Home Remedies for Stomach and Diarrhea : ವಾಂತಿ ಭೇದಿ ಆಗುತ್ತಿದ್ದರೆ, ಈ ಮನೆಮದ್ದು ಮಾಡಿ!

Home Remedies For Diarrhea : ನಾವು ದಿನನಿತ್ಯ ತಿನ್ನುವ ಆಹಾರದಲ್ಲಿ ವ್ಯತ್ಯಾಸವಾಗಿ, ಅಜೀರ್ಣವಾಗಿ ವಾಂತಿ ಮತ್ತು ಭೇದಿ ಸಮಸ್ಯೆಗಳು ಆಗಾಗ ಬರಬಹುದು. ಇದಕ್ಕೆಲ್ಲಾ ಮುಖ್ಯವಾದ ಕಾರಣ ನಮ್ಮ ಅನಾರೋಗ್ಯಕರ ಜೀವನಶೈಲಿ ಆಗಿದೆ.

 

ಮುಖ್ಯವಾಗಿ ಹೊಟ್ಟೆಗೆ ಸಂಬಂಧಪಟ್ಟಂತೆ (Home Remedies For Diarrhea)ಯಾವುದೇ ಆರೋಗ್ಯ ಸಮಸ್ಯೆಗಳು ಬರಬಾರದೆಂದರೆ ಸೇವಿಸಿದ ಆಹಾರ ಪದಾರ್ಥಗಳು ಸರಿಯಾಗಿ ಜೀರ್ಣವಾಗಬೇಕು, ಮೆಟಬಾಲಿಸಂ ಪ್ರಕ್ರಿಯೆ, ಮಲವಿಸರ್ಜನೆ ಎಲ್ಲವೂ, ಕೂಡ ಸಮಯ ಕ್ಕೆ ಸರಿಯಾಗಿ ತಕ್ಕಂತೆ ನಡೆಯಬೇಕು. ಇವೆಲ್ಲವೂ ಕೂಡ ಸರಿಯಾಗಿ ನಡೆಯಬೇಕಿದ್ದಲ್ಲಿ , ನಮ್ಮ ದೈನಂದಿನ ಆಹಾರ ಪದ್ಧತಿ ಹಾಗೂ ಜೀವನಶೈಲಿ ಅಷ್ಟೇ ಆರೋಗ್ಯದಿಂದ, ಕೂಡಿರಬೇಕು ಎಂದು ತಜ್ಞರು ತಿಳಿಸುತ್ತಾರೆ.

ಇಂದಿನ ಜನರು ಅನುಸರಿಸುತ್ತಿರುವ ಅನಾರೋಗ್ಯಕಾರಿ ಆಹಾರ ಪದ್ಧತಿಯಿಂದಾಗಿ, ಅನೇಕ ರೀತಿಯಲ್ಲಿ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳು ಕಾಡಲು, ಶುರುವಾಗುತ್ತಿದೆ. ಮೊದಲಿಗೆ ಜೀರ್ಣಪ್ರಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಗಳು ಕಂಡುಬಂದು ಕೊನೆಗೆ ಇದೇ ಕಾರಣದಿಂದಾಗಿ ಅಜೀರ್ಣ ಹಾಗೂ ಮಲಬದ್ಧತೆ ಸಮಸ್ಯೆಗಳು ಕಂಡು ಬಂದು, ವಾಂತಿ-ಭೇದಿ ಶುರುವಾಗುತ್ತದೆ. ಇಂತಹ ಸಮಸ್ಯೆ ಕಂಡು ಬಂದರೆ, ಡಾಕ್ಟರ್ ಬಳಿ ಓಡುವ ಮೊದಲು ಈ ಕೆಳಗಿನ ನೈಸರ್ಗಿಕ ಮನೆಮದ್ದು ಮಾಡಿ ಪರಿಹಾರ ಕಂಡು ಕೊಳ್ಳಬಹುದು.

