MLA Sanjeeva Matandoor : ಪುತ್ತೂರು : ಶಾಸಕ ಸಂಜೀವ ಮಠಂದೂರು ಅವರ ಮಾನಹಾನಿ,ಕ್ರಮಕೈಗೊಳ್ಳಲು ಶಾಸಕರ ಆಪ್ತ ಸಹಾಯಕರಿಂದ ದೂರು

MLA Sanjeeva Matandoor : ಪುತ್ತೂರು: ಶಾಸಕ ಸಂಜೀವ ಮಠಂದೂರು ಅವರನ್ನು ಹೋಲುವ ಫೊಟೋಗಳನ್ನು ಮಹಿಳೆಯ ಫೊಟೊದೊಂದಿಗೆ ಜೋಡಣೆ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಈ ಬಗ್ಗೆ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕರ ಆಪ್ತ ಸಹಾಯಕ ವಸಂತ್ ಎಸ್. ದೂರಿದ್ದಾರೆ.

 

ಹಲಸೂರು ಗೇಟ್ ಪೊಲೀಸ್ ಠಾಣೆಯ ಸೈಬರ್ ಕ್ರೈಮ್ ವಿಭಾಗಕ್ಕೆ ನೀಡಿರುವ ದೂರಿನಲ್ಲಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ( MLA Sanjeeva Matandoor) ಸಂಜೀವ ಮಠಂದೂರು ಅವರ ಫೊಟೋವನ್ನು ಮಹಿಳೆಯೊಬ್ಬರ ಫೊಟೋದೊಂದಿಗೆ ಎಡಿಟ್ ಮಾಡಿ, ಫೇಸ್‍ ಬುಕ್, ವಾಟ್ಸ್ ಆ್ಯಪ್ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ. ಶಾಸಕರ ಮಾನಹಾನಿ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೈಬರ್ ವಿಭಾಗದ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ

 

 

Leave A Reply

Your email address will not be published.