Ginger price hike in Karnataka : ಬೆಳೆಗಾರರ ಮುಖದಲ್ಲಿ ಮಂದಹಾಸ, ಶುಂಠಿ ದರದಲ್ಲಿ ಏರಿಕೆ!
Ginger Price Hike : ಪ್ರಸ್ತುತ ಹಸಿ ಶುಂಠಿಗೆ ಉತ್ತಮ ಬೆಲೆ (Ginger Price Hike) ದೊರೆತ ಹಿನ್ನೆಲೆಯಲ್ಲಿ ರೈತರು ಉತ್ಸಾಹದಿಂದ ಶುಂಠಿ ಬೆಳೆಯಲು ಮುಂದಾಗಿದ್ದಾರೆ. ಸದ್ಯ ಶುಂಠಿ ಬೆಳೆಯುವ ಪ್ರದೇಶ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದ್ದು, ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದ ಶುಂಠಿ ಬಿತ್ತನೆಯನ್ನು ಮಾಡಲು ರೈತರು ಮುಂದಾಗಿದ್ದಾರೆ.
2022 ಏಪ್ರಿಲ್‌ನಿಂದಲೇ ಅಕಾಲಿಕ ಮಳೆ ಸುರಿದು ನಂತರ ಜುಲೈ ಮತ್ತು ಅಗಸ್ಟ್‌ನಲ್ಲಿ ಧಾರಾಕಾರ ಮಳೆ ಸುರಿದಿದ್ದರಿಂದ ಹೊಲದಲ್ಲಿದ್ದ ಶುಂಠಿ ಬೆಳೆಯನ್ನು ಉಳಿಸಿಕೊಳ್ಳುವುದು ಕಷ್ಟಕರವಾಗಿತ್ತು. ತಗ್ಗುಪ್ರದೇಶ ಮತ್ತು ಶೀತಪೀಡಿತ ಪ್ರದೇಶಗಳಲ್ಲಿ ಬೆಳೆದ ಶುಂಠಿ ಅತಿವೃಷ್ಟಿಯಿಂದಾಗಿ ಕರಗಿ ಕಾಯಿಲೆಗೆ ತುತ್ತಾಗಿ ಹಾಳಾದ ನಂತರ ಉಳಿದ ಶುಂಠಿಗೆ ಉತ್ತಮ ಬೆಲೆ ದೊರೆಯಲು ಸಾಧ್ಯವಾಯಿತು.
ಕಳೆದ ಬಾರಿ ಶುಂಠಿ ಕಟಾವಿನಲ್ಲಿ 60 ಕೆಜಿ ಚೀಲವೊಂದಕ್ಕೆ 3200 ರೂ. ಬೆಲೆ ದೊರೆತ ಹಿನ್ನೆಲೆಯಲ್ಲಿ ಈ ವರ್ಷ ಬೆಳೆಗಾರರು ಮತ್ತಷ್ಟು ಉತ್ತೇಜಿತರಾಗಿದ್ದು, ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದ ಶುಂಠಿ ಬಿತ್ತನೆಯನ್ನು ಮಾಡಲು ಮುಂದಾಗಿದ್ದಾರೆ.
