Dish TV: ಡಿಶ್ ಟಿವಿ ಗ್ರಾಹಕರಿಗೆ ಸಿಹಿ ಸುದ್ದಿ

Dish TV: ಕ್ರಿಕೆಟ್ ಕ್ರೇಜ್ ಯಾರಿಗಿಲ್ಲ ಹೇಳಿ!! ಮನರಂಜನೆಯ ಜೊತೆಗೆ ಐಪಿಎಲ್ (IPL)ಹಣಾಹಣಿಯ ಲೈವ್ ನೋಡಬೇಕು ಎಂದಾದರೆ, ನೀವೇನಾದರೂ ಜಿಯೋ ಬಳಕೆದಾರರಾಗಿದ್ದರೆ ಉಚಿತವಾಗಿ ಮ್ಯಾಚ್ ನೋಡಬಹುದು. ಇದೀಗ ನಡೆಯುತ್ತಿರುವ ಐಪಿಎಲ್ ಪಂದ್ಯಾವಳಿಗಳು ಇದೇ ಮೇ 29 ರವರೆಗೆ ಮುಂದುವರೆಯಲಿದೆ. ಈ ನಡುವೆ ಡಿಶ್ ಟಿವಿ (Dish TV) ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.

 

ಮುಕೇಶ್ ಅಂಬಾನಿ ಒಡೆತನದ ಜಿಯೋಸಿನಿಮಾ(Jio Cinema)ಅಪ್ಲಿಕೇಶನ್ ಐಪಿಎಲ್ 2023-27 ಸೀಸನ್ ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿದೆ. ಜಿಯೋ ಸಿನಿಮಾ ಅಪ್ಲಿಕೇಶನ್ನಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಇನ್ನು ಜಿಯೋ ಎಲ್ಲಾ IPL ಪಂದ್ಯಗಳನ್ನು 4K ಗುಣಮಟ್ಟದಲ್ಲಿ ಉಚಿತವಾಗಿ ಸ್ಟ್ರೀಮ್ ಮಾಡುವುದಾಗಿ ಹೇಳಿಕೊಂಡಿದ್ದು, ಹೀಗಾಗಿ ಜಿಯೋ ಸಿನಿಮಾ (Reliance Jio Cinema) ಆ್ಯಪ್ನಲ್ಲಿ ನೇರಪ್ರಸಾರದ ಮೂಲಕ ನೋಡಬಹುದು. ಈ ಮೊದಲು ಡಿಸ್ನಿ + ಹಾಟ್ಸ್ಟಾರ್ನಲ್ಲಿ ಮಾತ್ರ ಸ್ಟ್ರೀಮ್ ಮಾಡಲಾಗುತ್ತಿತ್ತು. ಇದಕ್ಕಾಗಿ ಚಂದಾದಾರಿಕೆ ಹೊಂದಿರುವುದು ಅವಶ್ಯಕವಾಗಿದ್ದು, ಇದರ ಜೊತೆಗೆ ಜಿಯೋ ಸಿನಿಮಾದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು 12 ವಿವಿಧ ಭಾಷೆಗಳಲ್ಲಿ ಸ್ಟ್ರೀಮ್ ಮಾಡಲಿದೆ. ಆದರೆ, ನೀವೀಗ, ಜಿಯೋ ಸಿನೆಮಾ ಆ್ಯಪ್ ಮೂಲಕ ಲೈವ್ ನೋಡಬಹುದಾಗಿದೆ.

ಡಿಶ್ ಟಿವಿ ಬಳಕೆದಾರರಿಗೆ ಸ್ಟಾರ್ ಸ್ಪೋರ್ಟ್ಸ್ (Star Sports) ಉಚಿತವಾಗಿ ನೋಡಬಹುದು. ಡಿಶ್ ಟಿವಿ ಪ್ರಸ್ತುತ ಸ್ಟಾರ್ ಸ್ಪೋರ್ಟ್ಸ್ 1 ಚಾನೆಲ್ ಅನ್ನು ಉಚಿತವಾಗಿ ಒದಗಿಸುತ್ತಿದ್ದು, ಡಿಶ್ ಟಿವಿ ಅಥವಾ ಜಿಂಗ್ ಸೂಪರ್ ಡಿ2ಎಚ್ ಬಾಕ್ಸ್ ಹೊಂದಿರುವವರು ಉಚಿತವಾಗಿ ಚಾನೆಲ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ಕೇವಲ ಏಪ್ರಿಲ್ 9 ರವರೆಗೆ ಈ ಚಾನೆಲ್ ಉಚಿತವಾಗಿರುತ್ತದೆ ಎಂಬುದನ್ನು ಬಳಕೆದಾರರು ಗಮನಿಸಬೇಕಾಗುತ್ತದೆ.

ಡಿಶ್ ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಅನ್ನು ಸೇರಿಸುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ, ಈ ಕುರಿತ ಮಾಹಿತಿ ಇಲ್ಲಿದೆ.
ಇನ್ನು ಟಿವಿಯಲ್ಲಿ ಕ್ರಿಕೆಟ್ ಮ್ಯಾಚ್ ನೋಡುವವರಿಗಾಗಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ನಲ್ಲಿ ಪಂದ್ಯಗಳನ್ನು ನೋಡಬಹುದು. ಸ್ಟಾರ್ ಸ್ಪೋರ್ಟ್ಸ್ ಚಾನಲ್ ಸೇವೆಗೆ ಸೇರಿಸಲು ಬಳಕೆದಾರರು ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಡಿಶ್ ಟಿವಿ (Dish TV) ಈಗ ಹೊಸ ಕೊಡುಗೆಯನ್ನು ಘೋಷಣೆ ಮಾಡಿದೆ. ಬಳಕೆದಾರರು ಸ್ಟಾರ್ ಸ್ಪೋರ್ಟ್ಸ್ 1 ಚಾನಲ್ ಅನ್ನು ಉಚಿತವಾಗಿ ಪಡೆಯಬಹುದು.

