Vastu tips: ಈ ವಸ್ತುಗಳನ್ನು ಮನೆಯಲ್ಲಿ ಖಂಡಿತ ಇಡಲೇಬೇಡಿ, ಅಪಶಕುನ!!
Vastu tips : ಮನೆಯಲ್ಲಿ ಸಾಮಾನ್ಯವಾಗಿ ದೈನಂದಿನ ಬಳಕೆಯ ವಸ್ತುಗಳೇ ಇರುತ್ತವೆ. ಕೆಲವೊಂದು ಬಾರಿ ಬೇಡದ ವಸ್ತುಗಳು ಕೂಡ ಮನೆಯೋಳಗೇ ಇರುತ್ತವೆ. ಅದನ್ನು ಹೊರಗೆ ಎಸೆದಿರೋದಿಲ್ಲ. ಆದರೆ, ಇದು ತಪ್ಪು. ಸಣ್ಣಪುಟ್ಟ ವಿಚಾರ ಕಡೆಗಣಿಸಬಾರದು. ವಾಸ್ತು ಶಾಸ್ತ್ರದ (Vastu tips) ಪ್ರಕಾರ, ಈ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಒಳಿತಲ್ಲ. ಮನೆಯಲ್ಲಿ ಕಲಹ ಉಂಟಾಗುತ್ತದೆ ಎಂದು ಹೇಳಲಾಗಿದೆ.
ಒಡೆದ ಗಾಜು: ಇದು ಹೆಚ್ಚಾಗಿ ಎಲ್ಲರಿಗೆ ತಿಳಿದಿದೆ ಮನೆಯಲ್ಲಿ ಒಡೆದ ಗಾಜು (glass), ಒಡೆದ ಕನ್ನಡಿ ಇಡಬಾರದು. ಇದು ಕೂಡಾ ಮನಸ್ಸುಗಳು ಒಡೆಯಲು ಕಾರಣವಾಗುತ್ತದೆ. ಮನೆಯ ಸದಸ್ಯರಲ್ಲಿ ನಕಾರಾತ್ಮಕತೆಯನ್ನು ಇಡುತ್ತದೆ. ಹಣಕಾಸಿನ ತೊಂದರೆಯನ್ನೂ ಎದುರಿಸಬೇಕಾಗುತ್ತದೆ. ಒಟ್ಟಾರೆ ಮನೆಗೆ ಶ್ರೇಯಸ್ಸು ಅಲ್ಲ.
ಹರಿದ ಬಟ್ಟೆ: ಹೆಚ್ಚಾಗಿ ಬಳಸಿ ಹರಿದ ಬಟ್ಟೆ ಮನೆಯಲ್ಲೇ ಇರುತ್ತದೆ. ಏನಾದರೂ ಬೇರೆ ಕೆಲಸಕ್ಕೆ ಉಪಯೋಗಕ್ಕೆ ಬರುತ್ತದೆ ಎಂದು ಅದನ್ನು ಬಿಸಾಡಿರೊಲ್ಲ. ಆದರೆ, ಹರಿದ ಹಳೆಯ ಬಟ್ಟೆಗಳನ್ನು ಮನೆಯಲ್ಲಿ ಇಡಬಾರದು. ಇದು ಮನೆಯಲ್ಲಿ ಬಡತನವನ್ನು ತರುತ್ತದೆ. ಇದರಿಂದ ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು.
ಶಿವನ ಕಾಸ್ಮಿಕ್ ಚಿತ್ರ: ನೃತ್ಯ ಮಾಡುವ ಶಿವನ ಕಾಸ್ಮಿಕ್ ಚಿತ್ರವು ಪ್ರತಿಯೊಂದು ಶ್ರೇಷ್ಠ ನೃತ್ಯ ಪ್ರೇಮಿಗಳ ಮನೆಯಲ್ಲಿ ಕಂಡುಬರುತ್ತದೆ. ನಟರಾಜ ಕಲೆಯ ಸಂಕೇತವಾಗಿದೆ. ಆದರೆ ನೃತ್ಯ ರೂಪವು ತಾಂಡವ ನೃತ್ಯ ಅಂದರೆ ವಿನಾಶವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಇದನ್ನು ಮನೆಯಲ್ಲಿ ಇಡಬಾರದು ಎಂದು ವಾಸ್ತು ಹೇಳುತ್ತದೆ.
ಕೆಟ್ಟು ನಿಂತ ಗಡಿಯಾರ: ಗಡಿಯಾರ ಕೆಟ್ಟರೆ ಕೆಲವರು ಅದರ ಗೋಜಿಗೆ ಹೋಗಲ್ಲ. ಇಂದಿನ ದಿನದಲ್ಲಿ ಮೊಬೈಲ್ (mobile) ಬಳಕೆಯಿಂದ ಗಡಿಯಾರದ ಅವಶ್ಯಕತೆ ಕಡಿಮೆ. ಆದರೆ, ಕೆಟ್ಟು ನಿಂತ ಗಡಿಯಾರವನ್ನು ಮನೆಯಲ್ಲಿ ಇಡಬೇಡಿ. ಕೆಟ್ಟ ಗಡಿಯಾರವನ್ನು ಮನೆಯ ವಾಸ್ತುವಿಗೆ ಒಳ್ಳೆಯದೆಂದು ಪರಿಗಣಿಸಲಾಗುವುದಿಲ್ಲ. ಇದರಿಂದಾಗಿ ಕೆಟ್ಟ ಸಮಯವನ್ನು ಎದುರಿಸಬೇಕಾಗುತ್ತದೆ.
ಕೆಟ್ಟ ಬೂಟು: ಕೆಟ್ಟ ಬೂಟುಗಳನ್ನು, ಬಳಸದ ಚಪ್ಪಲಿಗಳನ್ನು ಸಹ ಮನೆಯಲ್ಲಿ ಇಡಬಾರದು. ಇದರಿಂದಾಗಿ ಮನೆಯಲ್ಲಿ ಜಗಳಗಳು ಪ್ರಾರಂಭವಾಗುತ್ತವೆ. ಹಾಗಾಗಿ ಅದನ್ನು ಮನೆಯಿಂದ ಹೊರಹಾಕಿ. ಆಗ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಹಾಗೇ ಹಳೆ ಪತ್ರಿಕೆಗಳ ಬಂಡಲ್ ಕೂಡ ಮನೆಯಲ್ಲಿ ಇಡಬಾರದು. ಇದು ಮನೆಯ ವಾಸ್ತುವಿನ ಮೇಲೂ ಪರಿಣಾಮ ಬೀರುತ್ತದೆ.
ಇದನ್ನೂ ಓದಿ : A doctor who loved the dead: ಈ ವೈದ ಸಮಾಧಿಯಿಂದ ಹೊರತೆಗೆದ ಹೆಣವನ್ನೇ ಪ್ರೀತಿಸಿ, 7 ವರ್ಷ ಸಂಸಾರ ಹೂಡಿದ್ದ!
Thanks for sharing. I read many of your blog posts, cool, your blog is very good.