LIC Jeevan Shiromani Plan: ಈ ಯೋಜನೆಯಲ್ಲಿ ಕೇವಲ 4 ವರ್ಷ ಹೂಡಿಕೆ ಮಾಡಿದ್ರೆ ನಿಮಗೆ ಸಿಗುತ್ತೆ 1 ಕೋಟಿ ರೂ. !! ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ

LIC Jeevan Shiromani Plan : LIC ತನ್ನ ಗ್ರಾಹಕರಿಗಾಗಿ ಅನೇಕ ಯೋಜನೆಗಳನ್ನು ಪರಿಚಯಿಸುತ್ತಿದೆ. ತಮ್ಮ ಭವಿಷ್ಯಕ್ಕಾಗಿ ಹಣ ಹೂಡಿಕೆ (investment ) ಮಾಡಲು ಇದು ಅತ್ಯುತ್ತಮ ಸಂಸ್ಥೆಯಾಗಿದೆ. LIC ಹಲವಾರು ಜನರಿಗೆ ಉಪಯುಕ್ತವಾದ, ಅನುಕೂಲಕರವಾದ ಯೋಜನೆಯಾಗಿದ್ದು, ಸಾಕಷ್ಟು ಜನರು ಇದರಲ್ಲಿ ಹೂಡಿಕೆ ಮಾಡುತ್ತಾರೆ. ಇದರಲ್ಲಿ ಹಣ ಹೂಡಿಕೆ ಮಾಡಲು ಯಾವುದೇ ಅಪಾಯ ಇರುವುದಿಲ್ಲ. ಸದ್ಯ ಭಾರತೀಯ ಜೀವ ವಿಮಾ ನಿಗಮದ (LIC) ಯೋಜನೆಯಾದ “ಎಲ್‌ಐ‌ಸಿ ಜೀವನ್ ಶಿರೋಮಣಿ ”(LIC Jeevan Shiromani Plan), ನಾಗರೀಕರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

LIC Jeevan Shiromani ರಕ್ಷಣೆಯ ಜೊತೆಗೆ ಉಳಿತಾಯವನ್ನೂ ನೀಡುವ ಯೋಜನೆಯಾಗಿದ್ದು, ಈ ಯೋಜನೆಯಲ್ಲಿ ನೀವು ಕೇವಲ 4 ವರ್ಷ ಹೂಡಿಕೆ ಮಾಡಿದ್ರೆ ನಿಮಗೆ ಬರೋಬ್ಬರಿ 1 ಕೋಟಿ ರೂ. ಸಿಗುತ್ತದೆ. ಹೌದು, ನೀವು ಹೆಚ್ಚಿನ ಆದಾಯ ವರ್ಗಕ್ಕೆ ಸೇರಿದವರಾಗಿದ್ದರೆ, ಈ ಯೋಜನೆಯ ಲಾಭ ಪಡೆಯಬಹುದು.

ಎಲ್‌ಐ‌ಸಿಯ ಜೀವನ್ ಶಿರೋಮಣಿ ಯೋಜನೆಯು ಲಿಂಕ್ ಮಾಡದ, ಭಾಗವಹಿಸುವ, ವೈಯಕ್ತಿಕ, ಜೀವ ವಿಮಾ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯನ್ನು ಹೆಚ್ಚಿನ ಆದಾಯ ಹೊಂದಿರುವ ಜನರಿಗಾಗಿ ರೂಪಿಸಲಾಗಿದೆ. ಇದು ಸೀಮಿತ ಪ್ರೀಮಿಯಂನಲ್ಲಿ ಹಣವನ್ನು ಹಿಂತಿರುಗಿಸುವ ಯೋಜನೆಯಾಗಿದ್ದು, ಇದರಲ್ಲಿ ನೀವು ಕಾಲಕಾಲಕ್ಕೆ ಹಣವನ್ನು ಪಡೆಯುತ್ತೀರಿ. ಇನ್ನು, ಪಾಲಿಸಿದಾರರು ಮೆಚ್ಯೂರಿಟಿಗೆ ಮುನ್ನವೇ ಸಾವನ್ನಪ್ಪಿದರೆ, ಆಗ ಹೂಡಿಕೆ ಮಾಡಿದ ಹಣ ಕುಟುಂಬದವರಿಗೆ ಸೇರುತ್ತದೆ.

