A doctor who loved the dead: ಈ ವೈದ್ಯ ಸಮಾಧಿಯಿಂದ ಹೊರತೆಗೆದ ಹೆಣವನ್ನೇ ಪ್ರೀತಿಸಿ, 7 ವರ್ಷ ಸಂಸಾರ ಹೂಡಿದ್ದ!
A doctor who loved the dead : ಪ್ರೀತಿ ಎಂಬುದು ಸುಂದರ ಭಾವನೆ. ಹುಡುಗ ಹುಡುಗಿಯರಿಗೆ ಪರಸ್ಪರ ಒಬ್ಬರಮೋಲೋಬ್ಬರಿಗೆ ಪ್ರೇಮಾಂಕುರವಾಗುವುದು ಸಹಜ. ಕೆಲವರು ತೋರಿಕೆಗಾಗಿ ಪ್ರೀತಿಸಿದರೆ ಇನ್ನು ಕೆಲವರು ಪ್ರಾಮಾಣಿಕವಾಗಿ ಪ್ರೀತಿಸಿ, ಶತಾಯಗತಾಯ ಪ್ರಯತ್ನದೊಂದಿಗೆ ಜೀವನ ಪೂರ್ತಿ ಋ ಪ್ರೇಮವನ್ನು ಉಳಿಸಿಕೊಂಡು ಜೊತೆಗಿರಲು ಬಯಸುತ್ತಾರೆ.
ಅಂತೆಯೇ ಇಲ್ಲೊಬ್ಬ ವ್ಯಕ್ತಿ ಇದನ್ನೂ ಮೀರಿ ವಿಚಿತ್ರವಾಗಿ ವರ್ತಿಸಿದ್ದಾನೆ. ಇವನು ಪ್ರೀತಿಸಿದ್ದು ಯಾರನ್ನು ಎಂದು ಗೊತ್ತಾದರೆ ನೀವೂ ಕೂಡ ಹೌಹಾರುತ್ತೀರ! ಇಲ್ಲಿದೆ ನೋಡಿ ಒಂದು ಇಂಟ್ರೆಸ್ಟಿಂಗ್ ಲವ್ ಸ್ಟೋರಿ
ಯುಎಸ್ಎಯ ಫ್ಲೋರಿಡಾದ ಕಾರ್ಲ್ ಟಾಂಜ್ಲರ್ ಎಂಬ ವ್ಯಕ್ತಿಯ ಪ್ರೇಮ ಕಥೆಯನ್ನೇನಾದರು ನೀವು ಕೇಳಿದರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಹೀಗೂ ಪ್ರೀತಿಸೋರು ಇರುತ್ತಾರಾ ಅಂತ ಯೋಚಿಸ್ತೀರ. ಯಾಕೆಂದರೆ ಕಾರ್ಲ್ ಪ್ರೀತಿಸಿದ್ದು, ಸಮಾಧಿಯಿಂದ (Cemetry) ಹೊರತೆಗೆದ ಮಾರಿಯಾ ಎಲೆಬಾ ಮಿಲಾಗ್ರೊ ಡಿ ಹೊಯೊಸ್ ಎಂಬ ಯುವತಿಯ ಹೆಣವನ್ನು! ಮಾತ್ರವಲ್ಲ ಬರೋಬ್ಬರಿ 7 ವರ್ಷಗಳ ಕಾಲ ಅದರ ಜೊತೆಯಲ್ಲೇ ವಾಸಿಸಿದ್ದ. ಹೌದು ಇದು ಅಚ್ಚರಿ ಅನಿಸಿದರೂ ಸತ್ಯ. ಅಂದಹಾಗೆ ಈತನನ್ನು ಡಾ.ಡೆತ್ ಎಂದು ಕೂಡಾ ಕರೆಯಲಾಗುತ್ತಿತ್ತು.
ಇಷ್ಟು ಮಾತ್ರವಲ್ಲ, ಈ ಪ್ರೇಮ ಪ್ರಕರಣದ ಹಿನ್ನೆಲೆಯನ್ನು ನೋಡಿದರೆ ನಿಮಗೆ ಇನ್ನೂ ಹಲವು ಅಚ್ಚರಿಗಳು ಕಾಣುತ್ತವೆ. ಅದೇನೆಂದರೆ ಫ್ಲೋರಿಡಾದ ಕಾರ್ಲ್ ಟಾಂಜ್ಲರ್, ಒಮ್ಮೆ ತನ್ನ ಸಮಾಧಿಯಿಂದ ಯುವ ರೋಗಿಯ (Patient) ದೇಹವನ್ನೇ ಕದ್ದಿದ್ದ. ನಂತರ ಅದರ ಮೇಲೆ ಪ್ರಯೋಗ ಮಾಡಿ ಅವಳನ್ನು ಬದುಕಿಸಲು ಪ್ರಯತ್ನಿಸಿದ್ದ. ಆ ನಿರ್ಜೀವ ದೇಹದ (Body) ಮೇಲೆ ಚಿತ್ರ ವಿಚಿತ್ರ ಪ್ರಯೋಗ ಮಾಡಿ ಜೀವ ನೀಡಲು ಯತ್ನಿಸಿದ್ದ. ಯುವತಿಯ ಮೃತದೇಹವ್ನು ಸಂರಕ್ಷಿಸಿ, ಆಕೆಯ ಕಣ್ಣುಗಳನ್ನು ಗಾಜಿನಿಂದ ಮತ್ತು ಅವಳ ಮುಖವನ್ನು ಮುಖವಾಡದಿಂದ ಬದಲಾಯಿಸಿದ್ದ. ಯುವತಿಯನ್ನು ಆತ ತನ್ನ ವಧುವೆಂದು ಪರಿಗಣಿಸಿದ್ದ. ಕೊನೆಗೆ ಸತ್ತ ಯುವತಿಯ ಕುಟುಂಬವು ಈ ವಿಚಾರವನ್ನು ಕಂಡುಹಿಡಿದು ಪೊಲೀಸರಿಗೆ ವರದಿ ಮಾಡುವ ವರೆಗೆ ಈತ ಮೃತದೇಹದೊಂದಿಗೇ ಬದುಕುತ್ತಿದ್ದ.
