Smartphone Buying Tips: ಸ್ಮಾರ್ಟ್ ಫೋನ್ ಖರೀದಿ ಮಾಡುವ ಮುನ್ನ ಈ ಐದು ವಿಚಾರಗಳ ಬಗ್ಗೆ ಗಮನ ಹರಿಸಿ!
Smartphone Buying Tips : ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್ಫೋನ್ (Smartphone) ಎಂಬ ಮಾಯಾವಿಯ ಬಳಕೆ ಆರಂಭವಾದ ಬಳಿಕ ಎಲ್ಲರ ಕೈಯಲ್ಲೂ ಹರಿದಾಡಿ ಅರೆ ಕ್ಷಣವು ಬಿಟ್ಟಿರಲಾಗದಷ್ಟು ನಂಟು ಬೆಸೆದುಕೊಂಡು ಬಿಟ್ಟಿದೆ. ಇಷ್ಟೇ ಅಲ್ಲದೆ, ಬದಲಾವಣೆಯ ಗಾಳಿ ಬೀಸಿ, ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳಾಗಿ ದಿನಂಪ್ರತಿ ನವೀನ ಮಾದರಿಯ ವೈಶಿಷ್ಟ್ಯದ ಮೂಲಕ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧನಗಳು ಕೂಡ ಕಡಿಮೆಯೇನಿಲ್ಲ!!! ನೀವೇನಾದರೂ ಸ್ಮಾರ್ಟ್ ಫೋನ್ ಖರೀದಿ ಮಾಡುವ ಯೋಜನೆ ಹಾಕಿದ್ದರೆ, ಕೆಲ ವಿಚಾರದ ಬಗ್ಗೆ ಗಮನ ಹರಿಸುವುದು ಒಳ್ಳೆಯದು.
ಇಂದು ಹೊಸ ಹೊಸ ವೈಶಿಷ್ಟ್ಯದ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಹೊಸ ಸ್ಮಾರ್ಟ್ ಫೋನ್ ಖರೀದಿ ಮಾಡಲು ಜನರು ಬಯಸುವುದು ಸಹಜ. ಸ್ಮಾರ್ಟ್‌ಫೋನ್ ಖರೀದಿಸುವಾಗ (Smartphone Buying Tips)ನಿಮ್ಮ ಅವಶ್ಯಕತೆ ಮತ್ತು ಬಜೆಟ್‌ಗೆ ಅನುಗುಣವಾಗಿ ಸರಿಯಾದ ಸ್ಮಾರ್ಟ್‌ಫೋನ್ ಆಯ್ಕೆ ಮಾಡುವುದು ಬಹುಮುಖ್ಯ ಪಾತ್ರ ವಹಿಸುತ್ತದೆ.
ಸ್ಮಾರ್ಟ್‌ಫೋನ್ ಖರೀದಿಸುವಾಗ ಗಮನಿಸಬೇಕಾದ ಐದು ಪ್ರಮುಖ ವಿಷಯಗಳೆಂದರೆ,
ಬ್ಯಾಟರಿ(Battery):
ಯಾವುದೇ ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ಅದರ ಬ್ಯಾಟರಿ ಬಾಳಿಕೆ ಬಗ್ಗೆ ತಪ್ಪದೇ ಪರಿಶೀಲಿಸಿ ಮಾಹಿತಿ ತಿಳಿದು ಖರೀದಿ ಮಾಡುವುದು ಉತ್ತಮ.ನೀವು ಖರೀದಿ ಮಾಡಲು ಬಯಸುವ ಸ್ಮಾರ್ಟ್‌ಫೋನ್ ಫುಲ್ ಚಾರ್ಜ್‌ನಲ್ಲಿ ಎಷ್ಟು ಗಂಟೆ ಇಲ್ಲವೇ ದಿನಗಳವರೆಗೆ ಬಾಳಿಕೆ ಬರುತ್ತದೆ ಎಂಬ ವಿವರವನ್ನು mAh ನೆರವಿನಿಂದ ಪಡೆಯಬಹುದು. ಈ ಫೋನ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆಯೇ ಎಂಬುದನ್ನು ಕೂಡ ಪರಿಶೀಲಿಸಿ ಕೊಂಡುಕೊಳ್ಳಲು ಮುಂದಾಗುವುದು ಒಳ್ಳೆಯದು.
