Kichha Sudeep to BJP: ಬಿಜೆಪಿಯ ಜತೆ ಕೈ ಜೋಡಿಸಿದ ಕಿಚ್ಚ ಸುದೀಪ್ !

Kichha Sudeep to BJP : ಕಿಚ್ಚ ಸುದೀಪ್ (Actor Sudeep) ಅವರು ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದಾರೆ. ಕಿಚ್ಚ ಸುದೀಪ್ ಅಧಿಕೃತವಾಗಿ ಬಿಜೆಪಿಯನ್ನು ಸೇರಿದ್ದಾರೆ. ಬಿಜೆಪಿಯ ಹಿರಿಯ ನಾಯಕರುಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಕಿಚ್ಚ ಸುದೀಪ್ ಅವರು ಕಮಲದ ಬಾವುಟ ಹಿಡಿದು ನಿಂತಿದ್ದು ಕಾರಣ ದೊಡ್ಡ ತಿರುವನ್ನು ಪಡೆದುಕೊಳ್ಳುವ ಎಲ್ಲಾ ಲಕ್ಷಣಗಳು ಇವೆ.

ಕರ್ನಾಟಕದ ಜನಪ್ರಿಯ ನಾಯಕ ನಟ ಕಿಚ್ಚ ಸುದೀಪ್ ಅವರು ಬಿಜೆಪಿ ಸೇರುತ್ತಿರುವುದು (Kichha Sudeep to BJP) ಖಚಿತವಾಗಿಯೂ ಬಿಜೆಪಿಗೆ ಬಹುದೊಡ್ಡ ಪ್ಲಸ್ ಪಾಯಿಂಟ್. ಸುದೀಪ್ ಅವರಿಗೆ ಬಹುದೊಡ್ಡ ಅಭಿಮಾನಿ ಬಳಗ ಇರುವುದು ಒಂದೆಡೆಯಾದರೆ, ಆತ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. ಉತ್ತರ ಕರ್ನಾಟಕದಲ್ಲಿ ವಾಲ್ಮೀಕಿ ಸಮುದಾಯದ ಪ್ರಬಲ ನಿಯಂತ್ರಣದಲ್ಲಿರುವ ಹಲವಾರು ವಿಧಾನಸಭಾ ಕ್ಷೇತ್ರಗಳಿವೆ. ಬಳ್ಳಾರಿಯ ಗ್ರಾಮಾಂತರ ಶಾಸಕ ಶ್ರೀರಾಮುಲು ಅವರು ಕೂಡ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. ಕಿಚ್ಚ ಸುದೀಪ್ ಸೇರ್ಪಡೆಯಿಂದ ವಾಲ್ಮೀಕಿ ಸಮುದಾಯ ಹೆಚ್ಚಿರೋ ಕಡೆ ಪ್ರಚಾರ ಮಾಡಲಿದ್ದಾರೆ. ಅದು ದೊಡ್ಡ ಮಟ್ಟದ ಫಲ ನೀಡಲಿದೆ ಅನ್ನೋದು ಬಿಜೆಪಿಯ ತಂತ್ರ.

ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದ ಹೊತ್ತಿಗೆ ಸುದೀಪ್ ತನ್ನ ಕುಟುಂಬಸ್ಥರ ಜೊತೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಯಾವುದಾದರೂ ಮಹತ್ವ ಜೀವನದ ನಿರ್ಧಾರ ತೆಗೆದುಕೊಳ್ಳುವ ಮುನ್ನ ದೇವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದು ಮುಂದೆ ಸಾಗುವುದು ಸಂಪ್ರದಾಯ. ಇವತ್ತು ಅವರು ಟೆಂಪಲ್ ಭೇಟಿ ಆದಾಗಲೇ ಕಿಚ್ಚ ಸುದೀಪ್ ಅವರು ಬಿಜೆಪಿಯ ಜೊತೆ ಕೈಜೋಡಿಸುವುದು ಬಹುತೇಕ ಪಕ್ಕ ಆಗಿತ್ತು.

