Crime News: ಮಹಿಳೆಯ ಮನೆಯಲ್ಲಿದ್ದ ಬಕೆಟ್ ಹಿಡಿದು ಆಸ್ಪತ್ರೆಗೆ ದೌಡಾಯಿಸಿದ ಪೋಲೀಸರು! ಅಸಲಿ ಕಹಾನಿ ಕೇಳಿದರೇ ಶಾಕ್ ಆಗೋದು ಗ್ಯಾರಂಟಿ!

Kerala Crime News : ಮಕ್ಕಳು (Children)ಎಂದರೇ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ!ಮಕ್ಕಳಿರಲವ್ವ ಮನೆತುಂಬ ಎಂದು ಹೆಚ್ಚಿನ ಮಂದಿ ಬಯಸುತ್ತಾರೆ. ಮಕ್ಕಳ ಲಾಲನೆ ಪಾಲನೆಯಲ್ಲಿ ಸಿಗುವ ಖುಶಿ ಬಹುಶಃ ಪೋಷಕರಿಗೆ ಮತ್ತಾವುದರಲ್ಲಿಯೂ ಸಿಗಲಾರದು. ಆದರೆ, ಹೆತ್ತ ತಾಯಿಯೇ(Mother) ಮಗುವನ್ನು ಸಾವಿನ ದವಡೆಗೆ ಸಿಲುಕುವಂತೆ (kerala Crime News)ಪ್ರಯತ್ನ ಪಟ್ಟ ಘಟನೆಯೊಂದು ಮುನ್ನಲೆಗೆ ಬಂದಿದೆ.

 

ಪ್ರತಿ ಹೆಣ್ಣಿಗೂ ತಾಯ್ತನ ಎಂಬುದು ನವೀನ ಅನುಭವ. ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ ‘ಅಮ್ಮ’ ಎಂಬ ಪದಕ್ಕೆ ಹೆಣ್ಣಿನ (Women)ಬದುಕನ್ನೇ ಸಾರ್ಥಕಗೊಳಿಸುವ ಮಾತೃ ಶಕ್ತಿ ಅಡಕವಾಗಿರುತ್ತದೆ. ಆದರೆ, ಇದಕ್ಕೆ ತದ್ವಿರುದ್ಧವಾದ ಪ್ರಕರಣ ನಡೆದಿದೆ. ತಾನೇ ಹೆತ್ತ ಮಗುವನ್ನು ಬಕೆಟ್ನಲ್ಲಿ ಇಟ್ಟು ತಾಯಿ ಪರಾರಿಯಾದ ಘಟನೆ ಕೇರಳದಲ್ಲಿ(Kerala) ಬೆಳಕಿಗೆ ಬಂದಿದೆ.

ಅರನ್ಮುಳ ಮೂಲದ ಮಹಿಳೆ ಕೊಟ್ಟಾದಲ್ಲಿನ ತನ್ನ ಮನೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ ಅತಿಯಾದ ರಕ್ತಸ್ರಾವ ( Bleeding) ಉಂಟಾದ ಪರಿಣಾಮ ಸ್ಥಳೀಯ ಆಸ್ಪತ್ರೆಗೆ ದೌಡಾಯಿಸಿದ್ದಾಳೆ. ಆಸ್ಪತ್ರೆಯಲ್ಲಿ ವೈದ್ಯರು ಮಗುವಿನ ಬಗ್ಗೆ ಕೇಳಿದಾಗ ಮಹಿಳೆ ಏನು ಉತ್ತರ ನೀಡಿಲ್ಲ ಎನ್ನಲಾಗಿದ್ದು, ಮತ್ತೆ ಮತ್ತೆ ಕೇಳಿದ ಸಂದರ್ಭ ಹೆರಿಗೆಯ ಸಮಯದಲ್ಲಿ (Delivery)ಮಗು ಮೃತಪಟ್ಟಿದೆ ಎಂಬ ಮಾಹಿತಿ ನೀಡಿದ್ದಾಳೆ.ಆದರೆ ಆಕೆಯ ಹಿರಿಯ ಮಗ ಮಗುವಿನ ಅಸಲಿ ಸ್ಥಿತಿಯನ್ನು ಆಸ್ಪತ್ರೆಯ ಅಧಿಕಾರಿಗಳಿಗೆ ತಿಳಿಸಿದ್ದರಿಂದ ಮಗುವಿನ ನೈಜ ಸ್ಥಿತಿಯ ಬಗ್ಗೆ ಬಯಲಾಗಿದೆ.

