Eyeglass Sunglass Cleaning Tips : ಸನ್​ಗ್ಲಾಸ್​ ಮೇಲಿರುವ ಗೀರುಗಳಿಂದ ಸಮಸ್ಯೆಯೇ? ಇಲ್ಲೊಂದಿದೆ ಸಿಂಪಲ್‌ ಟ್ರಿಕ್ಸ್‌!

Eyeglass Sunglass Cleaning Tips : ಈಗಿನ ಅತಿಯಾದ ತಾಪಮಾನದಿಂದ (temperature) ನಾವು ಬಿಸಿಲಿನಲ್ಲಿ ಹೊರಗೆ ಹೋಗುವಾಗ ಛತ್ರಿ(umbrella) ಮತ್ತು ಸನ್ ಗ್ಲಾಸ್ ( Eyeglass Sunglass Cleaning Tips)ಹಿಡಿದುಕೊಂಡು ಹೋಗುವುದು ಉತ್ತಮವಾಗಿದೆ. ಏಕೆಂದರೆ ಸನ್​ಗ್ಲಾಸ್​ ಸೂರ್ಯನಿಂದ ಬರುವ ಹಾನಿಕಾರಕ ಕಿರಣಗಳಿಂದ ನಮ್ಮ ಕಣ್ಣುಗಳನ್ನು(eyes) ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಹಾಗೆಯೇ ಈಗಿನ ಕಾಲದಲ್ಲಿ ಈ ಸನ್ ಗ್ಲಾಸ್ ಗಳು ಸ್ಟೈಲಿಂಗ್ ನ ಒಂದು ಭಾಗವು ಆಗಿದೆ. ಆದರೆ, ಯಾವಾಗ ನಾವು ಸನ್ ಗ್ಲಾಸ್ ಅನ್ನು ಬಳಸುತ್ತೇವೋ ಹೆಚ್ಚಿನ ಸಂದರ್ಭದಲ್ಲಿ ಗೀರುಗಳು ಆರಂಭವಾಗಲು ಪ್ರಾರಂಭಿಸುತ್ತದೆ. ಸನ್ ಗ್ಲಾಸ್ ಮಾತ್ರವಲ್ಲ, ಪ್ರತಿದಿನ ನೀವು ಬಳಸುವ ಕನ್ನಡಕದಲ್ಲಿ(specs) ಕೂಡ ಗೀರುಗಳನ್ನು(scratches) ನೀವು ನೋಡಬಹುದು. ನೀವು ಎಷ್ಟು ಬಾರಿ ಬೇಕಾದರೂ ಅದನ್ನು ಸ್ವಚ್ಛಗೊಳಿಸಿದರು ಈ ಗೀರುಗಳು ಕನ್ನಡಕದಲ್ಲಿ ಕಾಣಿಸಿಕೊಳ್ಳುವುದು ತಪ್ಪೋದಿಲ್ಲ.

 

ಹೌದು. ಸನ್ ಗ್ಲಾಸ್ ನಲ್ಲಿ ಬೀಳುವ ಗೀರುಗಳು ಕಣ್ಣಿಗೆ ವಿವಿಧ ಸಮಸ್ಯೆಗಳನ್ನು (problems)ಉಂಟುಮಾಡುತ್ತವೆ. ಇದರಿಂದ ವ್ಯಕ್ತಿಯ ಕಣ್ಣು ಸರಿಯಾಗಿ ಕಾಣದೆ ಮುಂದೆ ಕಣ್ಣಿನ ನೋವನ್ನು(eye problem) ಎದುರಿಸಬೇಕಾಗಬಹುದು. ಆದರೆ ಈ ಸ್ಕ್ರಾಚ್ ಮಾರ್ಕ್​​ಗಳನ್ನು(scratch mark) ತೆಗೆದುಹಾಕಲು ಯಾವುದೇ ಮಾರ್ಗಗಳನ್ನು ತಿಳಿಯದೇ ಅನೇಕ ಮಂದಿ ಸನ್​ಗ್ಲಾಸ್ ಅನ್ನು ತೆಗೆಯಲು ಒತ್ತಾಯಿಸುತ್ತಾರೆ.

