Home Health Thick Eyebrows: ಹೆಣ್ಮಕ್ಕಳೇ ನಿಮಗೆ ದಪ್ಪ ಹುಬ್ಬು ಬೇಕೇ? ಈ ಮನೆ ಮದ್ದು ನಿಮಗೆ ಬಹಳ...

Thick Eyebrows: ಹೆಣ್ಮಕ್ಕಳೇ ನಿಮಗೆ ದಪ್ಪ ಹುಬ್ಬು ಬೇಕೇ? ಈ ಮನೆ ಮದ್ದು ನಿಮಗೆ ಬಹಳ ಸಹಾಯ ಮಾಡುತ್ತೆ!

Thick Eyebrows

Hindu neighbor gifts plot of land

Hindu neighbour gifts land to Muslim journalist

Thick Eyebrows : ಮಹಿಳೆಯರ(Women) ಸೌಂದರ್ಯ (Beauty) ಹೆಚ್ಚಿಸುವಲ್ಲಿ ಕಣ್ಣು(Eyes), ಹುಬ್ಬುಗಳು(Eyebrow) ಮುಖ್ಯ ಪಾತ್ರ ವಹಿಸುತ್ತವೆ. ಹುಬ್ಬು ಸುಂದರವಾಗಿ ದಪ್ಪವಾಗಿದ್ದರೆ ಮುಖದ ಅಂದ ಹೆಚ್ಚಾಗುತ್ತದೆ. ಆದರೆ ತೆಳ್ಳಗಿನ ಹುಬ್ಬು ಹೊಂದಿದ್ದರೆ ಅದನ್ನು ದಪ್ಪಗಾಗಿಸಲು ನಾನಾ ಕಸರತ್ತು ಮಾಡಬೇಕಾಗುತ್ತದೆ. ನೀವು ಕೆಲವು ಸರಳ ಮನೆ ಮದ್ದುಗಳನ್ನು ಬಳಸಿ ಸುಂದರವಾದ ದಪ್ಪಗಿನ ಹುಬ್ಬನ್ನು(Thick Eyebrows) ಪಡೆಯಬಹುದು.

ಈರುಳ್ಳಿಯ ರಸವನ್ನು(Onion Juice) ಜೇನುತುಪ್ಪದೊಂದಿಗೆ(Honey) ಬೆರೆಸಿ ಹುಬ್ಬುಪ್ರದೇಶದ ಮೇಲೆ ಹಚ್ಚಿದರೆ, ಇದು ಅನೇಕ ಖನಿಜಗಳನ್ನು ಒಳಗೊಂಡಿದ್ದು, ಕಿರುಚೀಲಗಳಿಗೆ ಆಮ್ಲಜನಕವನ್ನು ಒದಗಿಸುವ ಮೂಲಕ ಕೂದಲು ಬೆಳೆಯಲು ಸಹಕರಿಸುತ್ತದೆ. ಬಾಳೆಹಣ್ಣನ್ನು (Banana)ಮ್ಯಾಶ್ ಮಾಡಿ, ಜೇನುತುಪ್ಪವನ್ನು ಬೆರೆಸಿ, ನಿಮ್ಮ ಹುಬ್ಬು ಪ್ರದೇಶಕ್ಕೆ ಹಚ್ಚಿದರೆ, ಬಲಿಯದ ಬಾಳೆಹಣ್ಣು ಕೂದಲು ಬೆಳವಣಿಗೆಯನ್ನು(Hair Growth) ಉತ್ತೇಜಿಸಲು ನೆರವಾಗುತ್ತದೆ.

ಸ್ವಲ್ಪ ಪ್ರಮಾಣದ ತೆಂಗಿನ ಎಣ್ಣೆಯನ್ನು(Cocount Oil) ತೆಗೆದುಕೊಂಡು ನಿಮ್ಮ ಹುಬ್ಬುಗಳ ಪ್ರದೇಶಗಳಲ್ಲಿ ವೃತ್ತಾಕಾರದ ಮಾದರಿಯಲ್ಲಿ ಮಸಾಜ್ ಮಾಡಿದರೆ, ಹುಬ್ಬಿನ ಕೂದಲು ಬೆಳೆಯುವ ಜೊತೆಗೆ ಕೂದಲಿನ ಆರೈಕೆಗೆ ಸಹಕರಿಸುತ್ತದೆ. ಹತ್ತಿ ಸ್ಪ್ಯಾಬ್ ಅನ್ನು ತೆಗೆದುಕೊಂಡು ಅದನ್ನು ಆಲಿವ್ ಎಣ್ಣೆಯಲ್ಲಿ ಅದ್ದಿ, ಹುಬ್ಬು ಪ್ರದೇಶವನ್ನು ಸಂಪೂರ್ಣವಾಗಿ ದಿನವೂ ಮಸಾಜ್ ಮಾಡುವುದರಿಂದ ಕೂದಲಿನ ಬೆಳವಣಿಗೆಯು ಹೆಚ್ಚಾಗುತ್ತದೆ.

ಕೊಬ್ಬರಿ ಎಣ್ಣೆಯಲ್ಲಿ ರೋಸ್ಮರಿ ಎಣ್ಣೆಯನ್ನು ಬೆರೆಸಿ ರಾತ್ರಿಯಲ್ಲಿ ನಿಮ್ಮ ಹುಬ್ಬುಗಳ ಮೇಲೆ ಹಚ್ಚಿ, ಮರುದಿನ ಅದನ್ನು ತೊಳೆಯುವುದು ಕೂಡ ಉತ್ತಮ. ಲ್ಯಾವೆಂಡರ್ ಎಣ್ಣೆಯು ಹುಬ್ಬಿನ ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ. ಎಣ್ಣೆಯ ಕೆಲವು ಹನಿಗಳನ್ನು ತೆಗೆದುಕೊಂಡು ಅದನ್ನು ನಿಮ್ಮ ಹುಬ್ಬುಗಳ ಮೇಲೆ ನಿಧಾನವಾಗಿ ಮಸಾಜ್ ಮಾಡುವುದು ಒಳ್ಳೆಯದು.

