Tax On Lottery : ಲಾಟರಿ ಮತ್ತು ನಗದು ಬಹುಮಾನವನ್ನು ಗೆಲ್ಲುತ್ತಿದ್ದೀರಾ? ಹಾಗಾದರೆ ಅದರ ತೆರಿಗೆ ನಿಯಮಗಳನ್ನು ತಿಳಿದುಕೊಳ್ಳಿ!

Tax On Lottery  : ಭಾರತದಲ್ಲಿನ ಆದಾಯ ತೆರಿಗೆ(income tax) ಸಂಬಂಧಿತ ನಿಯಮಗಳು ಮುಂಚೆಯಿಂದನೂ ಇರುವುದು ಎಲ್ಲರಿಗೂ ತಿಳಿದ ವಿಷಯವೇ ಹೌದು. ಒಬ್ಬ ವ್ಯಕ್ತಿ ಯಾವ ರೀತಿಯಿಂದಾದರೂ ತನಗೆ ಬೇಕಾದ ಆದಾಯಗಳನ್ನು ಗಳಿಸಿದ್ದರೆ, ಆ ಆದಾಯವು ಆದಾಯ ತೆರಿಗೆಯ ಕಾಯ್ದೆ ಅಡಿಯಲ್ಲಿ ಬರುತ್ತದೆ. ಆ ವ್ಯಕ್ತಿಯು ಯಾವುದರಿಂದಲೂ ಆದಾಯವನ್ನು ಗಳಿಸಿದ್ದರು ತೆರಿಗೆಯನ್ನು(tax) ಪಾವತಿಸುವುದು ಕಡ್ಡಾಯವಾಗಿರುತ್ತದೆ.

ಹೌದು, ಒಂದು ವೇಳೆ ನೀವು ಎಲ್ಲಾದರೂ ಅಕಸ್ಮಾತಾಗಿ ಯಾವುದೇ ಲಾಟರಿಯನ್ನು(lottery) ಗೆದ್ದರೆ ಅಥವಾ ಯಾವುದೇ ಸ್ಪರ್ಧೆಯಲ್ಲಿ ನಗದು ಬಹುಮಾನವನ್ನು ಗೆದ್ದರೆ, ನೀವು ಗೆದ್ದ ಹಣದ ಮೇಲೆ ತೆರಿಗೆ (Tax On Lottery ) ವಿಧಿಸಲಾಗುತ್ತದೆ ಎಂಬುವುದು ನಿಮಗೆ ಮೊದಲೇ ತಿಳಿದಿರಬೇಕು. ಲಾಟರಿ ಇನ್ನಿತರ ವಸ್ತುಗಳಿಂದ ಗಳಿಸುವ ಆದಾಯಕ್ಕೆ ಇತರೆ ಆದಾಯ ಮೇಲೆ ವಿಧಿಸುವ ತೆರಿಗೆಗಿಂತ ಇಂತವುಗಳಿಗೆ ಅಧಿಕ ತೆರಿಗೆ ಇರುತ್ತದೆ. ಅಂದರೆ ಶೇಕಡ 30 ರಷ್ಟು ತೆರಿಗೆ ನೀವು ಕೊಡಬೇಕಾಗುತ್ತದೆ. ಭಾರತದಲ್ಲೇ ವಾಸವಿರುವವರು ಆಗಲಿ ಅಥವಾ ಅನಿವಾಸಿ ಭಾರತೀಯರಾಗಿರಲಿ ಅಂದರೆ ಹೊರದೇಶದವರಿಗೂ ಎಲ್ಲರಿಗೂ ಈ ತೆರಿಗೆ ಸಮಾನ ರೀತಿಯಲ್ಲಿ ಅನ್ವಯಿಸುತ್ತದೆ.

