7th Pay Commission: ಕೇಂದ್ರ ನೌಕರರಿಗೆ ಭರ್ಜರಿ ಸಿಹಿ ಸುದ್ದಿ! ಜುಲೈನಲ್ಲಿ ಮತ್ತೊಂದು ಡಿಎ ಹೆಚ್ಚಳ!

7th-Pay Commission: ಕೇಂದ್ರ ನೌಕರರು ಮತ್ತು ಪಿಂಚಣಿದಾರಿಗೆ ಸರಕಾರದ ವತಿಯಿಂದ ಸಿಹಿ ಸುದ್ದಿಯೊಂದು(Good News) ಅತಿ ಶೀಘ್ರದಲ್ಲಿಯೆ ಬರಲಿದೆ. ಜುಲೈನಲ್ಲಿ ಕೇಂದ್ರ ನೌಕರರಿಗೆ ಮತ್ತೊಂದು ಡಿಎ ಹೆಚ್ಚಳ ಆಗಲಿದೆ ಎಂಬ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ.

 

ಬೆಲೆ ಏರಿಕೆಯನ್ನು ಸಮತೋಲನ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ (Central Government) ತನ್ನ ಉದ್ಯೋಗಿಗಳಿಗೆ (Central Government Employees) ಮತ್ತು ಪಿಂಚಣಿದಾರರಿಗೆ ಡಿಎ ನೀಡುತ್ತದೆ. ಕೈಗಾರಿಕಾ ಕಾರ್ಮಿಕರ ಅಥವಾ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧಾರದಲ್ಲಿ ಲೆಕ್ಕ ಮಾಡಿ ಡಿಎ ಶೇ.4 ರಷ್ಟು ಹೆಚ್ಚಳ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಅನುರಾಗ್ ಸಿಂಗ್ ಠಾಕೂರ್ ಮಾಹಿತಿ ನೀಡಿದ್ದರು. ಕೇಂದ್ರ ಸರ್ಕಾರವು ತನ್ನ ಸರ್ಕಾರಿ ಉದ್ಯೋಗಿಗಳ(Central Govt Employees) ತುಟ್ಟಿಭತ್ಯೆಯನ್ನು (DA) ಶೇ.4 ರಷ್ಡು ಹೆಚ್ಚಳ ಮಾಡಿದ್ದು, ಹೀಗಾಗಿ, ನೌಕರರ ತುಟ್ಟಿಭತ್ಯೆ ಶೇ.42ಕ್ಕೆ ಏರಿಕೆ ಮಾಡಿದಂತಾಗಿದೆ.

ಕೇಂದ್ರ ಸರ್ಕಾರವು ಉದ್ಯೋಗಿಗಳಿಗೆ ತುಟ್ಟಿಭತ್ಯೆ (DA) ಶೇ.4 ರಷ್ಟು ಹೆಚ್ಚಳ ಮಾಡಿದ್ದು, ನೌಕರರು ತಮ್ಮ ಮೂಲ ವೇತನದ ಮೇಲೆ 4 ಪ್ರತಿಶತ ಡಿಎ ಪಡೆಯಬಹುದಾಗಿದೆ. ನೌಕರರಿಗೆ ಡಿಎ ಹೆಚ್ಚಿಸಿದರೆ, ಪಿಂಚಣಿದಾರರಿಗೂ ತುಟ್ಟಿಭತ್ಯೆ ಏರಿಕೆಯಾಗಲಿದೆ. ಹೀಗಾಗಿ, ಪಿಂಚಣಿದಾರರ ಮೂಲ ವೇತನದ ಮೇಲೆ 4 ಪ್ರತಿಶತ ಡಿಆರ್ (DR) ಹೆಚ್ಚಾಗಲಿದೆ. ಸಂಬಳ ಪಡೆಯುವ ಕಾರ್ಮಿಕರಿಗೆ ಡಿಎ ಸಂಪೂರ್ಣವಾಗಿ ತೆರಿಗೆಗೆ ಒಳಪಡುತ್ತದೆ. ಕೇಂದ್ರ ಸರ್ಕಾರ ಕೈಗೊಂಡಿರುವ ಈ ನಿರ್ಧಾರದಿಂದ 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಲಕ್ಷ ಪಿಂಚಣಿದಾರರಿಗೆ ಪ್ರಯೋಜನ ಲಭ್ಯವಾಗಲಿವೆ.

