Footwear viral video: ಇದು ಚಪ್ಪಲಿಯೂ ಹೌದು, ಹೈ ಹೀಲ್ಸ್‌ ಕೂಡ ಹೌದು!! ಏನಿದರ ವಿಶೇಷತೆ? ವಿಡಿಯೋ ಇಲ್ಲಿದೆ

Share the Article

Footwear viral video : ಸಾಮಾನ್ಯ ಜನರು ಚಪ್ಪಲಿ ಧರಿಸುತ್ತಾರೆ. ಹಿಂದೆ ಕೂಡ ಚಪ್ಪಲಿ ಮಾತ್ರ ಇತ್ತು. ನಂತರ ಫ್ಯಾಷನ್ (Fashion) ಎಂದು ಹೈ ಹೀಲ್ಸ್‌ (heels) ಬಂತು. ಸಿನಿಮಾ ನಟಿಯರು ಮಾತ್ರವಲ್ಲದೆ ಸಾಮಾನ್ಯರೂ ಹೈ ಹೀಲ್ಸ್‌ ಹಾಕಲಾರಂಭಿಸಿದರು. ಇದೀಗ ಈ ಫ್ಯಾಷನ್ ಕೊಂಚ ಮುಂದುವರೆದು ಹೊಸತಾದ ಚಪ್ಪಲಿಯೂ, ಹೈ ಹೀಲ್ಸ್‌ ಆಗಿರುವ ಕನ್ವರ್ಟಬಲ್ ಹೀಲ್ಸ್ (convertable heels) ಬಂದಿದೆ. ಸದ್ಯ ಈ ಹೀಲ್ಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಹಾಗಿದ್ದರೆ, ಏನಿದರ ವಿಶೇಷತೆ? ಇದು ಚಪ್ಪಲಿಯೂ ಹೌದು, ಹೈ ಹೀಲ್ಸ್‌ ಕೂಡ ಹೌದಂತೆ ಇದು ಹೇಗೆ ಸಾಧ್ಯ? ನೋಡೋಣ.

ಸಾಮಾನ್ಯವಾಗಿ ಹೈ ಹೀಲ್ಸ್‌ ಹಾಕಿದರೆ ನಂತರ ಕಾಲು ನೋವು ಬರುತ್ತದೆ. ಕಾಲು ಸೆಳೆತ ಉಂಟಾಗುತ್ತದೆ. ಅದಕ್ಕಾಗಿ

ಈ ಕನ್ವರ್ಟಬಲ್ ಹೀಲ್ಸ್. ಇದನ್ನು ಧರಿಸಿದರೆ ಕಾಲು ನೋವು ಬರಲ್ಲ, ಅಲ್ಲದೆ, ಚಪ್ಪಲಿ ತೆಗೆಯುವ ಪ್ರಸಂಗವೂ ಬರುವುದಿಲ್ಲ. ಹೌದು, ನಿಮಗೆ ಹೀಲ್ಸ್​ ಬೇಕು ಅನಿಸಿದಾಗ ಹಾಕಿಕೊಂಡು ಓಡಾಡಬಹುದು. ಅದೇ ಬೇಡ ಅಂದಾಗ ಹೀಲ್ಸ್ ತೆಗೆದು ಪ್ಲಾಟ್ ಚಪ್ಪಲ್ ಮಾಡಿಕೊಳ್ಳಬಹುದು. ಸೂಪರ್ ಐಡಿಯಾ ಅಲ್ವಾ!!. ಹೀಲ್ಸ್ ಧರಿಸುವವರಿಗೆ ಈ ಕನ್ವರ್ಟಬಲ್ ಹೀಲ್ಸ್ ನೋಡಿ ಖುಷಿ ಆಗೇ ಆಗುತ್ತೇ!!!. ಯಾಕಂದ್ರೆ ಹೀಲ್ಸ್ ಹಾಕಿ ಕಾಲೆಲ್ಲಾ ನೋವು ಬಂದಿರುತ್ತೇ.

ಕನ್ವರ್ಟಬಲ್ ಹೀಲ್ಸ್ ಬೇರ್ಪಡಿಸಬಹುದಾದ ಮತ್ತು ಅಂಟಿಸಬಹುದಾದ ಅಡಿಭಾಗಗಳನ್ನು ಹೊಂದಿವೆ. ಹೀಲ್ಸ್‌ ಬೇಕಾದರೆ ಅಡಿಭಾಗವನ್ನು ಜೋಡಿಸಿಕೊಳ್ಳಬಹುದು, ಬೇಡ ಎಂದರೆ ಅದನ್ನು ತೆಗೆದು ಚಪ್ಪಲಿ ಮಾಡಿಕೊಳ್ಳಬಹುದು. ಎರಡು ಚಪ್ಪಲಿಯ ಅವಶ್ಯಕತೆಯೇ ಇಲ್ಲ. ಒಂದೇ ಚಪ್ಪಲಿಯಲ್ಲಿ ಎರಡು ರೀತಿಯ ಸೌಲಭ್ಯ.

ಸದ್ಯ ಈ ಚಪ್ಪಲಿಯ ವಿಡಿಯೋ ವೈರಲ್ (Footwear viral video)ಆಗಿದ್ದು, ಹೆಣ್ಣುಮಕ್ಕಳು ದಿಲ್ ಖುಷ್ ಆಗೋದು ಗ್ಯಾರಂಟಿ!!! ಬಿಗ್ ಕೇ (big kay) ಹೆಸರಿನ ಟ್ವಿಟರ್‌ (Twitter) ಖಾತೆಯಲ್ಲಿ ಈ ಜೋಡಿಸಿಕೊಳ್ಳಬಹುದಾದ ಚಪ್ಪಲಿಗಳ ವಿಡಿಯೋವನ್ನು ಫ್ಯಾಶನ್ ಫುಟ್‌ವೇರ್‌ನ ಸಿಇಒ ಹೇಲಿ ಪಾವೊನ್ ಹಂಚಿಕೊಂಡಿದ್ದಾರೆ. ಚಪ್ಪಲಿಯನ್ನು ಫ್ಲಾಟ್‌ ಮತ್ತು ಹೀಲ್ಸ್‌ ಆಗಿ ಪರಿವರ್ತಿಸಬಹುದಾದ ಹೊಸ ಉತ್ಪನ್ನದ ಬಗ್ಗೆ ಆಕೆ ವಿವರಿಸಿದ್ದಾರೆ. ಈ ಪೋಸ್ಟ್‌ ಸಖತ್ ವೈರಲ್‌ ಆಗುತ್ತಿದ್ದು, ಸಾಕಷ್ಟು ಲೈಕ್ಸ್ ಮತ್ತು ಕಾಮೆಂಟ್ ಪಡೆದುಕೊಂಡಿದೆ.

Leave A Reply