್ನು ಬಿಡುಗಡೆ ಮಾಡಲು ರೆಡಿಯಾಗಿದೆ. ವರದಿಗಳ ಅನುಸಾರ, ಟಾಟಾ ಪಂಚ್ ಮೈಕ್ರೋ ಎಸ್‌ಯುವಿಯ(Tata Punch micro SUV) ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಟಾಟಾ ನೆಕ್ಸನ್ EV ದೊಡ್ಡ ಯಶಸ್ಸು ಆಗಿದ್ದು, ದೇಶದಲ್ಲಿಯೇ ಅತಿಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ SUV ಆಗಿದ್ದು, ತನ್ನದೇ ಆದ ಇತಿಹಾಸ ಸೃಷ್ಟಿ ಮಾಡಿದೆ. ಟಾಟಾ ತನ್ನ ಟಿಯಾಗೊ ಮತ್ತು ಟಿಗೊರ್ ಅನ್ನು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಮಾರಾಟ ಮಾಡುತ್ತಿದ್ದು, ಆದರೆ ಕಂಪನಿಯು ತನ್ನ EV ಶ್ರೇಣಿಯನ್ನು ಮತ್ತಷ್ಟು ವಿಸ್ತರಿಸುವುದರ ಮೇಲೆ ಕೇಂದ್ರೀಕರಿಸಿದ್ದು, ಕಂಪನಿಯ ಅಗ್ಗದ ಎಲೆಕ್ಟ್ರಿಕ್ ಕಾರು ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ.ಪಂಚ್ ಇವಿ ಬಗ್ಗೆ ಟಾಟಾ ಮೋಟಾರ್ಸ್‌ನಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಒಂದು ವೇಳೆ ಇದು ಬಿಡುಗಡೆಯಾದರೆ, ಭಾರತದಲ್ಲಿನ ಅತ್ಯಂತ ಅಗ್ಗದ ಎಲೆಕ್ಟ್ರಿಕ್ SUV ಆಗಲಿದ್ದು, ಅಂದಾಜು ಬೆಲೆ 10 ರಿಂದ 14 ಲಕ್ಷ ರೂ. ಇರಲಿದೆ ಎಂದು ಹೇಳಲಾಗುತ್ತಿದೆ.

ವರದಿಗಳ ಅನುಸಾರ, ಟಾಟಾ ಮೋಟಾರ್ಸ್ 2023ರ ಕೊನೆಯಲ್ಲಿ, ಪಂಚ್ ಮೈಕ್ರೋ ಎಸ್ಯುವಿಯನ್ನು ಬಿಡುಗಡೆ ಮಾಡಲು ಯೋಜನೆ ಮಾಡಲಾಗಿದೆ. ಈ ವಾಹನವು Gen 2 (Sigma) ಪ್ಲಾಟ್‌ಫಾರ್ಮ್ ಅನ್ನು ಅವಲಂಬಿತವಾಗಿದೆ. ಇದು ಟಾಟಾ ಆಲ್ಟ್ರೊಜ್‌ನಲ್ಲಿ ಬಳಸಲಾದ ALFA ಆರ್ಕಿಟೆಕ್ಚರ್‌ನ ಮಾರ್ಪಡಿಸಿದ ಆವೃತ್ತಿಯಾಗಿದ್ದು, ಪಂಚ್ EV 2 ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ತರಲು ಅಣಿಯಾಗಿದೆ. 1 ಬ್ಯಾಟರಿ ಪ್ಯಾಕ್ Tiago EV ನಂತೆ 26kWh ಆಗಿದ್ದು, ಇನ್ನೊಂದು Nexon EV ಯಂತಹ 30.2kWh ಬ್ಯಾಟರಿ ಪ್ಯಾಕ್ ಆಗಿರುವ ಸಾಧ್ಯತೆಯಿದೆ.

 

ಇದನ್ನು ಓದಿ : Magnite Offer : ರೂ.50 ಸಾವಿರದವರೆಗೆ ಈ ಕಾರಿನ ಮೇಲೆ ಭಾರೀ ರಿಯಾಯಿತಿ, ಕೆಲವೇ ದಿನಗಳು ಮಾತ್ರ! 

2 Comments
  1. binance account creation says

    Thank you for your sharing. I am worried that I lack creative ideas. It is your article that makes me full of hope. Thank you. But, I have a question, can you help me?

  2. binance says

    Your point of view caught my eye and was very interesting. Thanks. I have a question for you.

Leave A Reply

Your email address will not be published.