Budget cars: ಭಾರೀ ಅಗ್ಗದ ಬೆಲೆಯಲ್ಲಿ ಲಭ್ಯ ಮಾರುತಿ, ಟಾಟಾದ ಈ ಕಾರುಗಳು!!
Budget cars: ಸದ್ಯ ಕಂಪನಿಗಳು ನೂತನ ವಿಭಿನ್ನ ವಿನ್ಯಾಸ, ಅತ್ಯುತ್ತಮ ಫೀಚರ್ಸ್ ಇರುವ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಆದರೆ, ಕಾರು (car) ಖರೀದಿಸುವಾಗ ಬೆಲೆಯೂ ಮುಖ್ಯವಾಗುತ್ತದೆ. ಯಾವೆಲ್ಲಾ ಕಾರುಗಳು ಅಗ್ಗದ ಬೆಲೆಗೆ ಸಿಗುತ್ತವೆ ಗೊತ್ತಾ? ಇಲ್ಲಿದೆ ನೋಡಿ ಜನಪ್ರಿಯ ಕಂಪನಿಗಳ ಕಡಿಮೆ ಬೆಲೆಯ ಕಾರುಗಳು (Budget cars).
ಟಾಟಾ ಟಿಯಾಗೊ: ಟಾಟಾ (tat) ಕಂಪನಿಯು ‘ಟಿಯಾಗೊ’ ಹ್ಯಾಚ್‌ಬ್ಯಾಕ್ ಮಾರಾಟ ಮಾಡುತ್ತಿದ್ದು, ನೂತನ ಟಾಟಾ ಟಿಯಾಗೊ, ರೂ.5.54 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಹೊಂದಿದೆ. ಟಾಟಾ ಟಿಯಾಗೊ (tata Tiago) ಹ್ಯಾಚ್‌ಬ್ಯಾಕ್ ಐದು ಬಣ್ಣಗಳು ಮತ್ತು ಆರು ರೂಪಾಂತರಗಳಲ್ಲಿ ನೀಡಲಾಗುತ್ತಿದೆ. ಈ ಎಲ್ಲಾ ರೂಪಾಂತರಗಳು 1.2L, 3-ಸಿಲಿಂಡರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹೊಂದಿವೆ. ಹ್ಯಾಚ್ ಮಾದರಿಯ ಶ್ರೇಣಿಯು ಐದು CNG ರೂಪಾಂತರಗಳನ್ನು ಹೊಂದಿದೆ. ಇದು 86bhp ಮತ್ತು 113Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. CNG ಕಿಟ್‌ನೊಂದಿಗೆ, ಪೆಟ್ರೋಲ್ ಮೋಟಾರ್ 73bhp ಮತ್ತು 95Nm ಟಾರ್ಕ್ ಉತ್ಪಾದಿಸುತ್ತದೆ.
Tiago CNG 26.49km/kg ಇಂಧನ ದಕ್ಷತೆಯನ್ನು ನೀಡುತ್ತದೆ.
ಟಿಯಾಗೊ ಕಾರು, 19.0 – 19.01 kmpl ಮೈಲೇಜ್ ನೀಡಲಿದ್ದು,
7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಎಲ್ಇಡಿ DRLs, ಪ್ರೊಜೆಕ್ಟರ್ ಹೆಡ್‌ಲೈಟ್, 8 ಸ್ಪೀಕರ್ ಸೌಂಡ್ ಸಿಸ್ಟಮ್ ಹೊಂದಿದೆ. ಸುರಕ್ಷತೆಗಾಗಿ ಡುಯಲ್ ಏರ್ ಬಾಗ್ಸ್, ರೇರ್ ಪಾರ್ಕಿಂಗ್ ಸೆನ್ಸರ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದಿದೆ.
ಮಾರುತಿ ಸುಜುಕಿ ಸೆಲೆರಿಯೊ: ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಗ್ರಾಹಕರ ಆಯ್ಕೆಗೆ ಪೂರಕವಾಗುವ ಅನೇಕ ವಿಶೇಷತೆ ಒಳಗೊಂಡ ಅತ್ಯುತ್ತಮ ಸಿಟಿ ಕಾರುಗಳಲ್ಲಿ ಒಂದಾಗಿದೆ. ಈ ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಕಾರು 1.0-ಲೀಟರ್ NA ಪೆಟ್ರೋಲ್ ಎಂಜಿನ್ ಒಳಗೊಂಡಿದೆ. ಈ ಎಂಜಿನ್ 66.6bhp ಪವರ್ ಮತ್ತು 89 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಕೂಡ ಒಳಗೊಂಡಿದೆ. ಸೆಲೆರಿಯೊ VXi AMT ರೂಪಾಂತರವು 26.68kmpl ಮೈಲೇಜ್ ನೀಡುತ್ತದೆ. ಇದರ ಬೆಲೆ 6.37 ಲಕ್ಷ ರೂ. ಇದೆ. ಹ್ಯಾಚ್‌ಬ್ಯಾಕ್ ಮಾಡೆಲ್ ಪ್ರಸ್ತುತ ರೂ. 5.35 ಲಕ್ಷದಿಂದ ರೂ. 7.13 ಲಕ್ಷ ಬೆಲೆಯಲ್ಲಿ ಲಭ್ಯವಿದೆ.
