Tea Lover Country : ಚಹಾ ಕುಡಿಯೋದರಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ? ಮಾಹಿತಿ ಬಹಿರಂಗ!!

Tea Lover Country : ಒಂದು ಕಪ್ ಟೀ ಕುಡಿಯುವುದರಿಂದ ಮನಸ್ಸು ಮತ್ತು ದೇಹವು ಉಲ್ಲಾಸಗೊಳ್ಳುತ್ತದೆ. ಅದರಲ್ಲೂ ಚಳಿ ವಾತಾವರಣ, ಹಿಮ ಬೀಳುವಾಗ, ಮಳೆಗಾಲದಲ್ಲಿ ಒಂದೇ ಒಂದು ಕಪ್ ಚಹಾ ಕುಡಿದರೆ ಸಾಕು ಅಮೃತ ಕುಡಿದ ಖುಷಿ ಚಹಾ ಪ್ರಿಯರದ್ದಾಗಿರುತ್ತೆ (Tea Lover Country).ಇನ್ನು ಭಾರತದ ಜನಸಂಖ್ಯೆಯನ್ನು ಪರಿಗಣಿಸಿದರೆ ದೇಶದಲ್ಲಿ ಟೀ (Tea) ಕುಡಿಯುವವರ ಸಂಖ್ಯೆ ಹೆಚ್ಚು ಎಂದರೆ ತಪ್ಪಾಗಲಾರದು.

 

ಚಹಾ ಭಾರತೀಯರ ಹೃದಯದಲ್ಲಿದೆ. ಹೆಚ್ಚಿನ ಜನರು ಬೆಳಿಗ್ಗೆ ಚಹಾ ಸೇವಿಸದೆ ಹೊರಗೆ ಹೋಗುವುದಿಲ್ಲ. ಕೆಲವರಿಗೆ ಚಹಾವೇ ಆಹಾರ. ಇನ್ನು ಟೀ ಎಂದರೆ ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಎಲ್ಲರಿಗೂ ಇಷ್ಟ. ಹಲವು ವರ್ಷಗಳಿಂದ ಚಹಾ ಕುಡಿಯುತ್ತಿರುವ ನಮಗೆ ಪ್ರತಿಯೊಂದು ಮಾದರಿಯ ಚಹಾದ ಸ್ವಾದ ಚಿರಪರಿಚಿತವಾಗಿರುತ್ತದೆ.

ಆದರೆ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಇತರ ದೇಶಗಳಲ್ಲಿ ಚಹಾ ಪ್ರಿಯರಿಗೆ ಕೊರತೆಯಿಲ್ಲ. ಭಾರತಕ್ಕಿಂತ ಇತರ ದೇಶಗಳಲ್ಲಿ ಚಹಾವನ್ನು ಹೆಚ್ಚು ಸೇವಿಸಲಾಗುತ್ತದೆ.

ಸದ್ಯ ವರದಿಯ ಪ್ರಕಾರ, ಟರ್ಕಿಯ ಜನರು ಚಹಾ ಕುಡಿಯುವಲ್ಲಿ ಜಗತ್ತನ್ನು ಮುನ್ನಡೆಸುತ್ತಾರೆ. ಅಂದರೆ, ಅಷ್ಟೊಂದು ಜನರು ಚಹಾವನ್ನು ಇಲ್ಲಿ ಸೇವಿಸುತ್ತಾರಂತೆ.

10 ರಲ್ಲಿ ಒಂಬತ್ತು, ಅಥವಾ 90 ಪ್ರತಿಶತದಷ್ಟು, ಟರ್ಕಿಯಲ್ಲಿ ಚಹಾವನ್ನು ಕುಡಿಯುತ್ತಾರೆ. ಅಲ್ಲಿ ಚಳಿ ಜಾಸ್ತಿ ಇರೋದ್ರಿಂದ ಚಹಾವನ್ನು ಎಂದಿಗೂ ಕುಡಿಯುತ್ತಲೇ ಇರುತ್ತಾರೆ.

ಸದ್ಯ ಚಹಾ ಪ್ರಿಯರ ದೇಶಗಳಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. 72 ರಷ್ಟು ಭಾರತೀಯರು ಚಹಾವನ್ನು ಆನಂದಿಸುತ್ತಾರೆ. ಇನ್ನು ಕೀನ್ಯಾ ಚಹಾದ ಪ್ರಮುಖ ಉತ್ಪಾದಕ ಮತ್ತು ರಫ್ತುದಾರನಾಗಿದ್ದು, ದೇಶದ ಜನಸಂಖ್ಯೆಯ 83 ಪ್ರತಿಶತ ಜನರು ನಿಯಮಿತವಾಗಿ ಚಹಾವನ್ನು ಕುಡಿಯುತ್ತಾರೆ. ಎಂದು ತಿಳಿದು ಬಂದಿದೆ.

Leave A Reply

Your email address will not be published.