Airtel Recharge Plans : ಹೊಸ ರೀಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ ಏರ್ಟೆಲ್!!

Airtel Recharge Plans : ಜಿಯೋ (jio ) ದೇಶದ ಅತಿದೊಡ್ಡ ಟೆಲಿಕಾಂ ಕಂಪೆನಿಯಾಗಿ (telecom company) ಹೊರಹೊಮ್ಮಿದ ನಂತರ ಇತ್ತ ಏರ್‌ಟೆಲ್ (Airtel) ಕೂಡ ವಿಭಿನ್ನ ಪ್ರಯೋಜನಗಳ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದು, ಇದೀಗ ಬೆಂಗಳೂರು (bengaluru) ಸೇರಿದಂತೆ ಭಾರತದ ಹಲವಾರು ನಗರಗಳಲ್ಲಿ 5G ಸೇವೆಗಳನ್ನು ಆರಂಭಿಸಿರುವ ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಸಂಸ್ಥೆ ‘ಏರ್‌ಟೆಲ್’ ಆಗಿದೆ. ಇದರ ಜೊತೆಗೆ ಇದೀಗ ಗ್ರಾಹಕರಿಗೆ ಹಲವು ಉತ್ತಮ ರೀಚಾರ್ಜ್ (recharge) ಯೋಜನೆಯನ್ನು ಬಿಡುಗಡೆ ಮಾಡುತ್ತಿದೆ (Airtel Recharge Plans). ಸದ್ಯ ಏರ್‌ಟೆಲ್‌ ಮತ್ತೆ ಹೊಸ ಅಗ್ಗದ ಪ್ಲ್ಯಾನ್​ ಬಿಡುಗಡೆ ಮಾಡಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ರೂ.1,799 ರೀಚಾರ್ಜ್ ಪ್ಲ್ಯಾನ್ :

ಈ ರೀಚಾರ್ಜ್ ಪ್ಲ್ಯಾನ್ ಒಂದು ವರ್ಷ ಅಂದರೆ 365 ದಿನಗಳ

ಅವಧಿಯದ್ದಾಗಿದೆ. ಈ ಯೋಜನೆಯಲ್ಲಿ ಡೇಟಾ, ಕರೆಗಳು ಮತ್ತು ಪ್ರತಿದಿನ 100 SMS ವರೆಗೆ ಕಳುಹಿಸಬಹುದು. ಇದಲ್ಲದೆ, ಸ್ಥಳೀಯ, ಎಸ್​​ಟಿಡಿ ಮತ್ತು ರೋಮಿಂಗ್​ನಲ್ಲಿ ಅನಿಯಮಿತ ಕರೆ ಸೌಲಭ್ಯವಿದೆ.

ರೂ.1,799 ರೀಚಾರ್ಜ್ ಪ್ಲ್ಯಾನ್ ನಲ್ಲಿ ಬಳಕೆದಾರರಿಗೆ 24ಜಿಬಿ ಡೇಟಾ ಸೇವೆ ಲಭ್ಯವಾಗಲಿದೆ. ಈ ಡೇಟಾ ಮುಗಿದ ನಂತರ ಗ್ರಾಹಕರಿಗೆ 50 ಪೈಸೆಯಷ್ಟು ಪ್ರತಿ MB ಗೆ ಶುಲ್ಕ ವಿಧಿಸಲಾಗುತ್ತದೆ. ಗ್ರಾಹಕರು ಒಂದು ವೇಳೆ ಹೆಚ್ಚಿನ ಡೇಟಾ ಬಯಸಿದ್ರೆ ಡೇಟಾ ವೋಚರ್​ ಅನ್ನು ಖರೀದಿ ಮಾಡಬಹುದು. ಈ ಯೋಜನೆಯು ಬಳಕೆದಾರರಿಗೆ ಅಪೊಲೊ 24|7 ಸರ್ಕಲ್, ಫಾಸ್ಟ್‌ಟ್ಯಾಗ್ ರೀಚಾರ್ಜ್‌ನಲ್ಲಿ ರೂ.100 ಕ್ಯಾಶ್‌ಬ್ಯಾಕ್, ಉಚಿತ ಹೆಲೋಟ್ಯೂನ್ಸ್, ಉಚಿತ ವಿಂಕ್ ಮ್ಯೂಸಿಕ್​ ಅಪ್ಲಿಕೇಶನ್​​ ಅನ್ನು 3 ತಿಂಗಳವರೆಗೆ ನೀಡುತ್ತದೆ.

ಏರ್​ಟೆಲ್​ ಟೆಲಿಕಾಂ ಕಂಪೆನಿ ಈ ಹಿಂದೆಯೂ ಹಲವಾರು ಅಗ್ಗದ ರೀಚಾರ್ಜ್​ ಪ್ಲ್ಯಾನ್​ಗಳನ್ನು ಪರಿಚಯಿಸಿದೆ. ಸದ್ಯ ಈ ರೀಚಾರ್ಜ್ ಒಂದೇ ಬಾರಿ ಮಾಡಿದ್ರೆ ಸಾಕು, ನಂತರ ಒಂದು ವರ್ಷ ಯಾವುದೇ ಚಿಂತೆ ಇರಲ್ಲ. ಹಾಗೇ ಕರೆಯಲ್ಲಿ ಹೆಚ್ಚು ಮಾತನಾಡುವವರಿಗೆ ಇದು ಉತ್ತಮ ಯೋಜನೆಯಾಗಿದೆ.

Leave A Reply

Your email address will not be published.