Salar release date announce: ‘ಅತ್ಯಂತ ಹಿಂಸಾತ್ಮಕ ವ್ಯಕ್ತಿ ಬರುತ್ತಿದ್ದಾನೆ’ ಎಂದು ‘ಸಲಾರ್’ ರಿಲೀಸ್ ಡೇಟ್ ಘೋಷಿಸಿದ ಹೊಂಬಾಳೆ ಫಿಲ್ಮ್ಸ್! ಯಾವಾಗ ಗೊತ್ತಾ ಸಿನಿಮಾ ರಿಲೀಸ್?
Salaar release date announce : ಪ್ರಭಾಸ್(Prabhas) ಮತ್ತು ಪ್ರಶಾಂತ್ ನೀಲ್(Prashanth Nee) ಕಾಂಬಿನೇಷನ್‌ನಲ್ಲಿ ‘ಸಲಾರ್’ ಸಿನಿಮಾ ತಯಾರಾಗುತ್ತಿರುವುದು ಎಲ್ಲರಿಗೂ ಗೊತ್ತಿದೆ. ಈ ಬಿಗ್ ಬಜೆಟ್ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾ ಇಷ್ಟೊತ್ತಿಗೆ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಬಿಡುಗಡೆ ತಡವಾಗಿದೆ.
ಹೌದು, ಕೆಜಿಎಫ್ 2′ (KGF 2) ಸೂಪರ್ ಸಕ್ಸಸ್ ನಂತರ ‘ಸಲಾರ್’ (Salaar) ಚಿತ್ರಕ್ಕೆ ಪ್ರಶಾಂತ್ ನೀಲ್ (Prashanth Neel) ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಸಲಾರ್’ನಲ್ಲಿ ಬಾಹುಬಲಿ ಪ್ರಭಾಸ್ ಅಬ್ಬರ ಹೇಗಿದೆ ಎಂದು ಕಾತರದಿಂದ ಕಾಯುತ್ತಿದ್ದ ಫ್ಯಾನ್ಸ್‌ಗೆ ಹೊಂಬಾಳೆ ಸಂಸ್ಥೆ ಇದೀಗ ಬಿಗ್ ಅಪ್‌ಡೇಟ್ ನೀಡಿದೆ. ಅದೇನೆಂದರೆ ಬಹುನಿರೀಕ್ಷಿತ ಸಲಾರ್ ಈ ವರ್ಷ ಸೆಪ್ಟೆಂಬರ್ 28ಕ್ಕೆ ತೆರೆಗೆ ಬರಲಿದೆ. ‘ಅತ್ಯಂತ ಹಿಂಸಾತ್ಮಕ ವ್ಯಕ್ತಿ ಬರುತ್ತಿದ್ದಾನೆ’ ಎಂದು ಹೊಂಬಾಳೆ ಫಿಲ್ಮ್ಸ್(Hombale Films) ಟ್ವೀಟ್ ಮಾಡಿದ್ದಾರೆ.
ಬಾಹುಬಲಿ’ ಪ್ರಭಾಸ್ (Prabhas) ನಟನೆಯ ಸಲಾರ್ ಸಿನಿಮಾಗಾಗಿ ಎದುರು ನೋಡುತ್ತಿದ್ದವರಿಗೆ ಇದೀಗ ಸಿಹಿಸುದ್ದಿ ಸಿಕ್ಕಿದೆ. ಪ್ರಭಾಸ್ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಸಲಾರ್‌ನಲ್ಲಿ ನಾಯಕಿಯಾಗಿ ಶ್ರುತಿ ಹಾಸನ್ (Shruti Hasaan) ಸಾಥ್ ನೀಡಿದ್ದಾರೆ. ಇತ್ತೀಚಿಗಷ್ಟೇ ಇಟಲಿಯಲ್ಲಿ ಚಿತ್ರೀಕರಣ ಕೂಡ ಮುಗಿಸಿರುವ ಸಲಾರ್ ತಂಡ ಈಗ ರಿಲೀಸ್ ಡೇಟ್ (Salaar release date announce) ಬಗ್ಗೆ ಅಪ್‌ಡೇಟ್ ನೀಡಿದ್ದಾರೆ.
ಅಂದಹಾಗೆ, ಪ್ರಭಾಸ್ ಈ ಸಿನಿಮಾದ ಹೀರೋ ಆಗಿದ್ದರೂ, ಇದರ ನಿರ್ದೇಶಕ ಪ್ರಶಾಂತ್ ನೀಲ್ ಕನ್ನಡದವರು. ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ನಿಂದ ‘ಸಲಾರ್’ ನಿರ್ಮಾಣವಾಗುತ್ತಿದೆ. ಕನ್ನಡದ ಪ್ರತಿಭೆಗಳಾದ ಛಾಯಾಗ್ರಾಹಕ ಭುವನ್ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್ ಈ ಸಿನಿಮಾಗೆ ಕೆಲಸ ಮಾಡುತ್ತಿದ್ದಾರೆ. ನಟ ಮಧು ಗುರುಸ್ವಾಮಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.
ಇನ್ನು ಈ ಸಿನಿಮಾ ಕೂಡ ಕೆಜಿಎಫ್ ರೀತಿಯಲ್ಲಿ ಪಾರ್ಟ್ 2 ಬರಲಿದೆಯೇ ಎಂಬ ಚರ್ಚೆ ಶುರುವಾಗಿತ್ತು. ಈಗಾಗಲೇ ಬಾಹುಬಲಿ 1 ಮತ್ತು ಬಾಹುಬಲಿ 2 ಮಾಡಿರುವ ಪ್ರಭಾಸ್‌ಗೆ ಸಿಕ್ವೇಲ್ ಸಿನಿಮಾಗಳೇನು ಹೊಸದಲ್ಲ. ಅಲ್ಲದೆ ಬಾಹುಬಲಿ 2′ ಸೂಪರ್ ಸಕ್ಸಸ್ ನಂತರ ಪ್ರಭಾಸ್ ನಟಿಸಿರುವ ಸಾಲು ಸಾಲು ಚಿತ್ರಗಳು ಸೋತಿವೆ. ಸಲಾರ್-ಆದಿಪುರುಷ್ ಸಿನಿಮಾವಾದ್ರೂ ಪ್ರಭಾಸ್ ಕೈಹಿಡಿಯುತ್ತಾ ಎಂದು ಕಾದುನೋಡಬೇಕಿದೆ. ಸದ್ಯ ‘ಸಲಾರ್’ ರಿಲೀಸ್ ಡೇಟ್ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
Your point of view caught my eye and was very interesting. Thanks. I have a question for you.