ನೀವು ಎಲ್ಲಾದರೂ ಲಾಟರಿ ಬಹುಮಾನವನ್ನು(lottery price) ಒಂದು ಸಂಸ್ಥೆಯಿಂದ ಪಡೆದುಕೊಂಡಿದ್ದರೆ ನಾವು ಇದರಿಂದ ತೆರಿಗೆಯನ್ನು(tax) ತೀರಿಸುವುದು ಹೇಗೆ ಎಂಬ ಪ್ರಶ್ನೆ ಕಾಡಬಹುದು. ನೀವು ಎಲ್ಲಾದರೂ ಲಾಟರಿ ಬಹುಮಾನವನ್ನು ಪಡೆದುಕೊಂಡಿದ್ದರೆ ಆ ತೆರಿಗೆಯನ್ನು ನೀವು ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ನೀವು ಯಾವ ಸಂಸ್ಥೆಯಿಂದ ಈ ನಗದು ಬಹುಮಾನ ಅಥವಾ ಲಾಟರಿ ಬಹುಮಾನವನ್ನು ಪಡೆಯುತ್ತೀರೋ ಆ ಸಂಸ್ಥೆಯೇ ನಿಮ್ಮ ತೆರಿಗೆಯನ್ನು ಕಡಿತಗೊಳಿಸುತ್ತದೆ ಅಂದರೆ ತೆರಿಗೆಯನ್ನುತೀರಿಸುತ್ತಾರೆ. ತೆರಿಗೆ ಎಲ್ಲ ಕಡಿತವಾದ ಬಳಿಕವೇ ನಿಮಗೆ ನಿಮ್ಮ ಪೂರ್ಣ ಮೊತ್ತವು ಲಭ್ಯವಾಗುತ್ತದೆ.

1961ರ ಭಾರತೀಯ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 194B ಬಿ ಅಡಿಯಲ್ಲಿ ಲಾಟರಿ, ಕಾರ್ಡ್ ಗೇಮ್(card game), ಟಿವಿ ಪ್ರೋಗ್ರಾಂ(TV program), ಕ್ರಾಸ್‌ವರ್ಡ್ ಪಜಲ್(crossword puzzle), ಇತರೆ ಆಟಗಳ ಮೇಲೆ ಗಳಿಸಿದ ಆದಾಯದ ಮೇಲೆ ಟಿಡಿಎಸ್ ಅನ್ನು ವಿಧಿಸಲಾಗುತ್ತದೆ.

ನಿಮ್ಮ ಸಿಗುವ ನಗದು ಬಹುಮಾನವು ಎಲ್ಲಾದರೂ 10 ಸಾವಿರ ರೂಪಾಯಿಗಿಂತ ಹೆಚ್ಚಿದ್ದರೆ ಮಾತ್ರ ನಿಮಗೆ ನೀಡುವ ನಗದು ಬಹುಮಾನದ ಮೊತ್ತದಿಂದ ಶೇಕಡ 30ರಷ್ಟು ತೆರಿಗೆ ಕಡಿತ ಮಾಡಿ ಉಳಿದ ಮೊತ್ತವನ್ನು ನಿಮಗೆ ನೀಡುತ್ತಾರೆ. ಇನ್ನು ಅಲ್ಲಿ ಇರುವ ಸರ್‌ ಚಾರ್ಜ್ ಮತ್ತು ಸೆಸ್ ಸೇರ್ಪಡೆಯಾಗಿ ನಿಮ್ಮ ನಗದು ಅಥವಾ ಲಾಟರಿ ಬಹುಮಾನದ ಮೇಲೆ ಶೇಕಡ 31.2ರಷ್ಟು ಬಡ್ಡಿದರವನ್ನು (installment) ಹಾಕುತ್ತಾರೆ.

ಹಾಗಾದರೆ ತೆರಿಗೆ ಪಾವತಿ ಮಾಡುವುದು ಏಕೆ ಮುಖ್ಯ?

ಲಾಟರಿ ಮತ್ತು ನಗದು ಬಹುಮಾನದ ಮೇಲೆ ಆದಾಯ(income) ತೆರಿಗೆ ನಿಯಮದಲ್ಲಿ ಅದಕ್ಕೆ ಸರಿಹೊಂದುವಂತೆ ತೆರಿಗೆಯನ್ನು ಪಾವತಿ ಮಾಡುವುದು ಮುಖ್ಯವಾಗುತ್ತದೆ. ದಂಡ ಹಾಗೂ ಇತರೆ ಕಾನೂನು ತೊಂದರೆಗಳನ್ನು ಅನುಭವಿಸುದನ್ನು ನಾವು ತಡೆಗಟ್ಟಿ ಅದರಿಂದ ನಾವು ಪಾರಾಗಬೇಕಾದರೆ. ನಾವು ಯಾವುದೇ ಆದಾಯಕ್ಕೆ ಅನ್ವಯವಾಗುವ ತೆರಿಗೆಯನ್ನು ಪಾವತಿ ಮಾಡುವುದು ಮುಖ್ಯವಾಗುತ್ತದೆ. ತೆರಿಗೆಯನ್ನು ಪಾವತಿಸದೇ ಇದ್ದರೆ ಇದರಿಂದ ನಮಗೆ ಮುಂದೆ ಪರಿಣಾಮವಾಗಬಹುದು.ಅಂತಹ ಲಾಭಗಳು “ಇತರ ಮೂಲಗಳಿಂದ ಆದಾಯ” ಎಂದು ಪರಿಗಣಿಸಲಾಗುತ್ತದೆ ಮತ್ತು ತೆರಿಗೆಗೆ(tax) ಒಳಪಟ್ಟಿರುತ್ತವೆ.

