Weekend with Ramesh : ಪ್ರಭುದೇವ ಅವರ ಮಗನಿಗೆ ಏನಾಗಿತ್ತು? ರಮೇಶ್‌ ಮಗನ ವಿಷಯ ಮಾತಾಡಿ ಎಂದರೂ ಯಾಕೆ ಮಾತಾಡಿಲ್ಲ ಪ್ರಭುದೇವ?

Prabhu Deva : ವೀಕೆಂಡ್‌ ವಿತ್‌ ರಮೇಶ್‌ ಪ್ರೋಗ್ರಾಮ್‌ನಲ್ಲಿ ಈ ಬಾರಿಯ ಎರಡನೇ ಅತಿಥಿಯಾಗಿ ಬಂದವರೇ ನಮ್ಮ ಕನ್ನಡಿಗ, ಭಾರತದ ಮೈಕಲ್‌ ಜಾಕ್ಸನ್‌ ಎಂದೇ ಕರೆಯಲ್ಪಡುವ ಪ್ರಭುದೇವ ಅವರು. ಶನಿವಾರದ ಎಪಿಸೋಡಿನಲ್ಲಿ ಅವರ ಬಾಲ್ಯ, ತಂದೆ ತಾಯಿ, ಸ್ನೇಹಿತರು ಇದರ ಕುರಿತು ಮಾಹಿತಿಯನ್ನೊಳಗೊಂಡಿತ್ತು. ಭಾನುವಾರದಂದು ಅವರ ಚಿತ್ರರಂಗದ ಒಡನಾಟ, ಹೆಸರು , ಪ್ರಸಿದ್ಧಿ ಇವೆಲ್ಲದರ ಮಾಹಿತಿ ನಮಗೆ ತೋರಿಸಿಕೊಟ್ಟಿದ್ದಾರೆ. ಇದರಲ್ಲಿ ಒಂದು ಮುಖ್ಯವಾಗಿ ಕಾಣ ಸಿಗುವ ವಿಷಯವೇ ಪ್ರಭುದೇವ ಅವರ ಮಗ ವಿಶಾಲ್‌ ಸಾವಿನ ಕುರಿತು. ಬನ್ನಿ ಇದರ ಬಗ್ಗೆ ತಿಳಿದುಕೊಳ್ಳೋಣ.

ವೀಕೆಂಡ್‌ ವಿತ್‌ ರಮೇಶ್‌ ಪ್ರೋಗ್ರಾಮ್‌ ನಲ್ಲಿ(Weekend with Ramesh Programme) ಪ್ರಭುದೇವ ಅವರ ಆಪ್ತ ಗೆಳೆಯರಾದ ಪ್ರಕಾಶ್‌ ರಾಜ್‌ ಅವರು ಮಾತನಾಡುವಾಗ ಪ್ರಭುದೇವ ಅವರ ಮಗನ ವಿಷಯ ಪ್ರಸ್ತಾಪ ಮಾಡತ್ತಾರೆ. ರಮೇಶ್‌ ಅರವಿಂದ್‌ ಅವರು ಕೂಡಾ ಈ ಬಗ್ಗೆ ಕೇಳುತ್ತಾರೆ. ಆದರೆ ಪ್ರಭುದೇವ ಅವರು ಎಷ್ಟೊಂದು ಭಾವುಕರಾಗಿದ್ದರೆಂದರೆ ಅವರು ಆ ಬಗ್ಗೆ ಮಾತಾಡೋಕೆ ಇಷ್ಟ ಪಡುವುದಿಲ್ಲ. ಹಾಗಾದರೆ ಅಂತದ್ದೇನಾಗಿತ್ತು ಪ್ರಭುದೇವ ಅವರ ಮಗನಿಗೆ?

1995 ರಲ್ಲಿ ಪ್ರಭುದೇವ (Prabhu Deva) ಅವರು ರಾಮಲತಾ ಎಂಬವರನ್ನು ಮದುವೆಯಾಗುತ್ತಾರೆ. 1994 ರಲ್ಲಿ ಕಾದಲನ್‌ ಎಂಬ ಸಿನಿಮಾದಲ್ಲಿ ನಟಿಸಿದ್ದರು ಪ್ರಭುದೇವ ಅವರು. ಇದು ಬಹಳ ದೊಡ್ಡ ಮಟ್ಟಿನ ಹಿಟ್‌ ಆಗುತ್ತೆ ಸಿನಿಮಾ. ಅದರ ಮಾರನೇ ವರ್ಷವೇ ಪ್ರಭುದೇವ ಅವರು ಮದುವೆಯಾಗುತ್ತಾರೆ. ಮದುವೆಯಾದ ನಂತರ ಪ್ರಭುದೇವ ಅವರಿಗೆ ಮೂವರು ಗಂಡು ಮಕ್ಕಳಾಗುತ್ತಾರೆ. ಅದರಲ್ಲಿ ಮೊದಲನೇ ಮಗ ವಿಶಾಲ್‌. ಈ ಮಗನೇ ಈಗ ವಿಧಿವಶರಾಗಿರುವುದು.

