Harley-Davidson Bike: ಶೀಘ್ರ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ನೀಡಲಿದೆ ಹಾರ್ಲೆ ಡೇವಿಡ್ಸನ್ ಬೈಕ್!!
Harley-Davidson Bike : ಬೈಕ್ (bike) ಪ್ರಿಯರು ಯಾರಿಲ್ಲ ಹೇಳಿ. ಎಲ್ಲಾರಿಗೂ ಸಿಕ್ಕಾಪಟ್ಟೆ ಇಷ್ಟ. ಅದ್ರಲ್ಲಿ ಹೈ ಸ್ಪೀಡ್ ಅಲ್ಲಿ ರೈಡ್ ಹೋಗೋದೇ ಒಂದು ಕ್ರೇಜ್. ಸದ್ಯ ಮಾರುಕಟ್ಟೆಗೆ ಒಂದಲ್ಲ ಒಂದು ಬೈಕ್ ಬಿಡುಗಡೆ ಆಗುತ್ತಲೇ ಇದೆ. ಅಂತೆಯೇ ಇದೀಗ ಹಾರ್ಲೆ ಡೇವಿಡ್ಸನ್ ಬೈಕ್ (Harley-Davidson Bike) ಜನರನ್ನು ಸೆಳೆಯಲು ಸಜ್ಜಾಗಿ ನಿಂತಿದೆ.
Hero MotoCorp ಕಂಪನಿ ಮುಂಬರುವ ಮೇಡ್ ಇನ್ ಇಂಡಿಯಾ ಹಾರ್ಲೆ ಡೇವಿಲ್ಸನ್ ಬೈಕಿನ ಫೋಟೋಗಳನ್ನು (Harley-Davidson Bike photo) ಹಂಚಿಕೊಂಡಿದ್ದು, ಗ್ರಾಹಕರಿಗೆ ಕೈಗೆಟುಕುವ ಬೆಲೆಯೊಂದಿಗೆ ಈ ಬೈಕ್ ಬಿಡುಗಡೆಯಾಗಲಿದೆ.
ಹಾರ್ಲೆ ಡೇವಿಲ್ಸನ್ ಬೈಕ್ ಅನ್ನು Hero MotoCorp ಸಹಯೋಗದೊಂದಿಗೆ ತಯಾರಿಸಲಾಗುತ್ತದೆ. ಈ ಬೈಕ್ ಅನ್ನು ಮಿಲ್ವಾಕೀಯಲ್ಲಿರುವ ಮಾಜಿ ಪ್ರಧಾನ ಕಛೇರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಭಾರತದಲ್ಲಿ ತಯಾರಿಸಿದ ಹಾರ್ಲೆ-ಡೇವಿಡ್‌ಸನ್ ಮೋಟಾರ್‌ಸೈಕಲ್ ಉತ್ಪಾದನೆಗೆ ಸಿದ್ಧವಾಗಿದೆ ಮತ್ತು ಮಾದರಿಯನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಬಹುದು ಎನ್ನಲಾಗಿದೆ.
ಮುಂಬರುವ ಮೇಡ್ ಇನ್ ಇಂಡಿಯಾ ಹಾರ್ಲೆ ಡೇವಿಡ್‌ಸನ್ ಮೋಟಾಸೈಕಲ್ ತನ್ನ ಮಸ್ಕಲ ಪ್ಯೂಯಲ್ ಟ್ಯಾಂಕ್ ಮತ್ತು ಹೆಡ್‌ಲೈಟ್‌ಗಳು, ಟರ್ನ್ ಇಂಡಿಕೇಟರ್‌ಗಳು ಮತ್ತು ಇನ್‌ಸ್ಟುಮೆಂಟ್ ಕ್ಲಸ್ಟರ್‌ನಂತಹ ಸುತ್ತಿನ ಅಂಶಗಳೊಂದಿಗೆ ಸಾಕಷ್ಟು ಆಕರ್ಷಕವಾಗಿ ಕಾಣುವ ನಿಯೋ ರೆಟ್ರೋ ಬೈಕ್ ರೀತಿಯಲ್ಲಿ ಕಾಣುತ್ತದೆ.
ಈ ಬೈಕ್ ನ ನಂಬರ್ ಪ್ಲೇಟ್ ನಲ್ಲಿ “HD 4XX” ಎಂದು ಬರೆಯಲಾಗಿದ್ದು, ಅಂದ್ರೆ, ಈ ಬೈಕ್ 400+cc, ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್ ಎಂಜಿನ್ ಅನ್ನು ಒಳಗೊಂಡಿರುತ್ತದೆ. ಈ ಎಂಜಿನ್ E ಉತ್ತಮ ಲೋ-ಮಟ್ಟದ ಟಾರ್ಕ್ ಮತ್ತು ಥಂಪಿ ಎಕ್ಸಾಸ್ಟ್ ನೋಟ್ ಅನ್ನು ಹೊಂದಿರಲಿದೆ.
ಈ ಬೈಕ್ ನ ಮುಂಭಾಗದಲ್ಲಿ USD ಫೋರ್ಕ್‌ಗಳು ಮತ್ತು ಹಿಂಬಾಗದಲ್ಲಿ ಟ್ವಿನ್ ಗ್ಯಾಸ್-ಚಾರ್ಜ್ ಶಾಕ್ ಅಬ್ಬಾರ್ಬ‌್ರಗಳನ್ನು ಹೊಂದಿದ್ದು, LED DRL ಜೊತೆಗೆ LED ಹೆಡ್‌ಲೈಟ್‌ಗಳು, ವೃತ್ತಾಕಾರದ TFT ನಂತಹ ಫೀಚರ್ಸ್ ಗಳೊಂದಿಗೆ ಬರುತ್ತದೆ.
ಸುರಕ್ಷತಾ ದೃಷ್ಟಿಯಿಂದ, ಮುಂಬಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್ ಗಳನ್ನು ಹೊಂದಿವೆ. ಬ್ಲೂಟೂತ್ ಕನೆಕ್ಟಿವಿಟಿ, ರೈಡರ್ ಮೋಡ್‌ಗಳು ಮತ್ತು ಟೆಲಿಮೆಟ್ರಿ ಡೇಟಾದಂತಹ ಫೀಚರ್ಸ್ ಗಳೊಂದಿಗೆ ಬರಲಿದೆ. ಹಾಗೇ ಈ ಬೈಕ್ 18 ಇಂಚಿನ ಮುಂಭಾಗದ ಟೈಲ್ ಮತ್ತು ಚಿಕ್ಕದಾದ 17-ಇಂಚಿನ ಹಿಂಭಾಗದ ಟೈರ್‌ನೊಂದಿಗೆ ಬರಲಿದೆ ಎನ್ನಲಾಗಿದೆ.
ಸದ್ಯ ಕಂಪನಿ ವತಿಯಿಂದ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ, ಮುಂಬರಲಿರುವ ಹೊಸ ಹಾರ್ಲೆ-ಡೇವಿಡ್ರನ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮತ್ತು ಹೋಂಡಾ CB350RS, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಜಾವಾ, ಹೋಂಡಾ ಎಚ್ ನೆಸ್, ಟಿವಿಎಸ್ ರೋನಿನ್, ಬಿಎಂಡಬ್ಲ್ಯೂ ಜಿ310ಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ ಎನ್ನಲಾಗಿದೆ.
ಇದನ್ನು ಓದಿ : Karnataka Polls: ಚುನಾವಣಾ ನೀತಿ ಸಂಹಿತೆ : ಎಷ್ಟು ಹಣ, ಉಡುಗೊರೆ ಒಯ್ಯಬಹುದು?