ಬಾಕಿ ಇರುವ ತೆರಿಗೆಗಳನ್ನು ಪಾವತಿಸದಿದ್ದರೆ ನಿಮ್ಮ ಮೇಲೆ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬಾರದೆಂದರೆ ನೀವು ತೆರಿಗೆ ವೃತ್ತಿಪರರಿಂದ ಸಲಹೆಯನ್ನು ಅಂದರೆ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆಯುವುದು ಉತ್ತಮ. ಇನ್ನು ಭಾರತ ದೇಶದಲ್ಲಿ ನೋಡಿದರೆ ಹಲವಾರು ರಾಜ್ಯಗಳಲ್ಲಿ ಲಾಟರಿ ಬ್ಯಾನ್ (lottery ban)ಆಗಿದೆ. ಆದರೆ ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಸರ್ಕಾರದ ಇಲಾಖೆಯೇ ಲಾಟರಿ ಕೆಲಸದ ನಿರ್ವಹಣೆ ಮಾಡುತ್ತದೆ.

ಸರ್ಕಾರವು ಆದಾಯ ತೆರಿಗೆಯನ್ನು ಸಂಗ್ರಹ ಮಾಡಲು ಒಟ್ಟು ಮೂರು ವಿಧಾನಗಳನ್ನು ಬಳಸುತ್ತದೆ ಅದು ಯಾವುದೆಂದರೆ.

ಪಡೆದುಕೊಳ್ಳುವವರ ಆದಾಯದಿಂದ ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆಗಳು (ಟಿಡಿಎಸ್), ಮೂಲದಿಂದ ಸಂಗ್ರಹಿಸಲಾದ ತೆರಿಗೆಗಳು (ಟಿಸಿಎಸ್) ಮತ್ತು ಮುಂಗಡ ತೆರಿಗೆ ಮತ್ತು ಸೆಲ್ಫ್ ಅಸೆಸ್‌ಮೆಂಟ್ ಟ್ಯಾಕ್ಸ್‌ (assessment tax)ಈ ಮೂರು ವಿಧಾನಗಳು ಪ್ರಮುಖವಾಗಿದೆ. ಹಣವನ್ನು ಗಳಿಸುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆದಾಯ ಎಷ್ಟರಮಟ್ಟಿಗೆ ಇದೆ ಎಂದು ಲೆಕ್ಕದಲ್ಲಿ ಇಟ್ಟುಕೊಂಡು ಅದಕ್ಕೆ ಸಂಬಂಧಿಸಿದ ಸರಿಯಾದ ತೆರಿಗೆಯನ್ನು ಪಾವತಿಸುವುದು ಸಾಂವಿಧಾನಿಕವಾಗಿ ವ್ಯಕ್ತಿಯ ಕರ್ತವ್ಯ ಎಂದು ಪರಿಗಣಿಸಲಾಗುತ್ತದೆ.

 

ಇದನ್ನು ಓದಿ : Xiaomi smartphones: Redmi 12C ಮತ್ತು Redmi Note 12 4G ಸೇಲ್ ಆರಂಭ; ಸಂಪೂರ್ಣ ವಿವರ ಇಲ್ಲಿದೆ 

3 Comments
  1. binance Registrera dig says

    Thanks for sharing. I read many of your blog posts, cool, your blog is very good.

  2. Polecenie Binance says

    Can you be more specific about the content of your article? After reading it, I still have some doubts. Hope you can help me.

  3. código binance says

    Can you be more specific about the content of your article? After reading it, I still have some doubts. Hope you can help me.

Leave A Reply

Your email address will not be published.