ಪ್ರಕರಣದ ಮಾಹಿತಿ ತಿಳಿದು ಚೆಂಗನ್ನೂರು ಪೊಲೀಸರು ಮಹಿಳೆಯ ಮನೆಯನ್ನು( House) ಪರಿಶೀಲನೆ ಮಾಡಿದಾಗ ಮನೆಯ ಹೊರಗಿನ ಸ್ನಾನಗೃಹದ ಒಳಗೆ ಬಕೆಟ್‌ನಲ್ಲಿ ಗಂಡು ಮಗುವನ್ನು ಬಟ್ಟೆಯಿಂದ ಮುಚ್ಚಿದ್ದ ವಿಚಾರ ಬಹಿರಂಗವಾಗಿದೆ. ತಾಯಿಯಿಂದ ತ್ಯಜಿಸಲ್ಪಟ್ಟ ನವಜಾತ ಶಿಶುವನ್ನು ಕೇರಳ ಪೊಲೀಸರು ಮಂಗಳವಾರ ರಕ್ಷಣೆ ಮಾಡಿ ಕೂಡಲೇ ತಮ್ಮ ವಶಕ್ಕೆ ಪಡೆದು ಹತ್ತಿರದ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ನೀಡುತ್ತಿದ್ದಾರೆ.

ಹೆರಿಗೆಯ ಬಳಿಕ ಪ್ರಾಥಮಿಕ ಚಿಕಿತ್ಸೆ ದೊರೆಯದೇ ಆರೋಗ್ಯ ಸಮಸ್ಯೆಯಿಂದ ಮಗು ಬಳಲುತ್ತಿದೆ ಎನ್ನಲಾಗಿದೆ. ಸದ್ಯಕ್ಕೆ ಕೊಟ್ಟಾಯಂ ವೈದ್ಯಕೀಯ ಕಾಲೇಜಿನ (Medical College) ಮಕ್ಕಳ ಆರೋಗ್ಯ ಕೇಂದ್ರದಲ್ಲಿ ನವಜಾತ ಶಿಶು ಅತ್ಯಂತ ಗಂಭೀರ ಸ್ಥಿತಿಯಲ್ಲಿದೆ ಎಂದು ತಿಳಿದುಬಂದಿದೆ. 24 ಗಂಟೆಗಳ ಕಾಲ ಮಗುವನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದ್ದು, ಆ ಬಳಿಕ ಮಗುವಿನ ಸ್ಥಿತಿಯ ಬಗ್ಗೆ ವೈದ್ಯರು (Doctors)ಮಾಹಿತಿ ನೀಡುತ್ತಾರೆ. ಆರೋಗ್ಯಯುತ ಮಗುವಿನ ತೂಕ 2.7 ಕೆಜಿ ಇರಬೇಕು. ಆದರೆ 32 ವಾರದ ಮಗು ಕೇವಲ 1.3 ಗ್ರಾಂ ತೂಕ ಹೊಂದಿದ್ದು, ಈ ಸಮಯದಲ್ಲಿ ಸದ್ಯ ಮಗುವಿಗೆ ಕಾಮಾಲೆ ಸೇರಿದಂತೆ ರೋಗಗಳನ್ನು ತಡೆಗಟ್ಟುವ ಆರೈಕೆ ನೀಡಲಾಗುತ್ತಿದೆ.

ಪೊಲೀಸರು ಮಹಿಳೆ ಮತ್ತು ಆಕೆಯ ಬೇರ್ಪಟ್ಟ ಪತಿಯ ಹೇಳಿಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಗುವಿನ ಡಿಎನ್​ಎ ಪರೀಕ್ಷೆ (DNA Test)ನಡೆಸಲು ಅಣಿಯಾಗಿದ್ದು, ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 75 ಮತ್ತು ಐಪಿಸಿ 317 ಸೆಕ್ಷನ್ ಅಡಿಯಲ್ಲಿ ಮಗುವಿನ ತಾಯಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: Kerala: ಕೇರಳ ರೈಲಿನಲ್ಲಿ ಬೆಂಕಿ ಹಚ್ಚಿದ ಕಿರಾತಕ! ಮಹಾರಾಷ್ಟ್ರದ ರತ್ನಗಿರಿಯಲ್ಲಿ ಪತ್ತೆ!!!

Leave A Reply

Your email address will not be published.