ಇದೀಗ ಸುದ್ದಿಗೋಷ್ಠಿ ನಡೆಸಿದ ನಟ ಸುದೀಪ್ ಅವರು ತಾವು ತಮ್ಮ.ಮಾಮನ ಪರ ಪ್ರಚಾರಕರಾಗಿ ಸೇರಿಕೊಳ್ಳುತ್ತಾಗಿ ಘೋಷಿಸಿದ್ದಾರೆ. ಕಿಚ್ಚ ಸುದೀಪ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕಳೆದ 25 ವರ್ಷಗಳಿಂದ ಹಿಂದಿನಿಂದಲೇ ಆತ್ಮೀಯರು. ನನ್ನ ಕಷ್ಟ ಕಾಲದಲ್ಲಿ ನನಗೆ ಸಹಾಯ ಮಾಡಿದ್ದು ನಾನ್ ಮಾಮ ಅಂತ ಕರೆಯುವ ಬೊಮ್ಮಾಯಿಯವರು. ಅವರಿಗೆ ಬೆಂಬಲವಾಗಿ ನಾನು ನಿಲ್ಲುತ್ತೇನೆ. ಅವರು ಹೇಳಿದ ಕಡೆ, ಚುನಾವಣಾ ಪ್ರಚಾರ ನಡೆಸುತ್ತೇನೆ. ಅದು ಬಿಟ್ಟು ನಾನು ಪಕ್ಷಾತೀತ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ನಾನು ಪ್ರಚಾರ ಮಾಡದೆ ಇರಬಹುದು. ಆದರೆ ಬೊಮ್ಮಾಯಿಯವರು ಸೂಚಿಸಿದ ಕಡೆ ಪ್ರಚಾರ ನಡೆಸುತ್ತೇನೆ ಎಂದಿದ್ದಾರೆ ನಟ ಸುದೀಪ್.

ಬಿಜೆಪಿಗೆ ಒಂದು ರೀತಿಯ ದೊಡ್ಡ ಶಕ್ತಿ ಬಂದಿದೆ. ಮುಖ್ಯವಾಗಿ ಉತ್ತರ ಕರ್ನಾಟಕದ ಹಲವು ವಾಲ್ಮೀಕಿ ಸಮುದಾಯದವರು ಬಹುಸಂಖ್ಯಾತರಿರುವ ಕ್ಷೇತ್ರಗಳಲ್ಲಿ ಸುದೀಪ್ ಅವರ ಜನಪ್ರಿಯತೆಯು ಬಿಜೆಪಿಗೆ ವರದಾನವಾಗುವ ಸಾಧ್ಯತೆ ಇದೆ.

ಯಾದಗಿರಿ ಸುರುಪುರ, ರಾಯಚೂರು ಗ್ರಾಮೀಣ, ಕಂಪ್ಲಿ, ಮೊಳಕಾಲ್ಮೂರು, ಮೈಸೂರಿನ ಹೆಚ್ ಡಿ ಕೋಟೆ, ಬೆಂಗಳೂರು ಮುಂತಾದ ಹಲವು ಕಡೆ ಬಿಜೆಪಿಯ ಸ್ಟಾರ್ ಪ್ರಚಾರಕನಾಗಿ ಚುನಾವಣಾ ಅಂಕಣಕ್ಕೆ ಸುದೀಪ್ ಎಂಟ್ರಿ ಆಗಿದ್ದಾರೆ. ಈ ಮೂಲಕ ವಾಲ್ಮೀಕಿ ಸಮುದಾಯದ ಬಾಹುಳ್ಯವಿರುವ ಒಟ್ಟು 20 ಕ್ಷೇತ್ರಗಳಲ್ಲಿ ಸುದೀಪ್ ಅವರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಲು ಬಿಜೆಪಿ ಸಜ್ಜಾಗಿದೆ.

ಆದರೆ, ನಾನು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಸುದೀಪ್ ಸ್ಪಷ್ಟ ಪಡಿಸಿದ್ದಾರೆ. ತಾವು ಕಷ್ಟಕಾಲದಲ್ಲಿದ್ದಾಗ ತಮಗೆ ಸಹಾಯ ಮಾಡಿದ ಆತ್ಮೀಯರಿಗಾಗಿ ತಾನು ಅವರನ್ನು ಬೆಂಬಲಿಸುವುದಾಗಿ ಸುದೀಪ್ ಅವರು ಈಗಿನ ಪತ್ರಿಕಾಗೋಷ್ಠಿಕ ಮುಂಚಿತವಾಗಿ ತಮ್ಮ ಮನೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಈ ವಿಶಯವನ್ನು ಹೇಳಿದ್ದಾರೆ.

ಸುದೀಪ್ ಬಿಜೆಪಿ ಸೇರುವ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, ‘ ಸೇರ್ಕೊಳ್ಳಿ, ನಮಗೇನಂತೆ ‘ ಎಂದು ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ.

Leave A Reply

Your email address will not be published.