Credit Card : ಕ್ರೆಡಿಟ್ ಕಾರ್ಡ್ ಬಳಕೆದಾರರೇ ಎಚ್ಚರ : ಪಾವತಿಗೂ ಮುನ್ನ ಗಮನ ಹರಿಸಿ ಈ ಮಾಹಿತಿಯತ್ತ!
Credit card: ಇಂದಿನ ಟೆಕ್ನಾಲಜಿ ಯುಗದಲ್ಲಿ ಎಲ್ಲಾ ವಹಿವಾಟುಗಳು ಆನ್ ಲೈನ್ ಮೂಲಕವೇ ನಡೆಯುತ್ತಿದ್ದು, ಪ್ರತಿಯೊಂದು ಕೆಲಸಕ್ಕೂ ಗೂಗಲ್ ಪೇ, ಕ್ರೆಡಿಟ್ ಕಾರ್ಡ್ (credit card), ಡೆಬಿಟ್ ಕಾರ್ಡ್ ಅನ್ನೇ ಬಳಸುತ್ತಿದ್ದಾರೆ. ಆನ್‌ಲೈನ್ ಶಾಪಿಂಗ್, ನೆಟ್ ಬ್ಯಾಂಕಿಂಗ್ ಹೊರತುಪಡಿಸಿ ನಗದು ರಹಿತ ವಹಿವಾಟಿನಲ್ಲಿ ಹೆಚ್ಚಾಗಿ ಜನರು ಜನರು ಕ್ರೆಡಿಟ್ ಕಾರ್ಡ್ ಅನ್ನು ಬಳಸುತ್ತಾರೆ.
ಆದರೆ, ಇದೀಗ ವಂಚನೆಕಾರರ ಸಂಖ್ಯೆ ಏರುತ್ತಲೇ ಹೋಗಿದ್ದು, ಪಾವತಿ ಮಾಡುವಾಗ ಸಣ್ಣಪುಟ್ಟ ವಿಷಯಗಳತ್ತ ಗಮನ ಹರಿಸುವುದು ಬಹಳ ಮುಖ್ಯವಾಗಿದೆ. ಹಾಗಾಗಿ ಎಚ್ಚರ ವಹಿಸುವುದು ಬಹಳ ಅಗತ್ಯವಾಗಿದೆ. ಅವಶ್ಯಕತೆಗೆ ಅನುಗುಣವಾಗಿ ಕ್ರೆಡಿಟ್ ಕಾರ್ಡ್ ವಹಿವಾಟಿನ ಮಿತಿಯನ್ನು ಹೊಂದಿಸಬಹುದು. ಕ್ರೆಡಿಟ್ ಮಿತಿಯನ್ನು ಹೆಚ್ಚಿಸುವ ಕುರಿತಂತೆ ಬ್ಯಾಂಕ್‌ನಿಂದ ಕರೆ ಅಥವಾ ಸಂದೇಶವನ್ನು ಪಡೆದಾಗ ಅದನ್ನು ನಿರ್ಲಕ್ಷಿಸಬೇಕು.
ಕ್ರೆಡಿಟ್ ಕಾರ್ಡ್‌ನಿಂದ ಆನ್‌ಲೈನ್ ಪಾವತಿ ಮಾಡುವಾಗ ಅದರಲ್ಲಿ ಬರುವ ಸೂಚನೆಗಳನ್ನು ಓದಿನ ನಂತರ ಅನುಮತಿಸುವುದು ಉತ್ತಮ. ಇಂದಿನ ಕಾಲದಲ್ಲಿ ಪಿನ್ ನಮೂದಿಸದೆಯೇ ಪಾವತಿ ಮಾಡಬಹುದಾದ ಹಲವು ಕಾರ್ಡ್‌ಗಳು ಸಹ ಲಭ್ಯವಿವೆ. ಇದರಿಂದ ವಂಚನೆ ಸಂಭವಿಸಬಹುದು. ಹಾಗಾಗಿ ಈ ವೈಶಿಷ್ಟ್ಯವನ್ನು ಬಳಸದಿರುವುದು ಉತ್ತಮವಾಗಿರುತ್ತದೆ.
ಹಾಗೆಯೇ ವಿದೇಶಕ್ಕೆ ಪ್ರಯಾಣಿಸದಿದ್ದರೆ ಅಂತಾರಾಷ್ಟ್ರೀಯ ವಹಿವಾಟುಗಳನ್ನು ನಿಷ್ಕ್ರಿಯಗೊಳಿಸಬೇಕು. ಅನೇಕ ಬಾರಿ ಜನರು ಒಟಿಪಿ ಇಲ್ಲದೆಯೂ ಬಹಳ ಸುಲಭವಾಗಿ ವ್ಯವಹಾರಗಳನ್ನು ಮಾಡುತ್ತಾರೆ. ಅಂತಾರಾಷ್ಟ್ರೀಯ ಶಾಪಿಂಗ್ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವಾಗ ಎಚ್ಚರಿಕೆಯೂ ಬಹಳ ಮುಖ್ಯ. ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ಹಿಂಪಡೆದ ನಂತರ ಅದರ ಮೇಲೆ ಬಡ್ಡಿಯನ್ನು ಪಾವತಿಸುವುದು ಕಡ್ಡಾಯವಾಗಿದೆ. ಹಾಗಾಗಿ ಕ್ರೆಡಿಟ್ ಕಾರ್ಡ್ ಬಳಸುವುದು ಸೂಕ್ತವಾಗಿದೆ.