21 ವರ್ಷದ ಆಕೆ ಚಿಕಿತ್ಸೆಗೆಂದು ಕೀ ವೆಸ್ಟ್ ಫ್ಲೋರಿಡಾದ ಆಸ್ಪತ್ರೆಗೆ ಬಂದಿದ್ದಾಗ, ಡಾ.ಟಾಂಜರ್‌ಗೆ ಆಕೆಯನ್ನ ನೋಡಿದ ಮೊದಲ ನೋಟದಲ್ಲೇ ಪ್ರೇಮವಾಗಿತ್ತು. ಆದರೆ ಕೆಲ ದಿನಗಳ ನಂತರ ಆಕೆ ಸಾವನ್ನಪ್ಪಿದ್ದಳು. ಆದರೆ ಡಾಕ್ಟರ್‌ಗೆ ಮಾತ್ರ ಆಕೆ ಬಗ್ಗೆ ಇದ್ದ ಪ್ರೀತಿ (Love) ಕಡಿಮೆ ಆಗಿರಲಿಲ್ಲ. ಕೆಲ ಮಾಹಿತಿ ಪ್ರಕಾರ ಆ ಜೀವವಿಲ್ಲದ(A doctor who loved the dead) ದೇಹದ ಜೊತೆ ದೈಹಿಕ ಸಂಬಂಧವನ್ನು ಸಹ ಬೆಳೆಸಿ 7 ವಷ೯ಗಳ ಕಾಲ ಕಳೆದಿದ್ದ.
ಇಷ್ಟೆಲ್ಲಾ ಆದರೂ ಕಾನೂನು ಲೋಪದೋಷದಿಂದಾಗಿ ಡಾ.ಟಾಂಜ್ಲರ್ ಅವರನ್ನು ಎಂದಿಗೂ ವಿಚಾರಣೆಗೆ ಒಳಪಡಿಸಲಿಲ್ಲ. ಟ್ಯಾಂಜ್ಲರ್‌ನ ಕೆಲಸದಿಂದಾಗಿ ಆಕೆಯ ರೂಪಾಂತರಗೊಂಡ ಶವವನ್ನು ನೋಡಿ ಎಲೆನಾಳ ಕುಟುಂಬವು ಗಾಬರಿಗೊಂಡಿತು. ಆದರೆ ಡಾ.ಡೆತ್ ತಾನು ಎಲೆನಾಳಿಗೆ ಮತ್ತೆ ಜೀವಕ್ಕೆ ತರಲು ಪ್ರಯತ್ನಿಸುತ್ತಿದ್ದೇನೆ ಮತ್ತು ಅವರ ಪ್ರಯೋಗಗಳಿಂದ ಆಕೆಯ ಶವವನ್ನು ವಿರೂಪಗೊಳಿಸುವುದಿಲ್ಲ ಎಂದು ಮನವರಿಕೆ ಮಾಡಿದರು. ಕೊನೆಗೂ ಆಕೆಯ ಬದುಕಿಸುವ ಪ್ರಯತ್ನದಲ್ಲಿ ಸೋತು ಹೋಗಿದ್ದ ಡಾಕ್ಟರ್‌ನನ್ನ ಪೊಲೀಸರು ಬಂಧಿಸಿದರು
ಅಂದಹಾಗೆ ಡಾ.ಕಾರ್ಲ್ ಟಾಂಜ್ಲರ್ 1877 ರಲ್ಲಿ ಡ್ರೆಸ್ಡೆನ್‌ನಲ್ಲಿ ಜನಿಸಿದನು. ಆದರೆ ಅಂತಿಮವಾಗಿ ವಿಶ್ವ ಸಮರ 1 ರ ನಂತರ ಯುಎಸ್ಎಗೆ ತೆರಳಿದರು, ಅಲ್ಲಿ ಅವನು ಕೌಂಟ್ ಕಾರ್ಲ್ ವಾನ್ ಕೋಸೆಲ್ ಎಂಬ ಹೆಸರನ್ನು ಪಡೆದನು. ಒಂಬತ್ತು ವಿಶ್ವವಿದ್ಯಾನಿಲಯ ಪದವಿಗಳನ್ನು ಹೊಂದಿದ್ದನು.
ಇದನ್ನೂ ಓದಿ : Astro Tips: ನಿಮ್ಮ ಇಷ್ಟಾರ್ಥ ಈಡೇರಬೇಕಾ? ಆರ್ಥಿಕ ಸಮಸ್ಯೆಯಿಂದ ಮುಕ್ತಿಬೇಕಾ? ಇಲ್ಲಿದೆ ನೋಡಿ ತುಳಸಿ ಎಲೆಯಿಂದ ಪರಿಹಾರ!!
Can you be more specific about the content of your article? After reading it, I still have some doubts. Hope you can help me.