ವಾಸ್ತವವಾಗಿ ಈ ಸನ್ ಗ್ಲಾಸ್ ನ ಮೇಲೆ ಇರುವ ಗೀರನ್ನು ತೆಗೆದುಹಾಕುವ ಮಾರ್ಗ ತುಂಬಾನೇ ಸುಲಭ. ಕೆಲವು ಮನೆಯಲ್ಲಿ ಉಪಯೋಗಿಸುವ ವಸ್ತುಗಳಿಂದಲೇ ಈ ಗೀರನ್ನು(scratches) ತೆಗೆದು ಹಾಕಲು ಸಾಧ್ಯವಾಗುತ್ತದೆ. ಹಾಗಾದರೆ ಮನೆಯಲ್ಲಿ ಉಪಯೋಗಿಸುವ ಆ ಸುಲಭ ವಿಧಾನಕ್ಕೆ ಒಮ್ಮೆ ಕಣ್ಣು ಹಾಯಿಸಿ.

ಟೂತ್​ಪೇಸ್ಟ್:

ಇಷ್ಟು ಸ್ವಲ್ಪ ಟೂತ್​ಪೇಸ್ಟ್​​(toothpaste) ಈ ಗೀರು ತೆಗೆಯಬಹುದಾ? ಎಂಬ ಪ್ರಶ್ನೆ ಎಲ್ಲರಿಗೂ ಕಾಡುವಂತದ್ದೆ. ಈ ಟೂತ್ ಪೇಸ್ಟ್ ಇಂದ ಸಾಧ್ಯನಾ? ಅಂತ ನೀವು ಕೇಳಬಹುದು. ಹೌದು, ನಿಜವಾಗಿಯೂ ಸಾಧ್ಯದ ಮಾತು ಈ ಸಣ್ಣ ವಸ್ತುವಿನ ಸಹಾಯದಿಂದ, ಸನ್​ಗ್ಲಾಸ್ ಅಥವಾ ಕನ್ನಡಕದ ಗೀರುಗಳನ್ನು ತೆಗೆದುಹಾಕಲು ಸಾಧ್ಯವಿದೆ. ಇದಕ್ಕಾಗಿ ಸ್ವಚ್ಛವಾದ ಮೃದುವಾದ ಬಟ್ಟೆಯ(cloth) ಮೇಲೆ ಸ್ವಲ್ಪ ಟೂತ್​ಪೇಸ್ಟ್ ಅನ್ನು ಹಾಕಿಕೊಳ್ಳಿ. ಈಗ ಸನ್ ಗ್ಲಾಸ್ ಅಥವಾ ಕನ್ನಡಕವನ್ನು ಆ ಬಟ್ಟೆಯಿಂದ ಮೃದುವಾಗಿ ಉಜ್ಜಬೇಕು. ಯಾವುದೇ ಕಾರಣಕ್ಕೂ ಬಲತ್ಕಾರವಾಗಿ ಉಜ್ಜಬಾರದು. ಮೃದುವಾಗಿ ಉಜ್ಜುವುದರಿಂದ ಈ ಸ್ಕ್ರ್ಯಾಚ್ ಮಾರ್ಕ್​​ಗಳು ಕಣ್ಮರೆಯಾಗುತ್ತವೆ. ಜೊತೆಗೆ ಸನ್​ಗ್ಲಾಸ್ ಅನ್ನು ನೋಡುವಾಗ ಹೊಸತ್ತು ತೆಗೆದುಕೊಂಡಂತೆ ಕಾಣುತ್ತದೆ.