ಆರಂಭದಲ್ಲಿ ಮನೆಯವರ ಗಮನಕ್ಕೆ ಈ ಬ್ಲಡ್‌ಕ್ಯಾನ್ಸರ್‌ ಇರುವುದು ಗೊತ್ತಿರುವುದಿಲ್ಲ. ಆಮೇಲೆ ಬ್ಲಡ್‌ ಕ್ಯಾನ್ಸರ್‌ಗೆ ಸಂಬಂಧಪಟ್ಟ ಒಂದೊಂದೇ ಲಕ್ಷಣಗಳು ಗೋಚರಿಸೋಕೆ ಗೊತ್ತಾಯ್ತು. ನಂತರ ಆಸ್ಪತ್ರೆಯಲ್ಲಿ ಚೆಕ್‌ ಮಾಡಿಸಿದಾಗ ಬ್ಲಡ್‌ ಕ್ಯಾನ್ಸರ್‌ ಇರುವುದು ಗೊತ್ತಾಯಿತು. ಮಗನಿಗೆ ಈ ರೋಗ ಇರುವುದು ಗೊತ್ತಾಗಿ ಪ್ರಭುದೇವ ಅವರ ಪರಿಸ್ಥಿತಿ ಊಹೆ ಮಾಡುವುದಕ್ಕೂ ಕಷ್ಟವಾಗಿತ್ತು. ತನ್ನ ಮಗನಿಗೆ ಬ್ಲಡ್‌ ಕ್ಯಾನ್ಸರ್‌ ಎಂದಾಗ ಯಾವುದೇ ತಂದೆ ತಾಯಿಗೆ ಕೂಡಾ ತಡೆದುಕೊಳ್ಳೋದಕ್ಕೆ ಆಗುವುದಿಲ್ಲ. ಹೀಗಾಗಿ ಪ್ರಭುದೇವ ಅವರು ಎಲ್ಲೆಲ್ಲಿ ಅತ್ಯದ್ಭುತ, ಅತ್ಯುತ್ತಮ ಚಿಕಿತ್ಸೆ ಕೊಡಿಸಬಹುದೋ ಅಲ್ಲೆಲ್ಲ ಚಿಕಿತ್ಸೆ ಕೊಡಿಸುತ್ತಾರೆ ತಮ್ಮ ಮಗನಿಗೆ.

ಆದರೆ ಒಂದು ದಿನ ಡಾಕ್ಟರ್‌ ಹೇಳುತ್ತಾರಂತೆ, ಮಗನನ್ನು ಬದುಕಿಸೋಕೆ ಆಗುವುದಿಲ್ಲ, ಇದು ಲಾಸ್ಟ್‌ ಸ್ಟೇಜ್‌ನಲ್ಲಿದೆ ಎಂದು. ಹೆತ್ತವರಿಗೆ ಹೇಗಾಗಬೇಡ ಹೇಳಿ. ಹೆತ್ತ ಮಗನ ಸಾವು ಇನ್ನೇನು ಕೆಲವೇ ದಿನದಲ್ಲಿ ಆಗುತ್ತೆ ಎನ್ನುವಾಗ ಯಾವ ತಂದೆ ತಾಯಿಗಳಿಗೂ ಇದನ್ನು ಕಲ್ಪನೆ ಮಾಡುವುದಕ್ಕೂ ಆಗುವುದಿಲ್ಲ. ಹಿರಿಯರು ಒಂದು ಮಾತು ಹೇಳುತ್ತಾರೆ, ʼ ಪುತ್ರ ಶೋಕಂ, ನಿರಂತರಂʼ ಎಂದು. ಇದೇ ಪ್ರಭುದೇವ ಬಾಳಲ್ಲಿ ನಡೆದಿರುವುದು. ತಮ್ಮ ಕಣ್ಣೆದುರೇ ಮಕ್ಕಳನ್ನು ಕಳೆದು ಕೊಳ್ಳುವ ನೋವು ನಿಜಕ್ಕೂ ಯಾವತ್ತಿಗೂ ಹೇಳುವುದಕ್ಕೆ ಸಾಧ್ಯವಿಲ್ಲ. ಅನುಭವಿಸಿದವರಿಗೆ ಮಾತ್ರ ಅದರ ನೋವು ಗೊತ್ತಿರುತ್ತದೆ.

