Underwear: ಮಲಗುವಾಗ ಒಳ ಉಡುಪು ಧರಿಸದಿದ್ದರೆ ಚರ್ಮದ ಸಮಸ್ಯೆ ಕಂಡುಬರುತ್ತದೆಯೇ?
Wearing underwear: ನಾವು ಧರಿಸುವ ಉಡುಪುಗಳು (Dress) ನಮ್ಮ ಸೌಂದರ್ಯ ಕಾಪಾಡುವಲ್ಲಿ ನೆರವಾಗುತ್ತದೆ. ಆದರೆ, ನಾವು ಧರಿಸುವ ಒಳ ಉಡುಪುಗಳು (Wearing underwear)ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.ಅದರಲ್ಲಿಯೂ ವಿಶೇಷವಾಗಿ ದೇಹದ(Body) ಸ್ವಚ್ಛತೆ ಮತ್ತು ನೈರ್ಮಲ್ಯದ ವಿಷಯದಲ್ಲಿ ಒಳ ಉಡುಪುಗಳು ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚಿನವರಿಗೆ ರಾತ್ರಿ ಮಲಗುವ (Sleeping In Night) ಸಂದರ್ಭ ಒಳ ಉಡುಪು(Underwear) ಧರಿಸುವುದು ಕಿರಿಕಿರಿ ಅನಿಸುತ್ತದೆ. ಹಾಗಾದ್ರೆ, ಒಳ ಉಡುಪು ಧರಿಸದೆ ಮಲಗಿದರೆ ಏನಾದರೂ ಆರೋಗ್ಯ ಸಮಸ್ಯೆ(Health Problem)ಉಂಟಾಗುತ್ತದೆಯೇ ಎಂಬ ಅನುಮಾನ ಹೆಚ್ಚಿನವರನ್ನು ಕಾಡಬಹುದು. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಜನನಾಂಗಗಳ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವ ವಿಷಯದಲ್ಲಿ ಒಳ ಉಡುಪುಗಳ ಬಗ್ಗೆ ನಿಗಾ ವಹಿಸದಿದ್ದರೆ ಜನನಾಂಗಗಳ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಸೂಕ್ಷ್ಮ ಭಾಗಗಳವ ಜೊತೆಗೆ ಸೋಂಕುಗಳನ್ನೂ ಉಂಟು ಮಾಡುವ ಸಾಧ್ಯತೆಗಳಿವೆ. ರಾತ್ರಿ ಹೊತ್ತು ಒಳ ಉಡುಪು ಧರಿಸಿ ಮಲಗುವುದು ಅಥವಾ ಧರಿಸದೆ ಮಲಗುವುದು ವೈಯಕ್ತಿಕ ವಿಚಾರ. ಆದರೆ, ಜನನಾಂಗಗಳ ಭಾಗದಲ್ಲಿ ಸ್ವಚ್ಛತೆ ಕಾಪಾಡುವುದು ಬಹು ಮುಖ್ಯ ಪಾತ್ರ ವಹಿಸುತ್ತದೆ.
ಬೇಸಿಗೆಯ ಸಮಯದಲ್ಲಿ ಸೆಕೆಗೆ ಒಳ ಉಡುಪು ಧರಿಸುವುದೇ ಕೆಲವರ ಪಾಲಿಗೆ ಹಿಂಸೆ. ಇದರಿಂದ ಪಾರಾಗುವುದು ಹೇಗಪ್ಪಾ ಎಂದು ಹೆಚ್ಚಿನವರು ಯೋಚನೆ ಮಾಡುವುದು ಸಹಜ. ಇದರ ನಡುವೆ ಒಳಉಡುಪು ಹಾಕದೆ ಮಲಗುವುದರಿಂದ ಚರ್ಮದ ಸಮಸ್ಯೆಗಳು ( Skin Problems)ಮತ್ತು ಸೋಂಕುಗಳು ಕಂಡುಬರುವ ಸಾಧ್ಯತೆಯ ಬಗ್ಗೆ ಭಯ ಕೂಡ ಮೂಡುವುದು ಸಹಜ.
