Karnataka-Maharashtra border dispute: ಅಮಿತ್ ಶಾ ಸೂಚನೆಯನ್ನೇ ತಿರಸ್ಕರಿಸಿದ ಏಕನಾಥ್ ಶಿಂಧೆ! ಮಹಾರಾಷ್ಟ್ರದಲ್ಲಾಗುತ್ತಾ ಮತ್ತೊಂದು ರಾಜಕೀಯ ಬದಲಾವಣೆ!

Karnataka-Maharashtra border dispute : ಕರ್ನಾಟಕ-ಮಹಾರಾಷ್ಟ್ರ(Karnataka-Maharastra)ಗಡಿವಿವಾದ ಮುಗಿಯದ ಕಥೆಯಾಗಿ ಮುಂದುವರೆಯುತ್ತಲೇ ಇದೆ. ಈ ನಡುವೆ ಇದರ ಸಲುವಾಗಿ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ(Maharastra CM Ekanath Shinde) ಸ್ವತಃ ಉದ್ಧಟತನ ತೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾ(Amith Sha) ನೀಡಿದ ಸೂಚನೆಯನ್ನೇ ಧಿಕ್ಕರಿಸಿಬಿಟ್ಟಿದ್ದಾರೆ. ಇದರಿಂದ ಮಹಾರಾಷ್ಟ್ರದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಬೆಳವಣಿಗೆ ಆಗುತ್ತದೆಯೋ ಎಂಬ ಗುಮಾನಿ ಮೂಡಿದೆ.

 

ಹೌದು, ಮಹಾರಾಷ್ಟ್ರ-ಕರ್ನಾಟಕ ಗಡಿ ಮುಗಿಯದ ಕಥೆಯಾಗಿ ಮುಂದುವರಿಯುತ್ತಲೇ ಇದೆ. ಅಂದಹಾಗೆ ಇದರ ಮಧ್ಯಸ್ಥಿಕೆ ವಹಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 19 ವರ್ಷಗಳಿಂದ ಸುಪ್ರೀಂಕೋರ್ಟ್ (Supreme Court) ನಲ್ಲಿರುವ ಕರ್ನಾಟಕ-ಮಹಾರಾಷ್ಟ್ರ ಗಡಿ (Karnataka-Maharashtra border dispute) ವಿವಾದ ಇತ್ಯರ್ಥವಾಗುವವರೆಗೆ ಕೆಣಕದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದರು. ಆದರೆ ಇದೀಗ ಅವರ ಮಾತನ್ನೇ ಮಹಾರಾಷ್ಟ್ರ ಸಿಎಂ ಧಿಕ್ಕರಿಸಿದ್ದಾರೆ

ಅಮಿತ್ ಶಾ ಮಾತಿಗೆ ಒಪ್ಪಿ ಕರ್ನಾಟಕ ಸರ್ಕಾರ ಸುಮ್ಮನಿದ್ದರೂ ಮಹಾರಾಷ್ಟ್ರದಿಂದ ಪ್ರಚೋದನಾತ್ಮಕ ನಿರ್ಣಯ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಇದೀಗ ಆರೋಗ್ಯ ವಿಮೆಯ ತಂತ್ರ ಹೂಡಿದೆ. ಮಹಾರಾಷ್ಟ್ರ ಗಡಿ ಭಾಗದ ಕರ್ನಾಟಕದ ಗ್ರಾಮಗಳಲ್ಲಿ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಮಾಡಿಸ್ತಿದೆ. ಈ ಭಾಗದ ಜನರನ್ನು ಮರಾಠಿಗರು ಎಂದು ಬಿಂಬಿಸಲು ಹೊರಟಿದೆ. ಈ ಮೂಲಕ ಅಮಿತ್ ಶಾ ಸೂಚನೆಗೆ ಡೋಂಟ್ ಕೇರ್ ಎಂದಿರುವ ಶಿವಸೇನೆ – ಬಿಜೆಪಿ ಮೈತ್ರಿ ಸರ್ಕಾರ, ಕರ್ನಾಟಕದಲ್ಲಿ ಎಲೆಕ್ಷನ್ ಹೊತ್ತಲ್ಲಿ ಗಡಿ ಗುದ್ದಾಟಕ್ಕೆ ಮುಂದಾಗಿದೆ.

ಏನಿದು ಮಹಾರಾಷ್ಟ್ರ ಆರೋಗ್ಯ ವಿಮೆ?: ಮಹಾರಾಷ್ಟ್ರ ರಾಜ್ಯದಲ್ಲಿ ಮಹಾತ್ಮ ಜ್ಯೋತಿರಾವ್ ಪುಲೆ ಆರೋಗ್ಯ ವಿಮಾ ಯೋಜನೆ ಜಾರಿಯಲ್ಲಿದೆ. ಈ ವಿಮೆ ಮಾಡಿಸಿಕೊಂಡರೆ ಕುಟುಂಬದ ಪ್ರತಿಯೊಬ್ಬರಿಗೂ ತಲಾ ಒಂದೂವರೆ ಲಕ್ಷ ರೂ. ಆರೋಗ್ಯ ವಿಮೆ ಸೌಲಭ್ಯ ಸಿಗುತ್ತೆ. ಈ ಯೋಜನೆಯ ಫಲಾನುಭವಿಗಳು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಮಹಾರಾಷ್ಟ್ರ ಮಾತ್ರವಲ್ಲ, ಕರ್ನಾಟಕದ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ. ಒಟ್ಟು 996 ಕಾಯಿಲೆಗಳಿಗೆ ಈ ಯೋಜನೆ ಅಡಿ ಚಿಕಿತ್ಸೆ ಪಡೆಯಬಹುದು. ಮಹಾರಾಷ್ಟ್ರ ಸರ್ಕಾರವು ಈ ಯೋಜನೆಯನ್ನ ಕರ್ನಾಟಕಕ್ಕೂ ವಿಸ್ತರಣೆ ಮಾಡಿದೆ. ಕರ್ನಾಟಕದ 12 ತಾಲ್ಲೂಕುಗಳ 865 ಗ್ರಾಮಗಳಿಗೆ ಈ ಯೋಜನೆಯನ್ನ ಶಿಂಧೆ ಸರ್ಕಾರ ನೀಡೋಕೆ ಹೊರಟಿದೆ. ಬೆಳಗಾವಿ, ಬೀದರ್, ಕಲಬುರ್ಗಿ, ಉತ್ತರ ಕನ್ನಡ ಜಿಲ್ಲೆ ಗಡಿ ಭಾಗದ ಜನರಿಗೆ ಈ ಯೋಜನೆಯ ಲಾಭ ನೀಡೋಕೆ ಮಹಾರಾಷ್ಟ್ರ ಸರ್ಕಾರ ತೀರ್ಮಾನ ಮಾಡಿದೆ.

ಇದನ್ನೂ ಓದಿ: A policeman’s love story : ವಿಧವೆ ಪಾಲಿಗೆ ರಾಕ್ಷಸನಾದ ಆರಕ್ಷಕ! ಮದುವೆಯಾಗೋದಾಗಿ ನಂಬಿಸಿ ಮಾಡಿಸಿದ 3 ಬಾರಿ ಗರ್ಭಪಾತ!

Leave A Reply

Your email address will not be published.