ಪುನರ್ಪುಳಿ ಹಣ್ಣಿನ  ಸಿಪ್ಪೆ, ತಿರುಳು, ಇದರ ಜ್ಯೂಸ್, ಇವೆಲ್ಲದ ರಲ್ಲೂ ಕೂಡ ಒಂದೊಂದು ಬಗೆಯ ಔಷಧೀಯ ಗುಣಗಳು ಕಂಡು ಬರುತ್ತದೆ. ಒಂದು ವೇಳೆ ಹೊಟ್ಟೆ ಕೆಟ್ಟು ಹೋಗಿ ಭೇದಿಯಂತಹ ಸಮಸ್ಯೆ ಎದುರಾದರೆ, ಎರಡು ಟೇಬಲ್ ಚಮಚದಷ್ಟು ಪುನರ್ಪುಳಿ ರಸಕ್ಕೆ, ಒಂದು ಲೋಟ ನೀರಿನಲ್ಲಿ ಮಿಶ್ರಣ ಮಾಡಿ ಅದಕ್ಕೆ ಚಿಟಿಕೆಯಷ್ಟು ಉಪ್ಪು ಹಾಗೂ ರುಚಿಗೆ ತಕ್ಕಷ್ಟು ಸಕ್ಕರೆಯನ್ನು ಹಾಕಿ ಕೊಂಡು ಕುಡಿಯಿರಿ

ಇದರ ಹೊರತು ಒಂದು ಲೋಟ ನೀರಿಗೆ, ಸಣ್ಣ ಟೀ ಚಮಚ ದಷ್ಟು ಉಪ್ಪು ಹಾಗೂ ಇಷ್ಟೇ ಪ್ರಮಾಣದಲ್ಲಿ ಸಕ್ಕರೆಯನ್ನು ಮಿಶ್ರಿಣ ಮಾಡಿ ಕುಡಿದರೆ, ಸಮಸ್ಯೆಗೆ ಬಹಳ ಬೇಗನೇ ಪರಿಹಾರ ಸಿಗುತ್ತದೆ. ಇದಕ್ಕೆ ಮುಖ್ಯ ಕಾರಣ ಈ ಪಾನೀಯದಲ್ಲಿ ಎಲೆಕ್ಟ್ರೋ ಲೈಟ್ ಅಂಶಗಳು ಕಂಡು ಬರುವುದರಿಂದ, ದೇಹಕ್ಕೆ ಎದುರಾಗಿ ರುವ ಸುಸ್ತು ಮತ್ತು ಆಯಾಸವನ್ನು ದೂರ ಮಾಡಿ, ವಾಂತಿ-ಭೇದಿ ಸಮಸ್ಯೆಯನ್ನು ದೂರ ಮಾಡುತ್ತದೆ.

ಇನ್ನು ​ಮಲಬದ್ಧತೆ ಅಜೀರ್ಣತೆ ಮತ್ತು ಇತರ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಯಲು ಮಜ್ಜಿಗೆ ಒಳ್ಳೆಯ ಮನೆಮದ್ದು. ಪ್ರಮುಖವಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬಂದರೆ, ​ಒಂದು ಲೋಟ ಮಜ್ಜಿಗೆಗೆ ಚಿಟಿಕೆಯಷ್ಟು ಉಪ್ಪನ್ನು ಬೆರೆಸಿ ಕುಡಿಯುವುದರಿಂದ ಕರುಳಿನ ಚಲನೆಗೆ ಅನುಕೂಲ ವಾಗುತ್ತದೆ, ಹಾಗೂ ಇಂತಹ ಸಮಸ್ಯೆಯನ್ನು ಬಹಳ ಬೇಗನೇ ನಿವಾರಣೆ ಯಾಗುತ್ತದೆ.

ಅದಲ್ಲದೆ ಹಿಂದಿನ ಕಾಲದಿಂದಲೂ ಎಳನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಎಳನೀರಿನ ಪಾನೀಯದಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ಖನಿಜಾಂಶಗಳಿದ್ದು, ಇದು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು.