ರಾತ್ರಿ ಹೊತ್ತು ಮಲಗುವಾಗ ಅಂಡರ್ವೇರ್(Underware) ಹಾಕಿಕೊಳ್ಳದೆ ಮಲಗುವುದರಿಂದ ಚರ್ಮದ ಸಮಸ್ಯೆಗಳು ಕಂಡುಬರುತ್ತವೆ ಎಂದು ನೇರವಾಗಿ ಹೇಳಲು ಸಾಧ್ಯವಿಲ್ಲದೆ ಇದ್ದರೂ ಜನನಾಂಗದ ಭಾಗದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಉತ್ತಮ. ಮುಂಜಾನೆಯ ಸಂದರ್ಭದಲ್ಲಿ ಅಂಡರ್ವೇರ್ ಹಾಕಿಕೊಳ್ಳುವುದರಿಂದ ಜನನಾಂಗದ ಭಾಗ ಸ್ವಚ್ಛವಾಗಿ ಒಣಗಿದಂತೆ ಇರುತ್ತದೆ. ರಾತ್ರಿ ಒಳಉಡುಪು ಹಾಕಿಕೊಳ್ಳದೆ ಮಲಗುವುದರಿಂದ ಬೆವರು ಹಾಗೂ ದೇಹದ ಇನ್ನಿತರ ದ್ರವಗಳು ಚರ್ಮದ ಜೊತೆ ನೇರವಾಗಿ ಸಂಪರ್ಕ ಹೊಂದುವುದರಿಂದ ದುರ್ವಾಸನೆ ಕಂಡು ಬರುವ ಸಾಧ್ಯತೆಗಳಿವೆ. ಹೀಗಾಗಿ, ಸೋಂಕು ಹೆಚ್ಚು ತಗುಲುವ ಸಾಧ್ಯತೆಗಳಿವೆ.
ಒಳಉಡುಪು ತುಂಬಾ ಮೆತ್ತಗಿರುವುದರಿಂದ ಜನನಾಂಗದ ಸೂಕ್ಷ್ಮ ಚರ್ಮದ ಭಾಗಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.ಆದರೆ ಒಳ ಉಡುಪಿನ ಧರಿಸದೆ ಮಲಗುವ ಅಭ್ಯಾಸವಿದ್ದರೆ ಚರ್ಮದ ಕಿರಿಕಿರಿ, ಚರ್ಮ ಕಿತ್ತು ಹೋಗುವ ಸಮಸ್ಯೆ ಕಂಡು ಬರಬಹುದು. ಹೀಗಾಗಿ ಒಳ ಉಡುಪು ಧರಿಸಿ ಮಲಗುವುದು ಉತ್ತಮ. ಸಾಮಾನ್ಯವಾಗಿ ಜನಾನಾಂಗದ ಭಾಗ ತೇವಾಂಶದಿಂದ ಇರುತ್ತದೆ ಜೊತೆಗೆ ಬ್ಯಾಕ್ಟೀರಿಯಾ ಬೆಳವಣಿಗೆಯಾಗಲು ಸಹಕಾರಿಯಾಗುವಂತಹ ಬಿಸಿಯ ವಾತಾವರಣವನ್ನು ಒಳಗೊಂಡಿರುತ್ತದೆ.ಅಂಡರ್ವೇರ್ ಹಾಕಿಕೊಳ್ಳುವುದರಿಂದ ತೇವಾಂಶ ಸಾಧ್ಯವಾದಷ್ಟು ಹೀರಿಕೊಳ್ಳುವ ಬ್ಯಾಕ್ಟೀರಿಯಾ ಸಂತತಿ ಹೆಚ್ಚಾಗಲು ಅವಕಾಶವಿರುವುದಿಲ್ಲ. ಆದರೆ ಒಳ ಉಡುಪು ಧರಿಸದೆ ಇರುವುದರಿಂದ ಬ್ಯಾಕ್ಟೀರಿಯಾ ಸೋಂಕು ಉಲ್ಬಣವಾಗಬಹುದು. ಇದರಿಂದ ಮೂತ್ರ ಸೋಂಕು ಕೂಡ ಬರುವ ಸಾಧ್ಯತೆಗಳಿವೆ. ಹೀಗಾಗಿ ಒಳ ಉಡುಪು ಧರಿಸಿ ಮಲಗುವುದು ಉತ್ತಮ.
Your point of view caught my eye and was very interesting. Thanks. I have a question for you.