ರೆನಾಲ್ಡ್ ಕ್ವಿಡ್ (Renault kwid) : ಇದು ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಇದರಲ್ಲಿ ಐದು ಜನರು ಸುಲಭವಾಗಿ ಪ್ರಯಾಣಿಸಬಹುದಾಗಿದೆ. ಇದು ಎಸ್‌ಯುವಿ ಹೊಂದಿರುವ ನೋಟವನ್ನು ಹೊಂದಿದ್ದು, 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಸೇರಿದಂತೆ ಭರಪೂರ ವೈಶಿಷ್ಟ್ಯಗಳನ್ನು ಪಡೆದಿದೆ. ಈ ರೆನಾಲ್ಡ್ ಕ್ವಿಡ್ 799 ಯಿಂದ 999 ಸಿಸಿ ಎಂಜಿನ್ ಹೊಂದಿದ್ದು, 21.46 – 22.3 kmpl ಮೈಲೇಜ್ ನೀಡುತ್ತದೆ. ಸದ್ಯ ಈ ರೆನಾಲ್ಟ್ ಕ್ವಿಡ್ ರೂ.4.70 ಲಕ್ಷದಿಂದ ರೂ.6.33 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಲಿದೆ.
ಮಾರುತಿ ಆಲ್ಟೊ ಕೆ10 : ಮಾರುತಿ ಸುಜುಕಿಯ ಆಲ್ಟೊ (maruti suzuki alto) ಸಾಕಷ್ಟು ಜನಪ್ರಿಯತೆ ಪಡೆದಿದ್ದು, ಜನಸಾಮಾನ್ಯರ ಕಾರು ಎಂದೇ ಖ್ಯಾತಿ ಗಳಿಸಿದೆ. ಕಂಪನಿ ಕಳೆದ ವರ್ಷ ಆಲ್ಟೊ ಕೆ10 ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ಈ ಕಾರು ಭಾರೀ ಸದ್ದು ಮಾಡಿದೆ. ಇದರಲ್ಲಿ ಸಿಎನ್ಜಿ (CNG ) ಆವೃತ್ತಿ ಲಭ್ಯವಿದ್ದು, ಇದು ಪೆಟ್ರೋಲ್ ಎಂಜಿನ್ 67 PS ಮತ್ತು 89 Nm ಅನ್ನು ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಸಿಎನ್ ಜಿಯಲ್ಲಿ ಎಂಜಿನ್ 57PS ಮತ್ತು 82.1 Nm ಅನ್ನು ಉತ್ಪಾದಿಸುತ್ತದೆ. ಇದರಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆ ಇರಲಿದೆ.
ಆಲ್ಟೊ ಕೆ10 (maruti suzuki alto K10) 1.0-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಹಾಗೇ ಐಡಲ್-ಎಂಜಿನ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್ (ಸ್ಟ್ಯಾಂಡರ್ಡ್), AMT ಗೇರ್ ಬಾಕ್ಸ್ (ಐಚ್ಛಿಕ) ಇರಲಿದ್ದು, ಈ ಕಾರು ಸಿಎನ್ಜಿ ಯಲ್ಲಿ 33.85KM ಮೈಲೇಜ್ ಕ್ರಮಿಸುತ್ತದೆ. ಅಲ್ಲದೆ, ಇದರಲ್ಲಿ ಸ್ಟೀರಿಂಗ್ ಮೌಂಟೆಡ್ ನಿಯಂತ್ರಣಗಳನ್ನು ನೀಡಲಾಗಿದೆ. ಸದ್ಯ ಈ ಕಾರಿನ ಆರಂಭಿಕ ಬೆಲೆ 3.99 ಲಕ್ಷ ರೂ. ಆಗಿದೆ. ಮಾರುತಿ ಆಲ್ಟೊ ಕೆ10ನ ಉನ್ನತ ರೂಪಾಂತರದ ಎಕ್ಸ್ ಶೋರೂಂ ಬೆಲೆ 5.95 ಲಕ್ಷ ರೂ ಇರಲಿದೆ.
ಹುಂಡೈ ಗ್ರಾಂಡ್ ಐ10 ನಿಯೋಸ್ : ಹುಂಡೈ ಗ್ರಾಂಡ್ ಐ10 ನಿಯೋಸ್ (Hyundai Grand i10 Nios) ಕಡಿಮೆ ತೂಕ, ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇದರ 1.2 ಲೀಟರ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್, 83 PS ಗರಿಷ್ಠ ಪವರ್, ಹಾಗೂ 114 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5 ಸ್ವೀಡ್ ಮ್ಯಾನುವಲ್ ಹಾಗೂ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ. ಇನ್ನು ಕಾರಿನಲ್ಲಿ ಪವರ್ ಸ್ಟೀರಿಂಗ್, ಎಬಿಎಸ್, ಏರ್ ಬ್ಯಾಗ್ ನಂತಹ ಇತರೆ ವೈಶಿಷ್ಟ್ಯಗಳು ಇವೆ. ಸದ್ಯ ಈ ಕಾರು ರೂ.5.73 ಲಕ್ಷದಿಂದ ರೂ.8.51 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ.