Death threats to Modi, Yogi Adityanath : 16ರ ಪೋರನಿಂದ ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್​ಗೆ ಪ್ರಾಣ ಬೆದರಿಕೆ! ನಂತರ ಅಗಿದ್ದೇನು ಗೊತ್ತಾ?

Death threats to Modi, Yogi Adityanath : ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಉತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ (Yogi Adityanath) ಅವರನ್ನು ಕೊಲೆ ಮಾಡುವುದಾಗಿ 16ರ ಪೋರನೊಬ್ಬ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಇ-ಮೇಲ್ (E-Mail) ಸಂದೇಶ ಕಳುಹಿಸಿದ್ದಾನೆ.(Death threats to Modi, Yogi Adityanath)

 

ಹೌದು, ಬಿಹಾರ ಲಕ್ನೋ ಮೂಲದ 16 ವರ್ಷದ ಬಾಲಕನೊಬ್ಬ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ರನ್ನು ಹತ್ಯೆ ಮಾಡುವುದಾಗಿ ಮಾಧ್ಯಮ ಸಂಸ್ಥೆಗೆ ಇಮೇಲ್ ಕಳುಹಿಸಿದ್ದಾನೆ. ಸಂಬಂಧ ವಾಹಿನಿಯ ಸಿಇಓ ನೋಯ್ಡಾದ ಸೆಕ್ಟರ್​-20 ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೀಗಾಗಿ ಹದಿಹರೆಯದ ಬಾಲಕನನ್ನು ನೋಯ್ಡಾ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ 5 ರಂದು ಇಲ್ಲಿನ ಸೆಕ್ಟರ್ 20 ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ. ಬೆದರಿಕೆ ಸಂದೇಶವನ್ನು ಒಳಗೊಂಡಿರುವ ಇಮೇಲ್ ಕಳುಹಿಸುವವರನ್ನು ಪತ್ತೆಹಚ್ಚಲು ತನಿಖಾ ತಂಡಗಳು ಕೂಡ ಕಷ್ಟಪಟ್ಟಿವೆ. ತನಿಖೆಯ ಆಧಾರದ ಮೇಲೆ, ಇಮೇಲ್ ಕಳುಹಿಸುವವರನ್ನು ಪತ್ತೆಹಚ್ಚಲಾಗಿದ್ದು ಲಕ್ನೋದ ಚಿನ್ಹಾಟ್ ಪ್ರದೇಶದಲ್ಲಿ ಈಮೇಲ್​ನ ಮೂಲ ಕಂಡುಬಂದಿದೆ. ಈ ಮೇಲ್​ಅನ್ನು ಕಳುಹಿಸಿದವನು ಶಾಲಾ ಬಾಲಕನಾಗಿದ್ದಾನೆ. ಈತ ತನ್ನ 11 ನೇ ತರಗತಿಯನ್ನು ಪೂರ್ಣಗೊಳಿಸಿದ್ದು 12ನೇ ತರಗತಿಗೆ ಪ್ರವೇಶಿಸಲಿದ್ದಾನೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳು 153A (1b) (ಸಾಮರಸ್ಯ ಕಾಪಾಡಲು ಪೂರ್ವಾಗ್ರಹ ಪೀಡಿತ ಅಥವಾ ಸಾರ್ವಜನಿಕ ನೆಮ್ಮದಿಗೆ ಭಂಗ ತರುವಂತಹ ಕೃತ್ಯ), 505 (1b) (ಸಾರ್ವಜನಿಕರಿಗೆ ಭಯ ಅಥವಾ ಎಚ್ಚರಿಕೆಯನ್ನು ಉಂಟುಮಾಡುವ, ಅಥವಾ ಯಾರಿಗಾದರೂ ಅಪಾಯವನ್ನುಂಟುಮಾಡುವ ಕ್ರಿಯೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಎಸಿಪಿ ರಜನೀಶ್ ವರ್ಮಾ ಅವರು “ಬೆದರಿಕೆ ಇ-ಮೇಲ್​ಗಳು ಆಗಾಗ ಸುದ್ದಿ ವಾಹನಿಗಳಿಗೆ ಬರುತ್ತಿರುತ್ತವೆ. ಈ ಕುರಿತು ಮಾಧ್ಯಮಗಳು ನಮಗೆ ದೂರು ನೀಡುತ್ತಿದ್ದು, ನಾವು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಈ ಬಾರಿ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್​ ಅವರಿಗೆ ಪ್ರಾಣ ಬೆದರಿಕೆ ಹಾಕಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿ ವಿರುದ್ಧ ಹಲವು ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ” ಎಂದು ಹೇಳಿದ್ದಾರೆ.

1 Comment
  1. I don’t think the title of your article matches the content lol. Just kidding, mainly because I had some doubts after reading the article.

Leave A Reply

Your email address will not be published.