ಅಡಿಗೆ ಸೋಡಾ:

ಅಡಿಗೆ ಸೋಡಾ ಎಂದರೆ ಬೇಕಿಂಗ್ ಸೋಡಾ ಇದರಿಂದ ಕನ್ನಡಕದಲ್ಲಿರುವ ಗೀರುಗಳನ್ನು ತೆಗೆಯಲು ಸಹಾಯಕವಾಗುತ್ತದೆ ಅಡಿಗೆ ಸೋಡವನ್ನು ಬಳಸಿ ಅನೇಕ ಜನರು ಸನ್ ಗ್ಲಾಸ್ ನಲ್ಲಿರುವ ಗೀರುಗಳನ್ನು ತೆಗೆದು ಹಾಕುತ್ತಾರೆ. ಇದನ್ನು ಯಾವ ರೀತಿ ಬಳಸುವುದೆಂದರೆ ಅಡಿಗೆ ಸೋಡಾವನ್ನು ನೀರಿನೊಂದಿಗೆ(water) ಬೆರೆಸಿ ದಪ್ಪ ಪೇಸ್ಟ್ ಮಾಡಿಕೊಳ್ಳಿ. ಈಗ ಈ ಮಿಶ್ರಣವನ್ನು ಸನ್ ಗ್ಲಾಸ್ ಗೆ ಹಚ್ಚಿ ಮತ್ತು ಮೃದುವಾದ ಬಟ್ಟೆಯಿಂದ ಅದನ್ನು ಒರೆಸಿ. ಇದು ಸನ್ ಗ್ಲಾಸ್(sunglass) ನ ಗೀರು ಗುರುತುಗಳನ್ನು ಕ್ರಮೇಣ ತೆಗೆದುಹಾಕುತ್ತದೆ.

ವಿಂಡ್ಶೀಟ್ ವಾಟರ್ ನಿವಾರಕ:

ಕಾರನ್ನು ತೊಳೆಯುವಾಗ ಅನೇಕ ಶಾಂಪೂಗಳನ್ನು ಬಳಸುತ್ತಾರೆ. ಹಾಗೆಯೇ ಕಾರಿನ ಗ್ಲಾಸ್ ಪಾಲಿಶ್(glass polish) ಮಾಡಲು ವಿಂಡ್ಶೀಟ್ ವಾಟರ್ ನಿವಾರಕವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೆ ಸನ್ ಗ್ಲಾಸ್ ಗಳನ್ನು ಸ್ವಚ್ಛಗೊಳಿಸಲು ಇದು ತುಂಬಾ ಪರಿಣಾಮಕಾರಿಯಾಗುತ್ತದೆ. ಇದರ ಬಳಕೆಯಿಂದ ಸನ್ ಗ್ಲಾಸ್ ಕಾರಿನ ಗಾಜಿನಂತೆ ಹೊಳೆಯುತ್ತದೆ. ಹಾಗಾಗಿ ಗಾಜಿನ ಮೇಲೆ ವಿಂಡ್ ಶೀಲ್ಡ್ ವಾಟರ್ ನಿವಾರಕವನ್ನು ಅನ್ವಯಿಸಬೇಕು. ಅದಾದ ನಂತರ ಕ್ಲೀನ್ ಮೈಕ್ರೋಫೈಬರ್ (microfiber)ಅಥವಾ ಹತ್ತಿ ಬಟ್ಟೆಯಿಂದ ಇದನ್ನು ಒರೆಸಿ.

ಈ ರೀತಿಯ ಗೃಹಉಪಯೋಗಿ ವಸ್ತುಗಳಿಂದ ನೀವು ನಿಮ್ಮ ಸನ್ ಗ್ಲಾಸ್ ನ ಮೇಲೆ ಬೀಳುವ ಗೀರುಗಳಿಂದ ತಪ್ಪಿಸಿಕೊಳ್ಳಬಹುದು.

Leave A Reply

Your email address will not be published.