Men’s Brain are Larger than women: ಪುರುಷರ ಮೆದುಳು ಮಹಿಳೆಯರ ಮೆದುಳಿಗಿಂತ ದೊಡ್ಡದು : ಯಾಕೆ ತಿಳಿದಿದೆಯೇ?

Men’s Brain Larger than women: ಮೆದುಳು (Brain) ನಮ್ಮ ದೇಹದ (Body) ಅತ್ಯಂತ ಮುಖ್ಯವಾದ ಭಾಗ (Main Part). ದೇಹದ ಅತ್ಯಂತ ಶಕ್ತಿಶಾಲಿ ಭಾಗವೆಂದು ಮೆದುಳನ್ನು ಪರಿಗಣಿಸಲಾಗುತ್ತದೆ. ಹೆಚ್ಚಿನ ಜನರು (People) ಮೆದುಳಿನ ಆರೋಗ್ಯ ಕಾಪಾಡುವತ್ತ ಹೆಚ್ಚಿನ ಕಾಳಜಿ (Care) ಮಾಡುವುದಿಲ್ಲ. ಆದರೆ, ಮಹಿಳೆಯರಿಗೆ ಹೋಲಿಕೆ ಮಾಡಿದರೆ, ಪುರುಷರ ಮೆದುಳು (Brain) ದೊಡ್ಡದಾಗಿರುತ್ತದೆ(Men’s Brain Larger than women) ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ. ಸದ್ಯ ಈ ವಿಚಾರವನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯದವರು ಕಂಡುಕೊಂಡಿದ್ದಾರೆ.

ಕೆಂಬ್ರಿಡ್ಜ್ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯಗಳ (Cambridge and Oxford University) ಸಂಶೋಧಕರು MRI ಯಂತಹ ಪರೀಕ್ಷೆಗಳನ್ನು ಬಳಸಿಕೊಂಡು ಮಹಿಳೆಯರು ಮತ್ತು ಪುರುಷರ ಮೆದುಳಿನ ಗಾತ್ರವನ್ನು ಹೋಲಿಕೆ ಮಾಡಿದ್ದಾರೆ. ಅದೇ ರೀತಿ, ಪುರುಷರ ಮೆದುಳು ಮಹಿಳೆಯರಿಗಿಂತ 8 ರಿಂದ 13 ಪ್ರತಿಶತದಷ್ಟು ದೊಡ್ಡದಾಗಿದೆ ಎಂದು ಸಂಶೋಧಕರು ವರದಿ ಅನುಸಾರ ಕಂಡು ಕೊಂಡಿದ್ದಾರೆ. ಮಹಿಳೆಯರ ಇನ್ಸುಲರ್ ಕಾರ್ಟೆಕ್ಸ್ ಪುರುಷರಿಗಿಂತ ದೊಡ್ಡದಾಗಿದೆ ಎಂದು ಅಧ್ಯಯನವು ಪತ್ತೆಮಾಡಿದೆ. ಮೆದುಳಿನ ಈ ಭಾಗವು ಭಾವನೆಗಳು, ವರ್ತನೆಗಳು, ತಾರ್ಕಿಕತೆ ಮತ್ತು ಸ್ವಯಂ-ಅರಿವುಗಳೊಂದಿಗೆ ಸಂಬಂಧ ಹೊಂದಿದ್ದು ಹೀಗಾಗಿ, ಮಹಿಳೆಯರು ಹೆಚ್ಚು ಭಾವನಾತ್ಮಕವಾಗಿರಲು ಕಾರಣವಾಗುವ ಸಂಭವಗಳಿವೆ.

ಪುರುಷರ ಅಮಿಗ್ಡಾಲಾಗಳು ದೊಡ್ಡದಾಗಿರುತ್ತವೆ. ಮೆದುಳಿನ ಈ ಭಾಗವು ಚಲನಾ ಕೌಶಲ್ಯಗಳು ಮತ್ತು ಬದುಕುಳಿಯುವ-ಆಧಾರಿತ ಭಾವನೆಗಳಿಗೆ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. ಈ ಕಾರಣದಿಂದಾಗಿ, ಪುರುಷರ ಆನಂದಿಸುವ ಸಾಮರ್ಥ್ಯ, ದೈಹಿಕ ಚಟುವಟಿಕೆ, ಕಲಿಕೆ ಮತ್ತು ನೆನಪಿಟ್ಟುಕೊಳ್ಳುವ ಸಾಮರ್ಥ್ಯವು ಉತ್ತಮವಾಗಿದೆ. ನಾರ್ತ್ ವೆಸ್ಟರ್ನ್ ಮೆಡಿಸಿನ್ ಅನುಸಾರ, ಮಹಿಳೆಯರು ಖಿನ್ನತೆ, ಅಲ್ಝೈಮರ್ಸ್, ಮಲ್ಟಿಪಲ್ ಸ್ಕ್ಲೆರೋಸಿಸ್ ಮತ್ತು ಪಾರ್ಶ್ವವಾಯುವಿಗೆ ಒಳಗಾಗುವ ಹೆಚ್ಚಿನ ಆತಂಕ ಸೃಷ್ಟಿಯಾಗುತ್ತದೆ. ಈ ರೋಗಗಳ ಬಗ್ಗೆ ಮಹಿಳೆಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.

ಪುರುಷರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗಿದ್ದು, ಆಲ್ಕೊಹಾಲ್ (Alchohol), ಅಸ್ವಸ್ಥತೆ, ಆಟಿಸಂ ಮತ್ತು ಪಾರ್ಕಿನ್ಸನ್ ಅನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯ ಉಂಟು ಮಾಡುತ್ತದೆ. ಪುರುಷರು ಮತ್ತು ಮಹಿಳೆಯರ ನಡುವಿನ ಮೆದುಳಿನ ಗಾತ್ರದಲ್ಲಿನ ವ್ಯತ್ಯಾಸಕ್ಕೆ ದೈಹಿಕ ರಚನೆಯು ಕಾರಣವಾಗಿದೆ ಎಂದು ಅಧ್ಯಯನ ಮಾಹಿತಿ ನೀಡಿದೆ. ಸಾಮಾನ್ಯವಾಗಿ ಪುರುಷರು ಮಹಿಳೆಯರಿಗಿಂತ ಎತ್ತರವಿರುವುದು ಕೂಡ  ಮೆದುಳಿನ ಗಾತ್ರವೂ ಪರಿಣಾಮ ಬೀರುತ್ತದೆ. ಈ ವ್ಯತ್ಯಾಸವು ಬುದ್ಧಿಮತ್ತೆಯ ಮೇಲೆ ಯಾವುದೇ ಪರಿಣಾಮ ಬೀರುವುದನ್ನು ಗಮನಿಸಲಾಗಿಲ್ಲ.

 

ಇದನ್ನು ಓದಿ : Best Food For Sleep : ಈ ಆಹಾರಗಳು ನಿಮ್ಮ ರಾತ್ರಿಯ ನಿದ್ದೆ ಕೆಡಿಸಲು ಕಾರಣವಾಗುತ್ತೆ!!

Leave A Reply

Your email address will not be published.