Husband and Wife: ಪತ್ನಿಗಿಂತ ಗಂಡ ಮೊದಲು ಸಾವನ್ನಪ್ಪುತ್ತಾನೆ ; ಕಾರಣ ಏನು ಗೊತ್ತಾ?
Husband and Wife: ಹೌದು, ಹೆಂಡತಿಗಿಂತ ಗಂಡನೇ (Husband and Wife) ಮೊದಲು ಸಾವನ್ನಪ್ಪೋದು (death). ಹಲವರು ಈ ಬಗ್ಗೆ ಯೋಚನೆ ಮಾಡಿರದಿದ್ದರೂ ಈ ಲೇಖನ ಕಂಡು ಚಿಂತಾಮಗ್ನರಾಗಿರುತ್ತಾರೆ. ಕೆಲವರು, ಗಂಡ ಹೆಂಡತಿಗಿಂತ ವಯಸ್ಸಿನಲ್ಲಿ ದೊಡ್ಡವರು ಹಾಗಾಗಿ ಬೇಗನೆ ಸಾವನ್ನಪ್ಪುತ್ತಾರೆ ಎಂದುಕೊಳ್ಳುತ್ತಾರೆ. ಆದರೆ, ಇಲ್ಲಿದೆ ಈ ಬಗ್ಗೆ ಕುತೂಹಲಕರ ರಹಸ್ಯ.
ಗಂಡನ ಆಯಸ್ಸು ಕಡಿಮೆ ಆಗೋದಿಕ್ಕೂ ಕೆಲವು ಕಾರಣಗಳಿವೆ. ಈ ಬಗ್ಗೆ ಹಿರಿಯರು ಏನು ಹೇಳುತ್ತಾರೆ ಗೊತ್ತಾ? ಹಿರಿಯರು ಹೇಳುವ ಪ್ರಕಾರ, ಒಂದು ಹೆಣ್ಣಿಗೆ ಅತ್ಯಂತ ಶೋಭೆ ತರುವ ಆಭರಣ ಅಂದರೆ ಅದು ಸೌಭಾಗ್ಯ. ಗಂಡನೇ ಹೆಂಡತಿಯ ಆಭರಣ, ಖುಷಿ, ಮುಖಕ್ಕೆ ಕಳೆ. ಆದರೆ, ಹೆಂಡತಿಯರು ಮಾಡುವ ಈ ತಪ್ಪು ಗಂಡಂದಿರ ಆಯಸ್ಸನ್ನು ಕಡಿಮೆ ಮಾಡುತ್ತದೆಯಂತೆ!!.
ಗಂಡ ಕಟ್ಟಿದ ಮಾಂಗಲ್ಯ ಹೆಂಡತಿಗೆ ಎಲ್ಲಾ ಆಭರಣಕ್ಕಿಂತ ಹೆಚ್ಚು. ಪತ್ನಿ ತಾಳಿಯೇ ಗಂಡನೆಂದು ಪೂಜಿಸುತ್ತಾಳೆ. ಆದರೆ, ಈ ತಾಳಿಯನ್ನು ಎಲ್ಲೆಂದರಲ್ಲಿ ಇಡಬಾರದು. ಇದನ್ನು ಕಡೆಗಣಿಸಿದರೆ ಗಂಡನ ಆಯಸ್ಸು ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.
ಇನ್ನು ಮದುವೆಯಾದ ಮಹಿಳೆಯರು ಕೈಗೆ ಬಳೆಗಳನ್ನು (bangle) ಹಾಕಿಕೊಳ್ಳೋದು ಸಾಮಾನ್ಯ. ಆದರೆ, ವಿವಾಹಿತರು ತಮ್ಮ ಬಳೆಗಳನ್ನು ಬೇರೆಯವರಿಗೆ ನೀಡಬಾರದು. ನೀಡಿದರೆ, ನಿಮ್ಮ ಗಂಡನ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಮದುವೆಯಾದವರು ಮುಖಕ್ಕೆ ಅರಿಶಿಣ, ಹಣೆಗೆ ಕುಂಕುಮ ಹಚ್ಚಿಕೊಳ್ಳುತ್ತಾರೆ. ಅಲ್ಲದೆ, ಅರಿಶಿಣ, ಕುಂಕುಮ ಶುಭಸಂಕೇತ. ಆದರೆ, ವಿವಾಹವಾದ ಮಹಿಳೆಯರು ಅರಿಶಿನ ಕುಂಕುಮವನ್ನು ಇಟ್ಟುಕೊಳ್ಳದೇ ಇದ್ದರೆ, ಇದರಿಂದ ಗಂಡನ ಆಯಸ್ಸು ಕಡಿಮೆ ಆಗುತ್ತೆ ಎನ್ನಲಾಗಿದೆ.
ಅದರಲ್ಲೂ ಬೇರೆಯವರ ಅರಸಿನ ಕುಂಕುಮವನ್ನು ನೀವು ಹಚ್ಚಿಕೊಳ್ಳಲೇಬಾರದು. ಇದು ತಪ್ಪು, ಹೀಗೆ ಮಾಡಿದರೆ, ಆಕೆ ಗಂಡನಿಂದ (Husband) ದೂರಾಗುತ್ತಾಳೆ. ಆಕೆಯ ಗಂಡನ ಆಯಸ್ಸು ಕಡಿಮೆಯಾಗುತ್ತದೆ ಅಂತ ಪೂರ್ವಜರು ಹೇಳಿದ್ದಾರೆ.