ಮಗನ ಕೊನೆಯ ಆಸೆಯನ್ನು ಪೂರೈಸಿ ಎಂದು ಡಾಕ್ಟರ್‌ ಹೇಳಿರುತ್ತಾರೆ. ಮಗನ ಕೊನೆಯ ಆಸೆ ಏನೆಂದರೆ ಸ್ವಿಟ್ಸರ್‌ಲೆಂಡ್‌ ಆ ಪ್ರದೇಶವನ್ನು ನೋಡಬೇಕೆಂಬ ಆಸೆ ಇರುತ್ತದೆ. ಹಾಗಾಗಿ ಮಗನ ಕೊನೆಯ ಆಸೆಯನ್ನೂ ಪೂರೈಸುತ್ತಾರೆ. ಅಷ್ಟು ಮಾತ್ರವಲ್ಲದೇ ಮಗನ ಕೊನೆಯ ದಿನಗಳಲ್ಲಿ ಮಲೇಶಿಯಾದಲ್ಲಿ ಪ್ರಭುದೇವ ಶೂಟಿಂಗ್‌ ಮಾಡುತ್ತಿದ್ದರು. ಆ ಶೂಟಿಂಗ್‌ ಸೆಟ್‌ಗೂ ಕರೆದುಕೊಂಡು ಪ್ರಭುದೇವ ಹೋಗಿದ್ದರಂತೆ.

ಅಲ್ಲಿಂದ ಬಂದ ಮೇಲೆ ಮತ್ತೊಮ್ಮೆ ಟ್ರೀಟ್ಮೆಂಟ್‌ ಕೂಡಾ ಕೊಡಿಸಿದ್ದಾರೆ. ಆದರೆ ಟ್ರೀಟ್ಮೆಂಟ್‌ ಅವರ ಮಗ ವಿಶಾಲ್‌ ಸ್ಪಂದಿಸಲಿಲ್ಲ. ಅಂತಿಮವಾಗಿ ಅವರ ಹಿರಿಯ ಮಗ ವಿಶಾಲ್‌ನನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ನಟ ಪ್ರಭುದೇವ ಅವರಿಗೆ ಎದುರಾಗುತ್ತೆ. ಈ ಸಂದರ್ಭದಲ್ಲೇ ಅವರು ಈ ನಟನಾ ರಂಗದಿಂದ ಸ್ವಲ್ಪ ಸಮಯ ದೂರ ಇರುತ್ತಾರೆ. ಈ ಸಮಯದಲ್ಲಿ ಪ್ರಭುದೇವ ಅವರು ಚಿತ್ರರಂಗದಲ್ಲಿ ಪೀಕ್‌ನಲ್ಲಿದ್ದರು. ಬಹಳ ಬೇಡಿಕೆಯ ಕೊರಿಯೋಗ್ರಾಫರ್‌ ಆಗಿದ್ದರು. ಆದರೆ ಮಗನ ಸಾವು ಅವರನ್ನು ಜರ್ಜರಿತರನ್ನಾಗಿ ಮಾಡಿದ್ದರಿಂದ ತಾತ್ಕಾಲಿಕವಾಗಿ ಬ್ರೇಕ್‌ ತಗೊಳ್ಳುತ್ತಾರೆ ಪ್ರಭುದೇವ ಅವರು.

ಅದಕ್ಕೇ ಹೇಳುವುದು ಬದುಕು ಯಾವಾಗ ಏನು ಎತ್ತ ಎಂದು. ಬದುಕು ಹೇಗೆ ಕೊಡುತ್ತಾ ಹೋಗುತ್ತದೆ ಹಾಗೇ ನಾವು ಸ್ವೀಕರಿಸುತ್ತಾ ಹೋಗಬೇಕು. ಪ್ರಭುದೇವ ಬದುಕಿನಲ್ಲಿ ಕೂಡಾ ಇಂತಹದೊಂದು ಆಯಿತು. ಇದಾದ ನಂತರ ಅವರ ಕುಟುಂಬದಲ್ಲಿ ಕೂಡಾ ಕೆಲವೊಂದು ಏರುಪೇರಾಗುತ್ತದೆ. ಮಗನನ್ನು ಕಳೆದುಕೊಂಡ ನಂತರ ಪ್ರಭುದೇವ ಪತ್ನಿ ಹಾಗೂ ಪ್ರಭುದೇವ ನಡುವೆ ಭಿನ್ನಾಭಿಪ್ರಾಯ ಬರೋಕೆ ಶುರು ಆಗುತ್ತದೆ. ಇದೇ ಸಂದರ್ಭದಲ್ಲಿ ನಟಿ ನಯನತಾರಾ ಜೊತೆ ಲಿವಿಂಗ್‌ ಇನ್‌ ರಿಲೇಷನ್‌ಶಿಪ್‌ನಲ್ಲಿರುತ್ತಾರೆ. ಈ ವಿಷಯ ಪತ್ನಿಗೂ ಗೊತ್ತಾಗುತ್ತದೆ. ಹಾಗಾಗಿ ಗಂಡ ಹೆಂಡತಿ ಗಲಾಟೆ ಬೇರೆ ಬೇರೆ ರೂಪ ಪಡೆಯೋಕೆ ಶುರು ಆಗುತ್ತದೆ.

