Aeroplane Rules: ವಿಮಾನ ಪ್ರಯಾಣ ಮಾಡುವಾಗ ಮೊಬೈಲ್ ಏರೋಪ್ಲೇನ್ ಮೋಡ್ ನಲ್ಲಿ ಇಡಲು ಹೇಳುವುದೇಕೆ ? ಇಲ್ಲಿದೆ ನೋಡಿ ಉತ್ತರ!

Aeroplane Rules: ಸ್ಮಾರ್ಟ್​​ಫೋನ್ (Smart Phone)ಬಳಕೆ ಮಾಡುವ ಹೆಚ್ಚಿನ ಮಂದಿ ನೆಟ್ವರ್ಕ್ ಸಮಸ್ಯೆ ಆದಾಗ ಇಲ್ಲವೇ ವೇಗವಾಗಿ ಚಾರ್ಜ್ (Speed Charge) ಮಾಡಲು ಏರೋಪ್ಲೇನ್ ಮೋಡ್ ಗೆ (Aeroplane Mode)ಹಾಕುವುದು ಗೊತ್ತಿರಬಹುದು. ಒಮ್ಮೆ ಏರೋಪ್ಲೇನ್ ಮೋಡ್ ನಲ್ಲಿ ಮೊಬೈಲ್(Mobile) ಇಟ್ಟರೆ ಕರೆ, ಮೆಸ್ಸೇಜ್, ಇಂಟರ್ನೆಟ್ ಇನ್ನಿತರ ಚಟುವಟಿಕೆಗಳನ್ನು ಬಳಸಲು ಸಾಧ್ಯವಿಲ್ಲ. ಆದರೆ ಫ್ಲೈಟ್‌ನಲ್ಲಿ(Aeroplane) ಸಂಚರಿಸುವಾಗ ಮೊಬೈಲ್ ಏರೋ​ಪ್ಲೇನ್ ಮೋಡ್‌ನಲ್ಲಿಡಬೇಕು(Aeroplane Rules) ಎನ್ನುವುದನ್ನು ಕೇಳಿರಬಹುದು! ಇದಕ್ಕೆ ಕಾರಣವೇನು ಗೊತ್ತಾ?

 

ವಿಮಾನ ಪ್ರಯಾಣ ಮಾಡುವ ಸಂದರ್ಭದಲ್ಲಿ ನಿಮ್ಮ ಮೊಬೈಲ್ ಫೋನ್’ ಅನ್ನು ಏರೋಪ್ಲೇನ್ ಮೋಡ್ ಗೆ ಹಾಕಬೇಕೆಂದು ಗಗನಸಖಿಯರು (Air Hostess)ಮೊದಲೇ ಸೂಚನೆ ನೀಡಲಾಗುತ್ತದೆ. ಒಂದು ವೇಳೆ ಹಾರಾಟದ ಸಮಯದಲ್ಲಿ ಫೋನ್ ಅನ್ನು ಏರೋಪ್ಲೇನ್ ಮೋಡ್‌ನಲ್ಲಿ ಇಟ್ಟರೆ, ಏನಾಗುತ್ತದೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ವಿಮಾನದಲ್ಲಿ ಸಂಚರಿಸುವಾಗ ಎಲೆಕ್ಟ್ರಾನಿಕ್ಸ್​ ಡಿವೈಸ್​ಗಳನ್ನು(Electronic Device) ಬಳಕೆ ಮಾಡಿದರೆ ಇದರಿಂದ ಬರುವಂತಹ ಸಿಗ್ನಲ್​ಗಳು ವಿಮಾನದ ಸಂವಹನ ವ್ಯವಸ್ಥೆಗೆ ತೊಂದರೆಯನ್ನು ಉಂಟು ಮಾಡುತ್ತದೆ. ಮೊಬೈಲ್ ಸಿಗ್ನಲ್ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ಸಂಪರ್ಕದಿಂದ ಕೆಟ್ಟ ಶಬ್ದವೂ ಕೇಳಿಸಿಕೊಳ್ಳುತ್ತದೆ ಎನ್ನಲಾಗುತ್ತದೆ.