ತೆಂಗಿನೆಣ್ಣೆಯಲ್ಲಿ ಹಲವಾರು ಔಷಧೀಯ ಗುಣಗಳಿದ್ದು, ಅಡುಗೆ ಎಣ್ಣೆ ಕೂಡ ಕೂದಲು ಮತ್ತು ಚರ್ಮಕ್ಕೆ ಹೆಚ್ಚು ಪ್ರಯೋಜನಕಾರಿ. ನಿಮ್ಮ ಕೈಗಳಿಗೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಹಚ್ಚಿ ಮತ್ತು ನಿಮ್ಮ ಹುಬ್ಬುಗಳ ಮೇಲೆ ಮಸಾಜ್ ಮಾಡಬೇಕು. ನೀವು ರಾತ್ರಿಯಿಡೀ ಹುಬ್ಬುಗಳಿಗೆ ಎಣ್ಣೆಯನ್ನು ಹಚ್ಚಿ ಮರುದಿನ ಬೆಳಿಗ್ಗೆ ತೊಳೆಯುವ ಅಭ್ಯಾಸ ಮಾಡಿಕೊಳ್ಳಿ.
ನಿಮ್ಮ ಹುಬ್ಬುಗಳ ಮೇಲೆ ನಿಂಬೆ ತುಂಡನ್ನು ಉಜ್ಜಿ, ಅದನ್ನು 20 ನಿಮಿಷಗಳ ಕಾಲ ಬಿಟ್ಟು ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಬೇಕು. ನೀವು ನಿಂಬೆ ಸಿಪ್ಪೆಗಳನ್ನು ¼-ಕಪ್ ಶುದ್ಧ ತೆಂಗಿನ ಎಣ್ಣೆಗೆ ಹಾಕಿ. ಈ ಮಿಶ್ರಣವನ್ನು ಕನಿಷ್ಠ 15 ದಿನಗಳವರೆಗೆ ಬಿಡಿ. ಇದನ್ನು ಪ್ರತಿ ರಾತ್ರಿ ಮಲಗುವ ಮುನ್ನ ಹತ್ತಿಯಿಂದ ಬಳಸಿ ನಿಮ್ಮ ಹುಬ್ಬುಗಳ ಮೇಲೆ ಹಚ್ಚಿ ಪ್ರಯೋಜನ ಪಡೆದುಕೊಳ್ಳಬಹುದು.

ಲೋಳೆರಸದ ಜೆಲ್ (Alovera Jel) ಅನ್ನು ಸ್ವಲ್ಪ ಪ್ರಮಾಣದ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಮತ್ತು ಅದನ್ನು ಹೀರಿಕೊಳ್ಳುವವರೆಗೆ ಹುಬ್ಬುಗಳಿಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆಗೆ ಸಹಕರಿಸುತ್ತದೆ. ಇದಲ್ಲದೇ, ಕೂದಲು ಮತ್ತು ಕೋಶಕವನ್ನು ಬಲಪಡಿಸುವ ಜೊತೆಗೆ ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ. ಹತ್ತಿ ಸ್ಪ್ಯಾಬ್‌ನಲ್ಲಿ ಕೆಲವು ಹನಿ ಪುದೀನಾ ಎಣ್ಣೆಯನ್ನು ತೆಗೆದುಕೊಂಡು ನಿಮ್ಮ ಹುಬ್ಬುಗಳ ಮೇಲೆ ವೃತ್ತಾಕಾರದ ಚಲನೆಯಂತೆ ನಿಧಾನವಾಗಿ ಮಸಾಜ್ ಮಾಡುವುದನ್ನು ರೂಡಿಸಿಕೊಂಡರೆ ಕೂದಲು ಕಿರುಚೀಲಗಳಿಗೆ ರಕ್ತ ಪರಿಚಲನೆಯಲ್ಲಿ ಸುಧಾರಣೆ ಕಾಣಬಹುದು.
ನಿಮ್ಮ ಹುಬ್ಬುಗಳನ್ನು ಪದೇ ಪದೇ ಕೀಳುವ ಮತ್ತು ವ್ಯಾಕ್ಸಿಂಗ್ ಮಾಡುವುದರಿಂದ ಕೂದಲಿನ ಕೋಶಕವನ್ನು ಶಾಶ್ವತವಾಗಿ ಹಾನಿ ಮಾಡುತ್ತದೆ. ಇದರಿಂದಾಗಿ ಮತ್ತೆ ಕೂದಲು ಬೆಳೆಯುವುದನ್ನು ತಡೆಯುತ್ತದೆ. ಹೀಗಾಗಿ ಅತಿಯಾಗಿ ಹುಬ್ಬು ತೆಗೆಯುವ ಅಭ್ಯಾಸ ಇದ್ದರೆ ಬಿಡುವುದು ಒಳ್ಳೆಯದು.

 

ಇದನ್ನು ಓದಿ : Pension Scheme : ನಿಮಗೇನಾದರೂ ತಿಂಗಳಿಗೆ 75 ಸಾವಿರ ಪಿಂಚಣಿ ಬೇಕಾದರೆ ಜಸ್ಟ್ ಈ ರೀತಿ ಮಾಡಿ!