ಕ್ಯಾಮರಾ:
ಕೆಲವರಿಗೆ ಫೋಟೋ (Photo) ತೆಗೆಯುವುದರಲ್ಲಿ ಹೆಚ್ಚಿನ ಆಸಕ್ತಿ ಇರುವುದು ಸಹಜ. ಹೀಗಾಗಿ, ಮೊಬೈಲ್ ಕೊಳ್ಳುವಾಗ ಫೋನ್‌ನ ಕ್ಯಾಮೆರಾದ (Camera)ಬಗ್ಗೆ ವಿಶೇಷ ಗಮನ ಕೊಡುವುದು ಮುಖ್ಯ. ನೀವು ಹೈ ರೆಸಲ್ಯೂಶನ್, ದ್ಯುತಿರಂಧ್ರ, ಸಂವೇದಕ ಗಾತ್ರ ಮತ್ತು ಆಟೋಫೋಕಸ್ ವ್ಯವಸ್ಥೆಯನ್ನು ಒಳಗೊಂಡ ಫೋನ್ ಅನ್ನು ಖರೀದಿ ಮಾಡುವುದು ನಿಮಗೆ ಅತ್ಯುತ್ತಮ ಆಯ್ಕೆ ಎಂದರೆ ತಪ್ಪಾಗದು.
ಸ್ಕ್ರೀನ್ ಗಾತ್ರ, ರೆಸಲ್ಯೂಶನ್:
ಸ್ಮಾರ್ಟ್‌ಫೋನ್ ಖರೀದಿ ಮಾಡುವಾಗ ತಪ್ಪದೆ ಫೋನ್‌ನ ಸ್ಕ್ರೀನ್ ಮತ್ತು ಅದರ ರೆಸಲ್ಯೂಶನ್ ಬಗ್ಗೆ ಗಮನ ಹರಿಸುವುದು ಒಳ್ಳೆಯದು. ದೊಡ್ಡ ಡಿಸ್ಪ್ಲೇ (Display)ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಮಲ್ಟಿಮೀಡಿಯಾವನ್ನು(Multimedia) ಬಳಸುವ ಜನರಿಗೆ ಹೆಚ್ಚು ಅನುಕೂಲಕರವಾಗಿದೆ. ಸ್ಕ್ರೀನ್ ಗಾತ್ರ, ರೆಸಲ್ಯೂಶನ್ ಸ್ಮಾರ್ಟ್‌ಫೋನ್ ಬಳಕೆ ಮಾಡಲು ಹೆಚ್ಚು ಪ್ರಭಾವ ಬೀರುತ್ತದೆ.
ಬಜೆಟ್:
ಮೊದಲನೆಯದಾಗಿ ನೀವು ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್ ಖರೀದಿಸುವ ಬರದಲ್ಲಿ ನಿಮ್ಮ ಬಜೆಟ್ ವಿಷಯದಲ್ಲಿ ಯಾವುದೇ ರೀತಿಯಲ್ಲಿ ರಾಜಿಯಾಗುವ ಅವಶ್ಯಕತೆಯಿಲ್ಲ. ಏಕೆಂದರೆ, ಇಂದು ನಾವು ಕಡಿಮೆ ಬೆಲೆಯಲ್ಲಿಯೂ ಕೂಡ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳು ಕೊಳ್ಳಲು ಸಾಧ್ಯವಿದೆ.
ಆಪರೇಟಿಂಗ್ ಸಿಸ್ಟಮ್:
ಯಾವುದೇ ಸ್ಮಾರ್ಟ್‌ಫೋನ್ ಖರೀದಿಸುವಾಗ ಮೊದಲು ಅದರಲ್ಲಿ ಯಾವ ಆಪರೇಟಿಂಗ್ ಸಿಸ್ಟಮ್ ಅನ್ನು (Android And iOS) ನೀವು ಇಚ್ಛಿಸುತ್ತೀರಿ ಎಂಬುದರ ಬಗ್ಗೆ ಮೊದಲು ನಿರ್ಣಯ ಕೈಗೊಳ್ಳಬೇಕಾಗುತ್ತದೆ. ನಿಮ್ಮ ಅವಶ್ಯಕತೆಗೆ ಅನುಸಾರವಾಗಿ ಆಪರೇಟಿಂಗ್ ಸಿಸ್ಟಮ್ (Operating System) ಯಾವುದಿರಬೇಕು ಎಂದು ತೀರ್ಮಾನ ಕೈಗೊಳ್ಳುವುದು ಒಳ್ಳೆಯದು. ಹೀಗಾಗಿ, ಸ್ಮಾರ್ಟ್ ಫೋನ್ ಖರೀದಿ ಮಾಡುವ ಮುನ್ನ ಮೇಲೆ ತಿಳಿಸಿದ ಐದು ವಿಷಯಗಳ ಬಗ್ಗೆ ಗಮನ ಹರಿಸುವುದು ಒಳ್ಳೆಯದು.
ಇದನ್ನು ಓದಿ : Pope Francis:’ಲೈಂಗಿಕತೆ’ ಎನ್ನುವುದು ದೇವರು ಮಾನವನಿಗೆ ನೀಡಿರುವ ಅದ್ಭುತ ಸಂಗತಿ- ಪೋಪ್ ಫ್ರಾನ್ಸಿಸ್
Thanks for sharing. I read many of your blog posts, cool, your blog is very good.