Kichcha Sudeep : ರಾಜಕೀಯಕ್ಕೆ ಎಂಟ್ರಿ ಕೊಟ್ಟ ಅಭಿನಯ ಚಕ್ರವರ್ತಿ, ಇಂದು ಬಿಜೆಪಿ ಸೇರೋದು ಬಹುತೇಕ ಫಿಕ್ಸ್!

Share the Article

Kichcha Sudeep : ಇತ್ತೀಚಿನ ದಿನಗಳಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಸಿನಿಮಾಗಳಲ್ಲಿ ಬ್ಯುಸಿಯಿರುವಾಗಲೇ ರಾಜಕೀಯ (Politics) ಎಂಟ್ರಿಯ ಕುರಿತು ಟಾಕ್ ಆಫ್ ದಿ ಟೌನ್ ಆಗಿದ್ದಾರು. ಸುದೀಪ್ ರಾಜಕೀಯ ರಂಗಕ್ಕೆ ಬರುವ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದ್ದು, ಕಾಂಗ್ರೆಸ್(Congress) ಕಡೆಯಿಂದ ಕಿಚ್ಚನಿಗೆ ಬಂಪರ್ ಆಫರ್ ಸಿಕ್ಕಿದೆ ಎಂದೆಲ್ಲಾ ಸುದ್ದಿ ಹಬ್ಬಿತ್ತು. ಅಂತೆಯೇ ಇದೀಗ ಸುದೀಪ್ ರಾಜಕೀಯ ಅಕಾಡಕ್ಕಿಳಿಯುವುದು ಬಹುತೇಕ ಫಿಕ್ಸ್ ಆಗಿದ್ದು, ಆದರೆ ಅವರು ಬಿಜೆಪಿ(BJP) ಸೇರಲು ಮುಂದಾಗಿದ್ದಾರೆ.

ಹೌದು, ನಟ ಕಿಚ್ಚ ಸುದೀಪ್‌ ಅವರು ಬಿಜೆಪಿಗೆ ಸೇರುತ್ತಾರೆ ಅಂತ ಹೇಳಲಾಗುತ್ತಿದೆ. ನಟ ಸುದೀಪ್ ಬಿಜೆಪಿ ಸೇರುವ ಬಗ್ಗೆ ನಾಳೆ(ಬುಧವಾರ) ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಸುದ್ದಿಗೋಷ್ಠಿ ನಡೆಸಲಿದೆ ಅಂತ ತಿಳಿದು ಬಂದಿದೆ. ಮಧ್ಯಾಹ್ನ 1.30 ಕ್ಕೆ ಸುದ್ದಿಗೋಷ್ಠಿ ನಡೆಯಲಿದ್ದು ಅಧಿಕೃತವಾಗಿ ಸುದೀಪ್ ಪಕ್ಷಕ್ಕೆ ಸೇರಲಿದ್ದಾರೆ. ಅಂದಹಾಗೆ ಸಿಎಂ ಬಸವರಾಜ ಬೊಮ್ಮಾಯಿ(CM Bommai) ನೇತೃತ್ವದಲ್ಲಿ ನಟ ಕಿಚ್ಚ ಸುದೀಪ್‌ ‌ಬಿಜೆಪಿಗೆ ಸೇರಲಿದ್ದು, ಬಿಜೆಪಿ ಪರ ಪ್ರಚಾರದ ಸ್ಟಾರ್ ಕ್ಯಾಂಪೇನ್ ಕೂಡ ಆಗಲಿದ್ದಾರೆ. ಈ ಬಗ್ಗೆ ಸುದೀಪ್ ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಅಲ್ಲದೆ ಈ ನಡುವೆ ನಗರದ ಕ್ಯಾಪಿಟಲ್ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಯಲಿದ್ದು, ಸಿಎಂ ಜೊತೆಗೆ ವೇದಿಕೆ ಸುದೀಪ್ ಹಂಚಿಕೊಳ್ಳಲಿದ್ದಾರೆ. ಆದರೆ ಪಕ್ಷ ಸೇರ್ಪಡೆ ಬಗ್ಗೆ ಮಾತುಕತೆ ಇನ್ನೂ ಅಂತಿಮವಾಗಿಲ್ಲ. ಸುದೀಪ್ ಪಕ್ಷಕ್ಕೆ ಕರೆ ತರಲು ತೆರೆಮರೆಯಲ್ಲಿ ಸಚಿವರಾದಿಯಾಗಿ ಹಲವು ನಾಯಕರ ಚರ್ಚೆ ನಡೆಸಿದ್ದಾರೆ. ಈಗಾಗಲೇ ಬಿಜೆಪಿ ನಾಯಕರು ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಪಕ್ಷ ಸೇರ್ಪಡೆ ಬಗ್ಗೆ ಸುದೀಪ್ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಪ್ರಯತ್ನ ಮುಂದುವರಿದಿದೆ ಅಂತ ಹೇಳಲಾಗುತ್ತಿದೆ.