ನೀವು ಡಿಶ್ ಟಿವಿ ಬಳಕೆದಾರರಾಗಿದ್ದಲ್ಲಿ ನಿಮ್ಮ ಯೋಜನೆಗೆ ಸ್ಟಾರ್ ಸ್ಪೋರ್ಟ್ಸ್ ಅನ್ನು ಸೇರಿಸದಿದ್ದಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್(Star Sports Channel)ಚಾನೆಲ್ ಅನ್ನು ಸೇರಿಸಬಹುದು. ಐಪಿಎಲ್ 2023 ಅನ್ನು(IPL 2023)ಡಿಶ್ ಟಿವಿಯಲ್ಲಿ ವೀಕ್ಷಿಸಲು, ನೀವು ಎಸ್ಎಂಎಸ್ ಇಲ್ಲವೇ ಆನ್ಲೈನ್ ಮೂಲಕ ನಿಮ್ಮ ಯೋಜನೆಗೆ ಸ್ಟಾರ್ ಸ್ಪೋರ್ಟ್ಸ್ ಅನ್ನು ಸೇರಿಸಬೇಕಾಗುತ್ತದೆ. ಎಸ್ಎಮ್ಎಸ್ (Sms)ಮೂಲಕ ಡಿಶ್ ಟಿವಿಯಲ್ಲಿ ಚಾನಲ್ ಸೇರಿಸಲು ಅವಕಾಶವಿದ್ದು, ಎಸ್ಎಂಎಸ್ ಮೂಲಕ ಡಿಶ್ ಟಿವಿಯಲ್ಲಿ ಚಾನಲ್ ಅನ್ನು ಸೇರಿಸಲು, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಡಿಶ್ಟಿವಿ ಪಡೆಯಿರಿ 57575 ಗೆ ಎಸ್ಎಮ್ಎಸ್ ಕಳುಹಿಸಬೇಕಾಗುತ್ತದೆ.

ಆನ್ಲೈನ್ (Online)ಮೂಲಕ ಕೂಡ ಡಿಶ್ ಟಿವಿ ಚಾನಲ್ ಸೇರಿಸಬಹುದು. ಅದಕ್ಕಾಗಿ, ಎಸ್ಎಂಎಸ್ ಮೂಲಕ ಡಿಶ್ ಟಿವಿಯಲ್ಲಿ ಚಾನಲ್ ಅನ್ನು ಸೇರಿಸಲು, ಕೇವಲ ಡಿಶ್ಟಿವಿ.ಇನ್ಗೆ (dishtv.in) ಭೇಟಿ ನೀಡಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಬೇಕು. ಪ್ಯಾಕ್ಗಳು ಮತ್ತು ಚಾನಲ್ಗಳ ಟ್ಯಾಬ್ ಅಡಿಯಲ್ಲಿ, ಆಡ್-ಆನ್ ಪ್ಯಾಕ್ ಅನ್ನು ಕ್ಲಿಕ್ ಮಾಡಬೇಕು. ನಿಮ್ಮ ಪ್ರಸ್ತುತ ಯೋಜನೆಯ ಅಡಿಯಲ್ಲಿ ನೀವು ಈಗ ಹೊಸ ಚಾನಲ್ಗಳನ್ನು ಸೇರಿಸಲು ಅವಕಾಶವಿದೆ.

ಡಿಸ್ನಿ+ ಹಾಟ್ಸ್ಟಾರ್ (Disney+ Hotstar) ವರ್ಷ ಎಂದಿನಂತೆ ಈ ವರ್ಷವೂ ಕೂಡ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಅಪ್ಲಿಕೇಶನ್ನಲ್ಲಿ ಐಪಿಎಲ್ ಪಂದ್ಯಗಳನ್ನು ಲೈವ್ ಸ್ಟ್ರೀಮ್ ಮಾಡಬಹುದಾಗಿದೆ. ಆದರೆ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಐಪಿಎಲ್ ಪಂದ್ಯಗಳ್ನು ವೀಕ್ಷಿಸಲು ಚಂದಾದಾರಿಕೆ ಪ್ಲಾನ್ಗಳನ್ನು ಒಳಗೊಂಡಿರುತ್ತದೆ. ಈಗಾಗಲೇ ದೇಶದ ಪ್ರಮುಖ ಟೆಲಿಕಾಂ ಕಂಪೆನಿಗಳಾದ ಏರ್ಟೆಲ್, ಜಿಯೋ, ವಿ ಟೆಲಿಕಾಂಗಳು ತಮ್ಮ ಹಲವು ಪ್ರಿಪೇಯ್ಡ್ ಪ್ಲಾನ್ಗಳನ್ನು ಡಿಸ್ನಿ ಪ್ಲಸ್ ಹಾಟ್ಸ್ಟಾರ್ನ ಉಚಿತ ಚಂದಾದಾರಿಕೆಯನ್ನು ಘೋಷಣೆ ಮಾಡಿವೆ.

Leave A Reply

Your email address will not be published.