ಇದರಲ್ಲಿ ಕಂಡು ಬರುವ ಎಲೆಕ್ಟ್ರೋಲೈಟ್ ಅಂಶಗಳು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡುವಲ್ಲಿ ಹಾಗೂ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಎಳನೀರು ಪ್ರಮುಖ ಪಾತ್ರ ವಹಿಸುತ್ತದೆ. ಒಂದು ವೇಳೆ, ಅಜೀರ್ಣವಾಗಿ ಲೂಸ್ ಮೋಷನ್ ಸಮಸ್ಯೆ ಕಂಡು ಬಂದರೆ, ಪ್ರತಿ ದಿನ ಒಂದೊಂದು ಎಳನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ಇನ್ನು ಶುಂಠಿಯನ್ನು ಪ್ರತಿ ಮನೆಯಲ್ಲೂ ಬಳಸಲಾಗುತ್ತದೆ. ವಾಕರಿಕೆ, ವಾಂತಿ ಮತ್ತು ಇತರ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ಮನೆಮದ್ದು. ನೀವು ತಾಜಾ ಶುಂಠಿಯ ಸಣ್ಣ ತುಂಡನ್ನು ಅಗಿಯಬಹುದು ಅಥವಾ ಅಡುಗೆಯಲ್ಲಿ ಬಳಸಬಹುದು ಅಥವಾ ಶುಂಠಿ ಚಹಾವನ್ನು ಕುಡಿಯಬಹುದು.

ಅದಲ್ಲದೆ ಒಂದು ಕಪ್ ನೀರಿನಲ್ಲಿ 2 ಪುದೀನಾ ಎಲೆಗಳನ್ನು ಹಾಕಿ ಚನ್ನಾಗಿ ಕುದಿಸಿ, ನಂತರ ಅದಕ್ಕೆ ನಿಂಬೆ ರಸ ಮತ್ತು ಉಪ್ಪು ಹಾಕಿ ಕುಡಿದರೆ ವಾಂತಿ ನಿಲ್ಲುತ್ತದೆ.

ಇನ್ನೊಂದು ಪರಿಹಾರವೆಂದರೆ, ನೀರನ್ನು ಚೆನ್ನಾಗಿ ಕುದಿಸಿ, ಇದಕ್ಕೆ ಅರ್ಧ ಟೀ ಚಮಚ ಆಗುವಷ್ಟು ಸೋಂಪು ಕಾಳುಗಳನ್ನು ಹಾಕಿ, ಮತ್ತೆ ಕುದಿಯಲು ಬಿಡಿ, ಅದನ್ನು ದಿನಕ್ಕೆ 3 ಬಾರಿ ಕುಡಿದರೆ ಸಾಕು ನಿಮ್ಮ ವಾಂತಿ ಮತ್ತು ವಾಕರಿಕೆ ಕಡಿಮೆಯಾಗುತ್ತದೆ.

ಇನ್ನು ಏಲಕ್ಕಿಯನ್ನು ಜಗಿಯುವುದು ವಾಕರಿಕೆ ಮತ್ತು ವಾಂತಿಗೆ ಚಿಕಿತ್ಸೆ ನೀಡಲು ಮತ್ತೊಂದು ಸಾಮಾನ್ಯ ಮತ್ತು ಪರಿಣಾಮಕಾರಿ ಆಯುರ್ವೇದ ಪರಿಹಾರವಾಗಿದೆ. ಎರಡು ಏಲಕ್ಕಿ ಕಾಳುಗಳನ್ನು ಬಾಯಿಯಲ್ಲಿ ತೆಗೆದುಕೊಂಡು ನಿಧಾನವಾಗಿ ಅಗಿಯಿರಿ. ಇದು ವಾಂತಿ ಕಡಿಮೆಗೊಳಿಸಲು ಸಹಾಯ ಮಾಡುತ್ತದೆ.

ಈ ರೀತಿಯಾಗಿ ನೈಸರ್ಗಿಕ ಮನೆಮದ್ದು ಮೂಲಕ ಹೊಟ್ಟೆಗೆ ಸಂಬಂಧಿಸಿದಂತೆ, ಅಜೀರ್ಣ, ವಾಕರಿಕೆ, ಭೇದಿಗೆ ಪರಿಹಾರ ಕಂಡುಕೊಳ್ಳಬಹುದು.

ಇದನ್ನೂ ಓದಿ: Hanuman Jayanti: ಹನುಮಾನ್​ ಜಯಂತಿಗಾಗಿ ಮಾಡಿ ಈ ಸೂಪರ್​ ಪಾಯಸ! ಸಖತ್​ ಈಸಿ , ಟೇಸ್ಟಿ ಕೂಡ

Leave A Reply

Your email address will not be published.