ಅಂದಹಾಗೆ ಸುದೀಪ್ ಅವರನ್ನ ಬಿಜೆಪಿಗೆ ಕರೆ ತರಲು ಎರಡು ತಿಂಗಳಿಂದ ಪ್ರಯತ್ನ ನಡೆಯುತ್ತಿತ್ತು. ಸಿಎಂ ನೇತೃತ್ವದಲ್ಲೇ ಮಾತುಕತೆ ಆಗಿದೆ. ಒಳ್ಳೆಯ ಫಲಿತಾಂಶದ‌ ನಿರೀಕ್ಷೆ ಪಕ್ಷಕ್ಕಿದೆ. ಹೀಗಾಗಿ ಸುದೀಪ್ ಬಿಜೆಪಿ ಸೇರ್ಪಡೆ ಬಗ್ಗೆ ಬಿಜೆಪಿ ಮೂಲಗಳ‌ ಮಾಹಿತಿ ಲಭ್ಯವಾಗಿದೆ. ನಾಳೆ ಮಧ್ಯಾಹ್ನ 1-30ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅಬರು ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆ ಇದೆ. ಚುನಾವಣಾ ಪ್ರಚಾರ ಕುರಿತಾದ ಧ್ವನಿ ಸುರುಳಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಸುದೀಪ್‌ಗೆ ಆಹ್ವಾನನಾ?, ಅಥವಾ ಸುದೀಪ್‌ ಅವರು ಬಿಜೆಪಿ ಸೇರುವ ಬಗ್ಗೆ ಪತ್ರಿಕಾಗೋಷ್ಠಿನಾ? ಎಂಬುದರ ಬಗ್ಗೆ ನಾಳೆ ಉತ್ತರ ಸಿಗಲಿದೆ.

ಆರಂಭದಲ್ಲಿ ತಿಳಿಸಿದಂತೆ ಈ ಮೊದಲು ಸಿನಿಮಾರಂಗದಲ್ಲಿ ಅಗ್ರ ಸ್ಥಾನದಲ್ಲಿರುವ ಸುದೀಪ್‌ಗೆ ಕಾಂಗ್ರೆಸ್ ಪಕ್ಷದ ಕಡೆಯಿಂದ ಬಂದಿರುವ ಆಫರ್ ಬಂದಿತ್ತು ಎಂಬ ಸುದ್ದಿ ಹರಡಿತ್ತು. ನಟಿ ರಮ್ಯಾ(Ramya) ಮೂಲಕ ಕಾಂಗ್ರೆಸ್ ನಾಯಕರು ಈಗಾಗಲೇ ನಟ ಸುದೀಪ್ ಜೊತೆ ಒಂದು ಹಂತದ ಮಾತುಕತೆ ನಡೆಸಿದ್ದಾರೆ, ಆದರೆ ತಮ್ಮ ನಿರ್ಧಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ಸುದೀಪ್ ಕಡೆಯಿಂದ ಬಂದಿಲ್ಲ. ರಾಜಕೀಯ ಪ್ರವೇಶದ ಬಗ್ಗೆ ಸುದೀಪ್ ಕೂಡ ಮೌನ ವಹಿಸಿದ್ದಾರೆ ಎಂದೆಲ್ಲಾ ಬಿಂಬಿಸಲಾಗಿತ್ತು.

ಇನ್ನು ಈ ಹಿಂದೆ ಹಲವಾರು ಬಾರಿ ಸುದೀಪ್ ಅವರು ರಾಜಕೀಯ ವಿಚಾರ ಬಂದಾಗ GST ಯೋಜನೆಗಳಾದಿಯಾಗಿ ಹಲವಾರು ವಿಚಾರಗಳನ್ನು ಇಟ್ಟುಕೊಂಡು ಪರೋಕ್ಷವಾಗಿ ಬಿಜೆಪಿಯನ್ನು ಟೀಕಿಸುತ್ತಿದ್ದರು. ಇದೆಲ್ಲರದ ನಡುವೆ ಸುದೀಪ್ ಬಿಜೆಪಿ ಸೇರುತ್ತಾರೆ ಅನ್ನೋ ವಿಚಾರ ಸಾಕಷ್ಟು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: Siddaramaiah : ಸಿದ್ದರಾಮಯ್ಯ ಲೈಫ್‌ ಕುರಿತು ಯಾರೂ ಅರಿಯದ ಕೆಲವು ಇಂಟರೆಸ್ಟಿಂಗ್ ಸಂಗತಿಗಳಿವು!

Leave A Reply