KVP : ರೈತರಿಗಾಗಿಯೇ ವಿನ್ಯಾಸಗೊಳಿಸಲಾದ ಕಿಸಾನ್ ವಿಕಾಸ್ ಪತ್ರ (KVP) ಯೋಜನೆ : ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಗದಿತ ಅವಧಿಯಲ್ಲಿ ದ್ವಿಗುಣಗೊಳ್ಳುತ್ತೆ ಹಣ!
Kisan Vikas Patra : ಉಳಿತಾಯ ಎಂಬುದು ಮನುಷ್ಯನ ಅವಿಭಾಜ್ಯ ಅಂಗವೆಂದರೆ ತಪ್ಪಾಗಲಾರದು. ಯಾಕಂದ್ರೆ ಇಂದಿನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೇ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ. ಇಂತಹ ಹೂಡಿಕೆಗಾಗಿಗೆ ಹಲವು ಯೋಜನೆಗಳು ಕೂಡ ಜಾರಿಯಲ್ಲಿದೆ. ಹಣ ಸುರಕ್ಷಿತವಾಗಿರುವುದರ ಜೊತೆಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಪಡೆಯುವಂತಹ ಹಲವು ಯೋಜನೆಗಳು ಅಂಚೆ ಕಚೇರಿಯಲ್ಲಿದೆ.
ಇಂತಹ ಯೋಜನೆಗಳಲ್ಲಿ ಕಿಸಾನ್ ವಿಕಾಸ್ ಪತ್ರ (Kisan Vikas Patra) ಕೂಡ ಒಂದು. ರೈತರ ಹೆಸರಿನಲ್ಲಿ ಅಂಚೆ ಕಚೇರಿಯ ಮೂಲಕ ನಡೆಸುವ ಸರ್ಕಾರಿ ಯೋಜನೆ ಇದಾಗಿದೆ. ಕಿಸಾನ್ ವಿಕಾಸ್ ಪತ್ರವು ಭಾರತ ಸರ್ಕಾರ ಹೊರಡಿಸಿದ ಒಂದು ಬಾರಿಯ ಹೂಡಿಕೆ ಯೋಜನೆಯಾಗಿದ್ದು, ಅಲ್ಲಿ ನಿಮ್ಮ ಹಣವು ನಿಗದಿತ ಅವಧಿಯಲ್ಲಿ ದ್ವಿಗುಣಗೊಳ್ಳುತ್ತದೆ. ಕಿಸಾನ್ ವಿಕಾಸ್ ಪತ್ರವು ದೇಶದ ಎಲ್ಲಾ ಅಂಚೆ ಕಚೇರಿಗಳು ಮತ್ತು ದೊಡ್ಡ ಬ್ಯಾಂಕುಗಳಲ್ಲಿದೆ. ಇದರಲ್ಲಿ ಕನಿಷ್ಠ ಹೂಡಿಕೆ 1000 ರೂಪಾಯಿ ಆಗಿದ್ದು, ಯಾವುದೇ ಗರಿಷ್ಠ ಹೂಡಿಕೆ ಮಿತಿ ಇಲ್ಲ.
ಈ ಯೋಜನೆಯನ್ನ ವಿಶೇಷವಾಗಿ ರೈತರಿಗಾಗಿ ವಿನ್ಯಾಸಗೊಳಿಸಲಾಗಿದೆ, ಇದರಿಂದ ಅವರು ತಮ್ಮ ಹಣವನ್ನ ದೀರ್ಘಕಾಲೀನ ಆಧಾರದ ಮೇಲೆ ಉಳಿಸಬಹುದು. ಕೇಂದ್ರ ಸರ್ಕಾರವು ಕಿಸಾನ್ ವಿಕಾಸ್ ಪತ್ರದ ಮೇಲಿನ ಬಡ್ಡಿಯನ್ನ 2023ರ ಏಪ್ರಿಲ್ 1 ರಿಂದ ವಾರ್ಷಿಕವಾಗಿ ಶೇಕಡಾ 7.2 ರಿಂದ ಶೇಕಡಾ 7.5 ಕ್ಕೆ ಹೆಚ್ಚಿಸಿದ್ದು, ಈಗ ಮೆಚ್ಯೂರಿಟಿ ಅವಧಿಯನ್ನ 5 ತಿಂಗಳು ಕಡಿಮೆ ಮಾಡಲಾಗಿದೆ. ಈ ಹಿಂದೆ ಯೋಜನೆಯಲ್ಲಿ ಹಣವನ್ನ ದ್ವಿಗುಣಗೊಳಿಸಲು 120 ತಿಂಗಳುಗಳನ್ನ ತೆಗೆದುಕೊಳ್ಳುತ್ತಿತ್ತು, ಈಗ 115 ತಿಂಗಳು ಸಾಕು. ಹೂಡಿಕೆದಾರರು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಒಂದೇ ಖಾತೆಯ ಜೊತೆಗೆ, ಜಂಟಿ ಖಾತೆಯ ಸೌಲಭ್ಯವೂ ಇದೆ. ಅದೇ ಸಮಯದಲ್ಲಿ, ಈ ಯೋಜನೆಯು ಅಪ್ರಾಪ್ತ ವಯಸ್ಕರಿಗೂ ಲಭ್ಯವಿದ್ದು, ಪೋಷಕರು ನೋಡಿಕೊಳ್ಳಬೇಕು.
