New Traffic Rules: ಕಡಿಮೆ ವೇಗದಲ್ಲಿ ವಾಹನ ಚಲಾಯಿಸ್ತೀರಾ ನಿಮಗೂ ಬೀಳುತ್ತೆ ಭರ್ಜರಿ 9 ಸಾವಿರ ದಂಡ!
New Traffic Rules : ಎಲ್ಲರಿಗೂ ತಿಳಿದಿರುವ ಹಾಗೇ ರಸ್ತೆಯಲ್ಲಿ ಅತಿ ವೇಗದಲ್ಲಿ ವಾಹನ ಚಲಾಯಿಸಿದರೆ ಅದು ಟ್ರಾಫಿಕ್ ರೂಲ್ಸ್ (New Traffic Rules) ಬ್ರೇಕ್ ಮಾಡಿದಂತೆ, ಅದಕ್ಕೆ ಭಾರೀ ದಂಡ ಕೂಡ ತೆರಬೇಕು. ಆದರೆ, ಇಲ್ಲಿ ಕಡಿಮೆ ವೇಗದಲ್ಲಿ ವಾಹನ ಚಲಾಯಿಸಿದರೆ ಭಾರೀ ಮೊತ್ತದ ದಂಡ ಬೀಳುತ್ತೆ!!. ಬಹುಶಃ ಜಾಲಿಯಾಗಿ, ಬೈಕ್ ರೈಡ್ ಮಾಡೋರಿಗೆ, ಅತೀವೇಗದ ವಾಹನ ಚಲಾವನೆಯ ಕ್ರೇಜ್ ಇರೋರಿಗೆ ಇದು ವರದಾನವೇ ಸರಿ.
ಇಂತಹ ನಿಯಮ ಎಲ್ಲಿ ಇರೋದು? ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿಯಲ್ಲಿರುವ ಶೇಖ್ ಮೊಹಮ್ಮದ್ ಬಿನ್ ರಶೀದ್ ರಸ್ತೆಯಲ್ಲಿ 120 ಕಿಲೋಮೀಟರ್‌ಗಿಂತ ಕಡಿಮೆ ವೇಗದಲ್ಲಿ ವಾಹನ ಚಲಾಯಿಸಿದರೆ ಭರ್ಜರಿ ರೂ 8938.80 ದಂಡ ಬೀಳುತ್ತೇ!!.
ಈ ರಸ್ತೆಯಲ್ಲಿ ಗರಿಷ್ಠ, ಕನಿಷ್ಠ ವೇಗದ ಮಿತಿಯನ್ನು ನಿಗದಿಪಡಿಸಲಾಗಿದೆ. ಏಪ್ರಿಲ್ 1ರಿಂದ ಈ ರಸ್ತೆಯಲ್ಲಿ ಕನಿಷ್ಠ ವೇಗದ ಮಿತಿಯನ್ನು ಜಾರಿಗೊಳಿಸಲಾಗಿದ್ದು, ಮೇ 1ರಿಂದ ಈ ರಸ್ತೆಯಲ್ಲಿ ಗಂಟೆಗೆ 120 ಕಿ.ಮೀ ಕಡಿಮೆ ವೇಗದಲ್ಲಿ ವಾಹನ ಚಲಾಯಿಸುವವರಿಗೆ ದಂಡ ವಿಧಿಸಲಾಗುತ್ತದೆ ಎಂದು ಯುಎಇ ಪೊಲೀಸರು ಗುರುವಾರ ಮಾಹಿತಿ ನೀಡಿದ್ದಾರೆ.
ಅಬುಧಾಬಿ ಪೊಲೀಸ್ ಅಧಿಕಾರಿಗಳ ಪ್ರಕಾರ, ಯುಎಇಯ ಪ್ರಮುಖ ಹೆದ್ದಾರಿಗಳಲ್ಲಿ ಗರಿಷ್ಠ ವೇಗ ಗಂಟೆಗೆ 140 ಕಿಮೀ ಆಗಿರುತ್ತದೆ. ಎಡದಿಂದ ಮೊದಲ, ಎರಡನೇ ಲೇನ್‌ಗಳಲ್ಲಿ ಕನಿಷ್ಠ ವೇಗ ಗಂಟೆಗೆ 120 ಕಿಮೀ ಆಗಿದೆ ಎನ್ನಲಾಗಿದೆ.
ಮೂರನೇ ಪಥದಲ್ಲಿ ನಿಧಾನ ವಾಹನಗಳು ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. ರಸ್ತೆಯ ಕೊನೆಯ ಲೇನ್‌ನಲ್ಲಿ ಭಾರೀ ವಾಹನಗಳು ಸಂಚರಿಸುತ್ತವೆ ಎನ್ನಲಾಗಿದೆ. ಪ್ರಸ್ತುತ ನಿಯಮ
ಉಲ್ಲಂಘಿಸುವವರಿಂದ ಯಾವುದೇ ಕರೆನ್ಸಿಯನ್ನು ವಸೂಲಿ ಮಾಡಲಾಗಿಲ್ಲ. ಇದೀಗ ಈ ನಿಟ್ಟಿನಲ್ಲಿ ವಾಹನ ಚಾಲಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : PPF Intrest: ಪಿಪಿಎಫ್ ಖಾತೆ ಹೊಂದಿದ್ದರೆ ಈ ಮಾಹಿತಿ ನಿಮಗಾಗಿ! ಈ ರೀತಿಯ ಅವಕಾಶ ಮತ್ತೆ ಸಿಗುವುದಿಲ್ಲ!
Your point of view caught my eye and was very interesting. Thanks. I have a question for you.