ಜೂನ್‌ನಲ್ಲಿ ಶುಂಠಿಯನ್ನು ಕೀಳಲು ಪ್ರಾರಂಭಿಸಿದಾಗ ಪ್ರತಿ 60 ಕೆಜಿ ಚೀಲಕ್ಕೆ 700 ರೂ. ಆರಂಭಿಕ ಬೆಲೆಯು ಸಿಕ್ಕಿತು. ದಿನ ಕಳೆದಂತೆ ಫೆಬ್ರವರಿ ಕೊನೆಯ ವೇಳೆಗೆ ಬೆಲೆ ಏರಿಕೆಯ ಹಾದಿ ಹಿಡಿದು 3200 ರೂ.ವೆರೆಗೂ ತಲುಪಿತು. ಕಳೆದ ನಾಲ್ಕೈದು ದಿನಗಳಿಂದ ಹಸಿ ಶುಂಠಿಯ ಬೆಲೆಯು 60 ಕೆಜಿಯ ಚೀಲಕ್ಕೆ 5 ಸಾವಿರ ರೂ. ತಲುಪಿದ್ದು, ಇದುವರೆಗೂ ಹೆಚ್ಚಿನ ಬೆಲೆಯ ನೀರೀಕ್ಷೆಯಿಟ್ಟು ಹೊಲದಲ್ಲೇ ಬಿಟ್ಟಿದ್ದವರಿಗೆ ಬಂಪರ್ ಬೆಲೆಯು ದೊರಕುತ್ತಿದೆ.
ಕಳೆದ ವರ್ಷ ಬಿತ್ತನೆಯ ಶುಂಠಿಗೆ 1000 ರೂ. ದಿಂದ 1500 ರೂ. ಇದ್ದು, ಈ ಬಾರಿ ಶುಂಠಿಯ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಬಿತ್ತನೆ ಶುಂಠಿಗೂ ಬೇಡಿಕೆ ಹೆಚ್ಚಿ ಪ್ರತಿ ಚೀಲಕ್ಕೆ 3200ರಿಂದ 4000 ರೂ.ವರೆಗೆ ತಲುಪಿದೆ.
ಜೊತೆಗೆ ಶುಂಠಿ ಬೆಳೆಗಾರರ ಸಂಖ್ಯೆ ಹೆಚ್ಚಿದಂತೆ ತಾಕುಗಳ ಮೇಲೆ ಮುಚ್ಚಲು ಅಗತ್ಯವಿರುವ ಭತ್ತದ ಹುಲ್ಲಿಗೂ ಬೇಡಿಕೆ ಹೆಚ್ಚಿದ್ದು, 1 ಎಕರೆ ವಿಸ್ತೀರ್ಣದಲ್ಲಿ ಬೆಳೆದಿರುವ ಭತ್ತದ ಹುಲ್ಲಿಗೆ 20 ರಿಂದ 30 ಸಾವಿರ ರೂ. ಬೆಲೆ ತೆರಬೇಕಿದೆ. ಶುಂಠಿಯನ್ನು ನಾಟಿ ಮಾಡಲು ಸಕಾಲವಾದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಅತ್ಯಧಿಕ ನಾಟಿ ಮಾಡುತ್ತಿರುವುದರಿಂದ ಸ್ಥಳೀಯವಾಗಿ ಕೂಲಿ ಕಾರ್ಮಿಕರ ಕೊರತೆ ಇದ್ದು ಹೊರಗಿನ ಕೂಲಿ ಕಾರ್ಮಿಕರನ್ನು ಕರೆತಂದು ಕೆಲಸ ಮಾಡಿಸಬೇಕಾಗಿರುವುದರಿಂದ ನಿರ್ವಹಣಾ ವೆಚ್ಚವೂ ಹೆಚ್ಚಿದೆ.
ಇನ್ನು ರಾಮನಗರದ ಜಿಲ್ಲೆಯ ಹಲಸಿನಮರದದೊಡ್ಡಿ, ಕಬ್ಬಾಳು ಸುತ್ತಮುತ್ತ ಪ್ರದೇಶದಲ್ಲಿ ನಾಟಿ ಹುಣಸೆ ಮರಗಳು ಹೆಚ್ಚಾಗಿದ್ದು ಈ ವರ್ಷ ಫಸಲು ಅಧಿಕವಾಗಿ ಬಂದಿದೆ. ಆದ್ದರಿಂದ ನಗರ ಪ್ರದೇಶಗಳಿಂದ ಜನಸಾಮಾನ್ಯರು ಹಾಗೂ ಹೋಟೆಲ್ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಾಟಿ ಹುಣಸೆ ಹಣ್ಣನ್ನು ಕೊಂಡು ಕೊಳ್ಳುತ್ತಿದ್ದಾರೆ. ಇದರಿಂದ ನಾಟಿ ಹುಣ ಸೆಹಣ್ಣಿನ ಬೇಡಿಕೆ ಅಧಿಕವಾಗಿದೆ.
