Mangaluru Assembly Election : ಪುತ್ತೂರು , ಸುಳ್ಯ ವಿಧಾನಸಭಾ ಕ್ಷೇತ್ರ‌ : ಬಿಜೆಪಿಯಲ್ಲಿ ಹೊಸ ಮುಖಗಳಿಗೆ ಅವಕಾಶ ಸಾಧ್ಯತೆ

Puttur-Sullia constituency election : ಮಂಗಳೂರು : ವಿಧಾನಸಭಾ ಚುನಾವಣೆಯ ಕಾವು ಏರತೊಡಗಿದೆ.ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆ ನಡೆಯುತ್ತಿದೆ.

ಈತನ್ಮಧ್ಯೆ ರಾಜ್ಯದಲ್ಲಿ ಬಿಜೆಪಿಯ ಹಾಲಿ 24 ಶಾಸಕರಿಗೆ ಟಿಕೆಟ್ ಇಲ್ಲ ಎಂಬ ಪಕ್ಷದ ಆಂತರಿಕ ಸಭೆಯಲ್ಲಿ ಬಹಿರಂಗವಾಗಿದೆ.

ಇದೇ ಮೊದಲ ಬಾರಿಗೆ ಪುತ್ತೂರು,ಸುಳ್ಯದಲ್ಲಿ (Puttur-Sullia constituency election) ಬಿಜೆಪಿಯಲ್ಲಿ ಅಭ್ಯರ್ಥಿ ಬದಲಾವಣೆಯ ಕೂಗು ಬಲವಾಗಿ ಕೇಳಿಬರುತ್ತಿದೆ.ಕಳೆದ ಮೂರುವರೆ ದಶಕಗಳಿಂದ ಬಿಜೆಪಿಯಲ್ಲಿ ಸ್ಪರ್ಧಿಸುತ್ತಿದ್ದ ಶಾಸಕ ಅಂಗಾರ ಅವರಿಗೇ ಟಿಕೆಟ್ ನೀಡಲು ಪಕ್ಷದಲ್ಲಿ ಕೆಲವರಿಂದ ಅಪಸ್ವರ ಎದ್ದಿದೆ.

ಪುತ್ತೂರು ಕ್ಷೇತ್ರದಲ್ಲೂ ಸಂಜೀವ ಮಠಂದೂರು ವಿರುದ್ಧ ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ಅಪಸ್ವರ ಕೇಳಿಬಂದಿದೆ.ಇದು ಅಣಬೆ ಹೇಳಿಕೆಯ ಬಳಿಕ ಮತ್ತಷ್ಟು ರಂಗ್ ಪಡೆದುಕೊಂಡಿದೆ.

ಶಾಸಕ ಸಂಜೀವ ಮಠಂದೂರು ಅವರನ್ನು ಪಕ್ಷದ ನಾಯಕರು ಬೆಂಗಳೂರುಗೆ ಕರೆಸಿ ಈ ಬಗ್ಗೆ ಮಾಹಿತಿಯನ್ನೂ ನೀಡಿದ್ದಾರೆ ಎಂದು ವರದಿಯಾಗಿದೆ. ಸಂಜೀವ ಮಠಂದೂರು ಅವರು ಶಾಸಕರಾದ ನಂತರ ಸಾವಿರಾರು ಕೋಟಿ ರೂ.ಅನುದಾನವನ್ನು ತಂದು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮನ್ನಣೆ ಪಡೆದುಕೊಂಡಿದ್ದಾರೆ. ಮಾತ್ರವಲ್ಲದೆ ಪ್ರಚಾರವಿಲ್ಲದ ಸೈಲೆಂಟ್ ವರ್ಕರ್ ಎಂದೇ ಗುರುತಿಸಿಕೊಂಡಿದ್ದಾರೆ.

ಈ ಎರಡೂ ಕ್ಷೇತ್ರದಲ್ಲೂ ಅಭ್ಯರ್ಥಿ ಬದಲಾವಣೆ ಮಾಡುವುದಾದರೆ ಯಾರಿಗೆ ಸಿಗಬಹುದು ಎಂದು ಕಣ್ಣಾಡಿಸಿದರೆ ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ,ಯತೀಶ್ ಅರುವಾರ,ಕಿಶೋರ್ ಬೊಟ್ಯಾಡಿ ಹೆಸರು ಕೇಳಿಬರುತ್ತಿದೆ.ಅಂತಿಮವಾಗಿ ಪಕ್ಷ ಅಚ್ಚರಿಯ ಆಯ್ಕೆ ಕೂಡ ಮಾಡುವ ಸಾಧ್ಯತೆ ಇದೆ.

ಸುಳ್ಯದಲ್ಲಿ ಎಸ್.ಅಂಗಾರ ಅವರ ಬದಲಿಗೆ ಜಿ.ಪಂ.ಮಾಜಿ ಸದಸ್ಯೆ ಹಾಗೂ ಬಿಜೆಪಿಯ ಹಿರಿಯ ಕಾರ್ಯಕರ್ತೆ ಭಾಗೀರಥಿ ಮುರುಳ್ಯ ಅವರ ಹೆಸರು ಮುಂಚೂಣಿಯಲ್ಲಿದೆ.ಉಳಿದಂತೆ ಶಿವಪ್ರಸಾದ್ ಪೆರುವಾಜೆ,ಲತೀಶ್ ಗುಂಡ್ಯ ಅವರ ಹೆಸರು ಕೇಳಿಬರುತ್ತಿದೆ.

 

ಇದನ್ನು ಓದಿ : Lemon juice : ನಿಂಬೆ ರಸದೊಂದಿಗೆ ಅರಿಶಿನ ಬೆರೆಸಿ 1 ಲೋಟ ಕುಡಿದರೆ ಪ್ರಯೋಜನಗಳೇಷ್ಟು ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ 

1 Comment
  1. Your point of view caught my eye and was very interesting. Thanks. I have a question for you.

Leave A Reply

Your email address will not be published.