ಕ್ಯಾಬಿನ್‌’ನಲ್ಲಿರುವ ಫೋನ್‌’ಗಳು ಮತ್ತು ಪೈಲಟ್‌’ಗಳ ರೇಡಿಯೊ ನಡುವೆ ಸಾಕಷ್ಟು ಕ್ಷೀಣತೆ ಇರುತ್ತದೆ. ಇನ್ನು ಸಾಮಾನ್ಯ ಜನರು ಬಳಕೆ ಮಾಡುವ ಮೊಬೈಲ್, ವಿಮಾನ ಹಾರಾಟದ ಸಮಯದಲ್ಲಿ ತನಗೆ ಬೇಕಾದ ಸಿಗ್ನಲ್’ನ್ನು ಹುಡುಕುತ್ತದೆ. ಆ ಸಂದರ್ಭದಲ್ಲಿ ಪೈಲಟ್ ಬಳಕೆ ಮಾಡುವ ಫೋನ್ ಇಲ್ಲವೇ ರೆಡಿಯೋ ಸಿಸ್ಟಮ್’ಗಳಲ್ಲಿ ಕರ್ಕಶ ಶಬ್ದ ಕೇಳಿ ಬರುತ್ತದೆ ಎನ್ನಲಾಗಿದೆ.

ಸೆಲ್ಯುಲಾರ್​​ ಕನೆಕ್ಟಿಂಗ್ ಫೀಚರ್​ ಅನ್ನು ಹೊಂದಿರುವ ಎಲೆಕ್ಟ್ರಾನಿಕ್ಸ್​ ಡಿವೈಸ್​ಗಳು ರೇಡಿಯೋ ವೇವ್ಸ್​ಗಳನ್ನು(Radio Waves) ಮತ್ತು ಇತರ ಕನೆಕ್ಟಿಂಗ್ ಫೀಚರ್​ಗಳನ್ನು (Connecting Features) ಅನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದು ವಿಮಾನದ ಸಂಚಾರಕ್ಕೆ ಅಡಚಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಮೊಬೈಲ್‌ನ್ನು ಫ್ಲೈಟ್ ಮೋಡ್‌ನಲ್ಲಿಡಲು ತಿಳಿಸಲಾಗುತ್ತದೆ. ವಿಮಾನ ಹಾರಾಟದ ಸಂದರ್ಭದಲ್ಲಿ ಮೊಬೈಲ್ ಫೋನ್ ಆನ್ ಇದ್ದರೆ, ಆಡಿಯೊ ಸಿಸ್ಟಮ್‌ನಿಂದ ಅಹಿತಕರ ಶಬ್ದವು ಕೇಳಿಬರುವ ಜೊತೆಗೆ ಫೋನ್‌’ನ ರೇಡಿಯೊ ಹೊರಸೂಸುವಿಕೆಯು 8W ವರೆಗೆ ತುಂಬಾ ಪ್ರಬಲವಾಗಿರುತ್ತದೆ ಎಂದು ಸಂಶೋಧನೆ ಮಾಹಿತಿ ನೀಡಿದೆ. ಇದು ಸುರಕ್ಷತೆಗೆ ಸಮಸ್ಯೆಯಾಗದಿದ್ದರೂ ಕೂಡ ಕಿರಿಕಿರಿ ಉಂಟುಮಾಡುವುದು ಸುಳ್ಳಲ್ಲ.

ವಿಮಾನದಲ್ಲಿ ದಿನಕ್ಕೆ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಾರೆ. ಈ ಸಂದರ್ಭದಲ್ಲಿ ನೆಟ್​ವರ್ಕ್​ಗಳ ಮೇಲೆ ಭಾರೀ ಅಡಚಣೆಗಳು ಉಂಟಾಗುತ್ತವೆ. ಇದರಿಂದ ವಿಮಾನಯಾನಕ್ಕೂ ಸಮಸ್ಯೆ ಉಂಟಾಗುವುದಲ್ಲದೆ ಪೈಲಟ್​ಗಳು ತಮ್ಮ ನಿಯಂತ್ರಣವನ್ನು ಕಳೆದುಕೊಂಡು ಲ್ಯಾಂಡಿಂಗ್(Landing) ಮಾಡುವಾಗ ಇಲ್ಲವೇ ಟೇಕ್​ ಆಫ್​(Takeoff) ಆಗುವ ಸಂದರ್ಭದಲ್ಲಿ ದೊಡ್ಡ ಮಟ್ಟಿನ ತೊಂದರೆಯನ್ನು ಎದುರಿಸಬೇಕಾಗುವ ಸಾಧ್ಯತೆ ಕೂಡ ಇದೆ. ಹೀಗಾಗಿ, ವಿಮಾನದಲ್ಲಿ ಸಂಚರಿಸುವಾಗ ಮೊಬೈಲ್​ ಅನ್ನು ಏರ್​​ಪ್ಲೇನ್​ ಮೋಡ್​ ಅಲ್ಲಿ ಇರಿಸಲು ಹೇಳಲಾಗುತ್ತದೆ.

 

 

 

1 Comment
  1. free binance account says

    Thanks for sharing. I read many of your blog posts, cool, your blog is very good.

Leave A Reply

Your email address will not be published.