ಪ್ರಭುದೇವ ಅವರ ಪತ್ನಿ ರಾಮಲತಾ ಅವರಿಗೆ ತಮಿಳುನಾಡಿನ ಮಹಿಳಾ ಸಂಘಟನೆಯಿಂದ ಬೆಂಬಲ ದೊರೆಯುತ್ತದೆ. ಅಂತಿಮವಾಗಿ 2011 ರಲ್ಲಿ ಪ್ರಭುದೇವ ಅವರು ತಮ್ಮ ಪತ್ನಿಯಿಂದ ವಿಚ್ಛೇದನ ಪಡೆಯುತ್ತಾರೆ. ನಂತರ ಮತ್ತೆ ನಯನತಾರಾ ಜೊತೆ ಲಿವಿಂಗ್‌ ಇನ್‌ ರಿಲೇಷನ್‌ಶಿಪ್‌ ಮುಂದುವರಿಯುತ್ತದೆ. ಆದರೆ ನಂತರ ನಯನ ಸಿಂಬು ಜೊತೆ ಕಾಣಿಸಿಕೊಳ್ಳುತ್ತಾರೆ. ಅನಂತರ ಮತ್ತೊಮ್ಮೆ ಪ್ರಭುದೇವ ಒಬ್ಬಂಟಿಯಾಗುತ್ತಾರೆ. ಈ ಸಂದರ್ಭದಲ್ಲಿ ಪ್ರಭುದೇವ ಅವರು ತಮ್ಮ ಪತ್ನಿ ರಾಮಲತಾ ಅವರ ಜೊತೆ ಮತ್ತೆ ಜೊತೆಯಾಗುತ್ತಾರೆ ಎಂಬ ಮಾತು ಕೂಡಾ ಕೇಳಿಬಂದಿತ್ತು. ಆದರೆ ಇದೆಲ್ಲ ಯಾವುದೂ ಕೂಡಾ ನಡೆದಿಲ್ಲ.

ಅಂತಿಮವಾಗಿ ಮುಂಬೈ ಮೂಲದ ಫಿಸಿಯೋಥೆರಪಿಸ್ಟ್‌ ಹಿಮಾನಿ ಅವರನ್ನು ಪ್ರಭುದೇವ ಮತ್ತೊಮ್ಮೆ ಮದುವೆಯಾಗುತ್ತಾರೆ. ಇದೀಗ ಸುಖೀ ಸಂಸಾರ ನಡೆಸುತ್ತಿದ್ದಾರೆ. ಹಾಗೂ ತಮ್ಮ ಮೊದಲ ಹೆಂಡತಿಯ ಇಬ್ಬರು ಮಕ್ಕಳೊಂದಿಗೆ ಕೂಡಾ ಪ್ರಭುದೇವ ಚೆನ್ನಾಗಿ ಇದ್ದಾರೆ. ಇದೀಗ ಪ್ರಭುದೇವ ಸಿನಿಮಾ ಇಂಡಸ್ಟ್ರಿಯಲ್ಲಿ, ಇಡೀ ಭಾರತ ಗೌರವಿಸುವ ರೀತಿಯಲ್ಲಿ ಇದ್ದಾರೆ. ಕನ್ನಡ ಗೊತ್ತಿದ್ದರೂ ಕನ್ನಡ ಗೊತ್ತಿಲ್ಲ ಎಂಬ ರೀತಿಯಲ್ಲಿ ಇರುವ ಕೆಲವು ಮಂದಿಯಲ್ಲಿ ಪ್ರಭುದೇವ ಅವರಿಗೆ ಕನ್ನಡ ಅಷ್ಟೊಂದು ಗೊತ್ತಿಲ್ಲದಿದ್ದರೂ, ವೀಕೆಂಡ್‌ ವಿತ್‌ ರಮೇಶ್‌ ಪ್ರೋಗ್ರಾಮ್‌ನಲ್ಲಿ ಕನ್ನಡದಲ್ಲೇ ಮಾತಾಡಿ ಎಲ್ಲರ ಮನ ಗೆದಿದ್ದಾರೆ.

ಇದನ್ನೂ ಓದಿ: Weekend with Ramesh: ಡಾಕ್ಟರ್ ಬ್ರೋ ಬರೋ ವಿಷ್ಯ ಹೇಳಿದ ರಮೇಶ್ ವೈರಲ್ !

Leave A Reply

Your email address will not be published.