ಜೀವನ್ ಶಿರೋಮಣಿ ಪಾಲಿಸಿಯಲ್ಲಿ, ನೀವು ನಾಲ್ಕು ವರ್ಷಗಳವರೆಗೆ ಪ್ರತಿ ತಿಂಗಳು 94,000 ರೂ.ಗಳನ್ನು ಹೂಡಿಕೆ ಮಾಡಿದರೆ ಇದರ ನಂತರ, ನೀವು ಪಾಲಿಸಿಯ ವಾಪಸಾತಿಯನ್ನು ಪಡೆಯಲು ಪ್ರಾರಂಭಿಸುತ್ತೀರಿ. ನೀವು ವಾರ್ಷಿಕವಾಗಿ, 6 ತಿಂಗಳು, ತ್ರೈಮಾಸಿಕ ಅಥವಾ ಪ್ರತಿ ತಿಂಗಳು ಪ್ರೀಮಿಯಂ ಪಾವತಿಸಬಹುದು. ಈ ಪಾಲಿಸಿಯಲ್ಲಿ ನೀವು ಕನಿಷ್ಠ 1 ಕೋಟಿ ರೂ.ಗಳ ವಿಮಾ ಮೊತ್ತವನ್ನು ಪಡೆಯುತ್ತೀರಿ.

ಜೀವನ್ ಶಿರೋಮಣಿ ಪಾಲಿಸಿಯ ಪ್ರಯೋಜನಗಳೇನು?
ಪಾಲಿಸಿದಾರರು ಸಂಪೂರ್ಣ ಪಾಲಿಸಿ ಅವಧಿಯವರೆಗೆ ಉಳಿದುಕೊಂಡರೆ ಮತ್ತು ಎಲ್ಲಾ ಪ್ರೀಮಿಯಂಗಳನ್ನು ಪಾವತಿಸಿದರೆ, ವಿಮಾ ಮೊತ್ತದ ನಿಶ್ಚಿತ ಶೇಕಡಾವಾರು ಮೊತ್ತವನ್ನು ಪಾವತಿಸಲಾಗುತ್ತದೆ.
ವಿವಿಧ ನೀತಿ ನಿಯಮಗಳಿಗೆ ನಿಗದಿತ ಶೇಕಡಾವಾರು ಇಲ್ಲಿದೆ:
• 14 ವರ್ಷಗಳ ಪಾಲಿಸಿಯಲ್ಲಿ, ನೀವು 10ನೇ ಮತ್ತು 12ನೇ ವರ್ಷದಲ್ಲಿ ನಿಮಗೆ 30% ವಿಮಾ ಮೊತ್ತ ಸಿಗುತ್ತದೆ.
• 16 ವರ್ಷಗಳ ಪಾಲಿಸಿಯಲ್ಲಿ ನೀವು 12ನೇ ಮತ್ತು 14ನೇ ವರ್ಷದಲ್ಲಿ 35% ಎಸ್ ಅಶ್ಯೂರ್ಡ್ ಪಡೆಯುತ್ತೀರಿ.
• 18 ವರ್ಷಗಳ ಪಾಲಿಸಿಯಲ್ಲಿ 14 ಮತ್ತು 16 ನೇ ವರ್ಷದಲ್ಲಿ 40% ವಿಮಾ ಮೊತ್ತ ಲಭ್ಯವಾಗುತ್ತದೆ.
• 20 ವರ್ಷಗಳ ಪಾಲಿಸಿಯಲ್ಲಿ, 16ನೇ ಮತ್ತು 18ನೇ ವರ್ಷಗಳಲ್ಲಿ ವಿಮಾ ಮೊತ್ತ 45% ಪಡೆಯುತ್ತೀರಿ.

ವಿಶೇಷತೆಗಳೇನು?
ಈ ಪಾಲಿಸಿಯಲ್ಲಿ ಹೂಡಿಕೆ ಮಾಡಲು ವ್ಯಕ್ತಿಗೆ ಕನಿಷ್ಠ ವಯಸ್ಸು 18 ವರ್ಷಗಳಾಗಿರಬೇಕು. ಈ ಪಾಲಿಸಿಯನ್ನು 14, 16, 18 ಮತ್ತು 20 ವರ್ಷಗಳವರೆಗೆ ಖರೀದಿಸಬಹುದು. ಪಾಲಿಸಿಯಲ್ಲಿ ಪ್ರೀಮಿಯಂ ಪಾವತಿಸುವ ಅವಧಿ ಕೇವಲ 4 ವರ್ಷಗಳು ಆಗಿದೆ. ಪಾಲಿಸಿಯಲ್ಲಿ ಗರಿಷ್ಠ ಹೂಡಿಕೆ ವಯಸ್ಸು 55 ವರ್ಷಗಳು (ಪಾಲಸಿ ಅವಧಿ 14 ವರ್ಷಗಳು), 51 ವರ್ಷಗಳು (ಪಾಲಿಸಿ ಅವಧಿ 16 ವರ್ಷಗಳು), 48 ವರ್ಷಗಳು (ಪಾಲಿಸಿ ಅವಧಿ 18 ವರ್ಷಗಳು) ಮತ್ತು 45 ವರ್ಷಗಳು (ಪಾಲಿಸಿ ಅವಧಿ 20 ವರ್ಷಗಳು) ಆಗಿದೆ.

Leave A Reply

Your email address will not be published.