ಅದಲ್ಲದೆ ನಗರ ಪ್ರದೇಶಗಳಾದ ಕನಕಪುರ, ಹಲಗೂರು, ಚನ್ನಪಟ್ಟಣದಿಂದ ಗ್ರಾಮೀಣ ಪ್ರದೇಶವಾದ ಕಬ್ಬಾಳು ಹಾಗೂ ಹಲಸಿನಮರದೊಡ್ಡಿ ಗ್ರಾಮಗಳಿಗೆ ವ್ಯಾಪಾರಿಗಳು, ಜನಸಾಮಾನ್ಯರು ಆಗಮಿಸಿ ಹುಣಸೆ ಹಣ್ಣನ್ನು ಖರೀದಿ ಮಾಡುತ್ತಾರೆ.
ಮುಖ್ಯವಾಗಿ ಹುಣಸೆಹಣ್ಣಿನ ಸಿಪ್ಪೆಯನ್ನು ಹಾಗೂ ಬೀಜವನ್ನು ತೆಗೆದು ದೀರ್ಘಕಾಲವಾಗಿ ಶೇಖರಿಸಿ ಇಡಬಹುದು. ಹುಣಸೆ ಹಣ್ಣು ಎಷ್ಟೇ ದಿನಗಳಾದರೂ ಹಾಳಾಗುವುದಿಲ್ಲ. ಹುಣಸೆ ಹಣ್ಣಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿದೆ. ಹುಣಸೆ ಹಣ್ಣು, ಕ್ಯಾರೋಟಿನ್, ವಿಟಮಿನ್-ಸಿ ಮತ್ತು ವಿಟಮಿನ್-ಬಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಹುಣಸೆಹಣ್ಣಿನ ಸೇವನೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ರಕ್ತನಾಳಗಳ ಮೇಲಿನ ಗೋಡೆಗಳ ಮೇಲೆ ಕೊಬ್ಬಿನ ಶೇಖರಣೆ ತಡೆಗಟ್ಟುತ್ತದೆ. ಹುಣಸೆ ಹಣ್ಣಿನಲ್ಲಿಇದು ಹೃದಯ ಬಡಿತ ಮತ್ತು ರಕ್ತದೊತ್ತಡದ ಸಮತೋಲನಗೊಳಿಸುತ್ತದೆ. ಇದು ರಕ್ತಹೀನತೆಯನ್ನು ಕಡಿಮೆಗೊಳಿಸಿದರೆ, ಮಧುಮೇಹ ನಿಯಂತ್ರಣವನ್ನು ನಿಯಂತ್ರಿಸಲು ಹುಣಸೆಹಣ್ಣು ಸಹಕಾರಿಯಾಗುತ್ತದೆ. ಆದ್ದರಿಂದ ಹುಣಸೆ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಔಷಧ ಗುಣ ಹೆಚ್ಚಾಗಿದೆ. ಆದ್ದರಿಂದ ಗ್ರಾಮೀಣ ಪ್ರದೇಶದ ಹುಣಸೆಹಣ್ಣಿನ ಬೇಡಿಕೆ ಹೆಚ್ಚಾಗಿದೆ.
ಇದನ್ನೂ ಓದಿ: Arecanut Coffee Rate 07/04/2023 : ಇಂದಿನ ಅಡಿಕೆ, ಕಾಫಿ, ಏಲಕ್ಕಿ ಧಾರಣೆಯ ಸಂಪೂರ್ಣ ವಿವರ ಇಲ್ಲಿದೆ