ಅರ್ಜಿ ಸಲ್ಲಿಕೆ ವಿಧಾನ:
* ಹತ್ತಿರದ ಯಾವುದೇ ಅಂಚೆ ಕಚೇರಿಗೆ ಹೋಗಿ ಫಾರ್ಮ್ ಭರ್ತಿ ಮಾಡುವ ಮೂಲಕ ನೀವು ಖಾತೆಯನ್ನು ತೆರೆಯಬಹುದು. ಇದಲ್ಲದೆ, ಫಾರ್ಮ್’ನ್ನ ಆನ್ಲೈನ್ನಲ್ಲಿ ಸಹ ಡೌನ್ಲೋಡ್ ಮಾಡಬಹುದು.
* ಅರ್ಜಿ ನಮೂನೆಯಲ್ಲಿ ನಾಮಿನಿಯ ಪೂರ್ಣ ಹೆಸರು, ಹುಟ್ಟಿದ ದಿನಾಂಕ ಮತ್ತು ವಿಳಾಸ ಇರಬೇಕು.
* ಖರೀದಿಯ ಮೊತ್ತವನ್ನ ನಮೂನೆಯಲ್ಲಿ ಸ್ಪಷ್ಟವಾಗಿ ಬರೆಯಬೇಕು.
* ಕೆವಿಪಿ ಫಾರ್ಮ್ ನ ಮೊತ್ತವನ್ನು ಚೆಕ್ ಅಥವಾ ನಗದು ಮೂಲಕ ಪಾವತಿಸಬಹುದು.
* ನೀವು ಚೆಕ್ ಮೂಲಕ ಪಾವತಿಸುತ್ತಿದ್ದರೆ, ದಯವಿಟ್ಟು ಫಾರ್ಮ್ ನಲ್ಲಿ ಚೆಕ್ ಸಂಖ್ಯೆಯ ಮಾಹಿತಿಯನ್ನ ಬರೆಯಿರಿ.
* ಕೆವಿಪಿ ಸಿಂಗಲ್ ಅಥವಾ ಜಾಯಿಂಟ್ ‘ಎ’ ಅಥವಾ ಜಂಟಿ ‘ಬಿ’ ಸದಸ್ಯತ್ವದ ರೂಪದಲ್ಲಿ, ಯಾವ ಆಧಾರದ ಮೇಲೆ ಖರೀದಿಸಲಾಗುತ್ತಿದೆ ಎಂಬುದನ್ನ ವಿವರಿಸಿ.
* ಇದನ್ನು ಜಂಟಿಯಾಗಿ ಖರೀದಿಸಿದರೆ, ಇಬ್ಬರೂ ಫಲಾನುಭವಿಗಳ ಹೆಸರುಗಳನ್ನ ಬರೆಯಿರಿ.
* ಫಲಾನುಭವಿ ಅಪ್ರಾಪ್ತ ವಯಸ್ಕನಾಗಿದ್ದರೆ, ಅವನ ಜನ್ಮ ದಿನಾಂಕ (ಡಿಒಬಿ), ಪೋಷಕರ ಹೆಸರು, ಪೋಷಕರ ಹೆಸರನ್ನು ಬರೆಯಿರಿ.
ಅಗತ್ಯ ದಾಖಲೆಗಳು:
*KYC ಪ್ರಕ್ರಿಯೆಗೆ ಗುರುತಿನ ಪುರಾವೆ
*ಆಧಾರ್ ಕಾರ್ಡ್
*PAN ಕಾರ್ಡ್
*ಮತದಾರರ ಗುರುತಿನ ಚೀಟಿ
*ಡ್ರೈವಿಂಗ್ ಲೈಸೆನ್ಸ್
*ಪಾಸ್ ಪೋರ್ಟ್
*ಕೆವಿಪಿ ಅರ್ಜಿ ನಮೂನೆ
*ವಿಳಾಸ ಪುರಾವೆ
*ಜನನ ಪ್ರಮಾಣ ಪತ್ರದ ಮರಣ ಪ್ರಮಾಣ ಪತ್ರ.
ಇದನ್ನೂ ಓದಿ: NMMS Scholarship 2023 : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಮೀನ್ಸ್-ಕಮ್-ಮೆರಿಟ್ ವಿದ್ಯಾರ್ಥಿವೇತನ
I don’t think the title of your article matches the content lol. Just kidding, mainly because I had some doubts after reading the article.
Can you be more specific about the content of your enticle? After reading it, I still have some doubts. Hope you can help me.