ಜುಲೈನಲ್ಲಿ ಕೇಂದ್ರವು ಮತ್ತೊಂದು ತುಟ್ಟಿಭತ್ಯೆ (DA) ಹೆಚ್ಚಳವನ್ನು ಘೋಷಿಸಬಹುದು ಎಂಬ ಗಾಳಿ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿದೆ. ಕಳೆದ ನಾಲ್ಕು ತಿಂಗಳ ಡೇಟಾದೊಂದಿಗೆ ಡಿಎ 4% ರಷ್ಟು ಹೆಚ್ಚಾಗುವ ಸಾಧ್ಯತೆಯ ಕುರಿತು ತಜ್ಞರು ಮಾಹಿತಿ ನೀಡಿದ್ದಾರೆ. ನೌಕರರ ನಿರೀಕ್ಷೆಗೆ ಅನುಗುಣವಾಗಿ ಸರ್ಕಾರ ಹೊಸ ಸೂತ್ರವನ್ನು ಜಾರಿಗೆ ತರುವ ಸಾಧ್ಯತೆಗಳಿವೆ. 7ನೇ ವೇತನ ಆಯೋಗದ (7th-Pay Commission) ಪ್ರಸ್ತುತ ತುಟ್ಟಿಭತ್ಯೆ ದರವನ್ನು ಮೂಲ ವೇತನದೊಂದಿಗೆ ಗುಣಿಸಿ ತುಟ್ಟಿಭತ್ಯೆಯನ್ನು ಲೆಕ್ಕ ಮಾಡಲಾಗುತ್ತದೆ. ನಿಮ್ಮ ಮೂಲ ವೇತನ ರೂ.56,900 ಡಿಎ (56,900 x12)/100 ಆಗಿದ್ದರೆ, ಪ್ರಸ್ತುತ ಶೇಕಡಾವಾರು ದರವು 12% ಆಗಿದೆ.

ತುಟ್ಟಿಭತ್ಯೆಯು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಸಂಬಳದ ಒಂದು ಅಂಶವಾಗಿದ್ದು, ಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ನಿಯತಕಾಲಿಕವಾಗಿ ಪರಿಷ್ಕರಣೆ ಮಾಡಲಾಗುತ್ತದೆ. ಆದರೂ, ಭಾರತದಾದ್ಯಂತ ಪ್ರತಿ ಸರ್ಕಾರಿ ಉದ್ಯೋಗಿಗೆ ಡಿಎ ಒಂದೇ ರೀತಿ ಇರುವುದಿಲ್ಲ ಎಂಬುದನ್ನು ಗಮನಿಸಬೇಕು. 7 ತಿಂಗಳಿನಿಂದ ಅಂದರೆ ಏಪ್ರಿಲ್ ತಿಂಗಳಿನಿಂದ ನೌಕರರಿಗೆ ಹೆಚ್ಚಿದ ಡಿಎ ಲಾಭ ಸಿಗಲಿದೆ.ಕೆಲಸದ ಸ್ಥಳ, ಇಲಾಖೆ ಮತ್ತು ಇತರ ವಿಷಯಗಳ ಹಿರಿತನದ ಆಧಾರದ ಮೇಲೆ ಗಮನಾರ್ಹವಾಗಿ ವಿಭಿನ್ನವಾಗಿರುತ್ತದೆ.

ಇದನ್ನೂ ಓದಿ: NEP: ವಿದ್ಯಾರ್ಥಿಗಳೇ ಗಮನಿಸಿ, 12ನೇ ತರಗತಿಗೆ ಇನ್ಮುಂದೆ ಎರಡು ಬೋರ್ಡ್ ಪರೀಕ್ಷೆಗಳು!!

Leave A Reply

Your email address will not be published.