Murder case : ಸುಬ್ರಹ್ಮಣ್ಯ : ಕೋಳಿ ಪದಾರ್ಥ ಖಾಲಿ ಮಾಡಿದ ಕೋಪ,ಮಗನನ್ನು ಕೊಂದ ತಂದೆ

Share the Article

Father killed son : ಸುಳ್ಯ : ಕ್ಷುಲ್ಲಕ ಕಾರಣಕ್ಕೆ ತಂದೆ ಹಾಗೂ ಮಗನ ನಡುವೆ ಉಂಟಾದ ಜಗಳ ಮಗನ ಸಾವಿನೊಂದಿಗೆಅಂತ್ಯವಾದ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಸುಳ್ಯ ತಾಲೂಕಿನ ಗುತ್ತಿಗಾರು ಮೊಗ್ರ ಏರಣಗುಡ್ಡೆ ಎಂಬಲ್ಲಿ ನಡೆದಿದೆ.

ಗುತ್ತಿಗಾರು ಮೊಗ್ರ ಏರಣಗುಡ್ಡೆಯ ಮಾತೃ ಮಜಲು ನಿವಾಸಿ ಶಿವರಾಮ(32)ಎಂಬವರೇ ತನ್ನ ತಂದೆಯಿಂದಲೇ ಕೊಲೆಗೀಡಾದ ವ್ಯಕ್ತಿ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವರಾಮನ ತಂದೆ ಶೀನ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

ಶೀನ ಮತ್ತು ಅವರ ಮಗ ಶಿವರಾಮ ಎಂಬವರ ಮಧ್ಯೆ ಮನೆಯಲ್ಲಿ ಮಾಡಿದ ಕೋಳಿ ಪದಾರ್ಥ ಖಾಲಿಯಾಗಿರುವುದಕ್ಕೆ ಸಂಬಂಧಿಸಿ ಇವರ ಮದ್ಯೆ ತಡ ರಾತ್ರಿ ಕಲಹ ನಡೆದಿದ್ದು ಕಲಹದ ಮಧ್ಯೆ ಶೀನ ಬಡಿಗೆಯಿಂದ ಮಗನ ತಲೆಗೆ (Father killed son)ಹೊಡೆದಿದ್ದಾರೆ‌.

ತಲೆಗೆ ಬಲವಾದ ಏಟು ಬಿದ್ದು ಗಂಭೀರ ಗಾಯಗೊಂಡ ಶಿವರಾಮ ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಆರೋಪಿ ಶೀನನನ್ನು ವಶಕ್ಕೆ ಪಡೆದಿದ್ದಾರೆ. ಶಿವರಾಮ ಅವರ ಮೃತ ದೇಹವನ್ನು ಕಡಬ ಸಮುದಾಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

Leave A Reply